"ಅಯ್ಯನ ಕಥೆಗಳು" ಕೃತಿ ಲೋಕಾರ್ಪಣೆ ಜೂನ್ 24ರಂದು
"ಅಯ್ಯನ ಕಥೆಗಳು" ಕೃತಿ ಲೋಕಾರ್ಪಣೆ ಜೂನ್ 24ರಂದು
ಕಲಬುರಗಿ : ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಹೈದರಾಬಾದ್ ವಿಮೋಚನಾ ಹೋರಾಟಗಾರ ಹಿರಿಯ ಸಾಹಿತಿ ಮಹಾದೇವಪ್ಪ ಕಡೇಚೂರ್ ಅವರ ಪ್ರಥಮ ಪುಣ್ಯ ಸ್ಮರಣೆಯ ದಿನ ಜೂನ್ 24 ರಂದು ಅವರ ಸಣ್ಣ ಕತೆಗಳ ಸಂಕಲನ
" ಅಯ್ಯನ ಕಥೆಗಳು" ಕೃತಿ ಲೋಕಾರ್ಪಣೆ ಮಾಡಲಾಗುವುದು.
ಕಲಬುರಗಿಯ ನಾಗನಹಳ್ಳಿ ವೃತ್ತದ ಹೋಟೆಲ್ ಬೃಂದಾವನ ಗ್ರ್ಯಾಂಡ್ ನ ಬಲದೇವ್ ಬ್ಯಾಂಕ್ವೆಟ್ ಹಾಲ್ ನಲ್ಲಿ ಜೂನ್ 24ರಂದು ಮಧ್ಯಾಹ್ನ 11.30 ಕ್ಕೆ ಶ್ರೀಮತಿ ಬಾಲಮ್ಮ ಮಹಾದೇವಪ್ಪ ಕಡೇಚೂರ್ ಪ್ರತಿಷ್ಠಾನದ ಆಶ್ರಯದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಕೃತಿಯನ್ನು ಸಮಗ್ರ ಶಿಕ್ಷಣ ಕರ್ನಾಟಕ ಶಾಲಾ ಶಿಕ್ಷಣ ನಿರ್ದೇಶಕರಾದ ಡಾ.ಸತೀಶ್ ಕುಮಾರ್ ಎಸ್. ಹೊಸಮನಿ ಲೋಕಾರ್ಪಣೆ ಮಾಡಲಿದ್ದಾರೆ. ಕರ್ನಾಟಕ ರಾಜ್ಯ ಪತ್ರಾಗಾರ ಮತ್ತು ಗ್ಯಾಸೆಟಿಯರ್ ಇಲಾಖೆಯ ಕಲಬುರಗಿ ವಿಭಾಗದ ಉಪನಿರ್ದೇಶಕರಾದ ವೀರಶೆಟ್ಟಿ ಬಿ ಗಾರಂಪಳ್ಳಿ ಕೃತಿ ಪರಿಚಯ ಮಾಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಡಾ.ಪಿ.ಎಸ್ ಶಂಕರ್ ಹಾಗೂ ಡಾ.ಸ್ವಾಮಿರಾವ್ ಕುಲಕರ್ಣಿ ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿಯ ಕನ್ನಡ ಸಲಹಾ ಸಮಿತಿ ಸದಸ್ಯರಾದ ಡಾ.ಜಯದೇವಿ ಗಾಯಕವಾಡ ಅಧ್ಯಕ್ಷತೆ ವಹಿಸಲಿದ್ದಾರೆ.
ಸಾಹಿತ್ಯಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಪ್ರತಿಷ್ಠಾನದ ಅಧ್ಯಕ್ಷರಾದ ವೆಂಕಟೇಶ್ ಎಂ ಕಡೇಚೂರ್ ಹಾಗೂ ಸದಸ್ಯರಾದ ಡಾ.ರಾಜೇಶ್ ಎಂ ಕಡೇಚೂರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
