ಸಮಾಜ ಸೇವಕ ಸೂರ್ಯಕಾಂತ್ ಪಾಟೀಲ ನಿಧನ
ಸಮಾಜ ಸೇವಕ ಸೂರ್ಯಕಾಂತ್ ಪಾಟೀಲ ನಿಧನ
ಪಾಳಾ: ಸಮಾಜ ಸೇವಕ ಹಾಗೂ ಮಾಜಿ ಗ್ರಾಮ ಪಂಚಾಯಿತಿ ಸದಸ್ಯರಾದ ಸೂರ್ಯಕಾಂತ್ ಬಸವರಾಜ್ ಪೊಲೀಸ್ ಪಾಟೀಲ (52) ಅವರು ಅನಾರೋಗ್ಯದಿಂದ ಬಳಲುತ್ತಿದ್ದು ಇಂದು ಮಧ್ಯಾಹ್ನ ನಿಧನರಾದರು.
ಮೃತರು ಎರಡು ಹೆಣ್ಣುಮಕ್ಕಳು ಮತ್ತು ಒಂದು ಗಂಡು ಮಗನೊಂದಿಗೆ ಅಪಾರ ಬಂಧು ಬಳಗವನ್ನು ಬಿಟ್ಟು ಅಗಲಿದ್ದಾರೆ. ಅವರ ಅಂತ್ಯಕ್ರಿಯೆ ದಿನಾಂಕ 20-04-2026 ಸೋಮವಾರ ಬೆಳಗ್ಗೆ 11 ಗಂಟೆಗೆ ಪಾಳಾ ಗ್ರಾಮದ ಸ್ವಂತ ಜಮೀನಿನಲ್ಲಿ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿದ್ದಾರೆ.
