ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ನೆರವಿನ ಬೃಂದಾವನ ಗ್ರ್ಯಾಂಡ್ ಶುಭಾರಂಭ ಏ. 19ರಂದು
ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ನೆರವಿನ ಬೃಂದಾವನ ಗ್ರ್ಯಾಂಡ್ ಶುಭಾರಂಭ ಏ. 19ರಂದು
ಕಲಬುರಗಿ : ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ನೆರವಿನಿಂದ ನೂತನವಾಗಿ ನಿರ್ಮಾಣಗೊಂಡ "ಬೃಂದಾವನ ಗ್ರ್ಯಾಂಡ್" ವಸತಿ ಮತ್ತು ಉಪಹಾರ ಗೃಹ ಏ. 19 ರಂದು ಉದ್ಘಾಟನೆಗೊಳ್ಳಲಿದೆ.
ಕಲಬುರಗಿಯ ನಾಗನಹಳ್ಳಿ ವೃತ್ತದ ರಿಂಗ್ ರಸ್ತೆಯ ಸಮೀಪ ನೂತನವಾಗಿ ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಯೋಜನೆಯಡಿಯಲ್ಲಿ ಕೆ ಆರ್ ಐ ಡಿ ಎಲ್ ನಿವೃತ್ತ ಇಂಜಿನಿಯರ್ ಬಿ. ವಿಜಯಕುಮಾರ್ ಅವರು ನಿರ್ಮಾಣ ಮಾಡಿದ "ಕಡೇಚೂರ್ ಗ್ರೂಪ್ ಹೋಟೆಲ್ಸ್" ನವರ ವಸತಿ ಗೃಹ ಮತ್ತು ರಾಜ್ ರಸೋಯಿ ಪೂರ್ಣ ಸಸ್ಯಾಹಾರಿ ಹೋಟೆಲ್ ಎಪ್ರಿಲ್ 19ರಂದು ಶುಭಾರಂಭಗೊಳ್ಳಲಿದೆ. ಶ್ರೀ ಶರಣಬಸವೇಶ್ವರ ಸಂಸ್ಥಾನದ ಪೂಜ್ಯಶ್ರೀ ದೊಡ್ಡಪ್ಪ ಎಸ್ ಅಪ್ಪ ಅವರು ದೀಪ ಬೆಳಗಿಸಿ ಉದ್ಘಾಟನೆ ನೆರವೇರಿಸಲಿದ್ದಾರೆ. ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲೂಕು ಕರದಾಳ ಬ್ರಹ್ಮ ಶ್ರೀ ನಾರಾಯಣ ಗುರು ಶಕ್ತಿ ಪೀಠದ ಡಾ. ಪ್ರಣವಾನಂದ ಸ್ವಾಮೀಜಿಯವರು ಆಶೀರ್ವಚನ ನೀಡಲಿದ್ದಾರೆ. ಬೆಂಗಳೂರಿನ ಆರ್ಟ್ ಕಿಂಗ್ಸ್ ರಿಯಲಿಸ್ ಹೈವೇ ಡಿಸೈನ್ ಇಂಜಿನಿಯರ್ ಬಿ ಶಶಾಂಕ್ ವಿಜಯಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಪಾಲುದಾರರಾದ ವೆಂಕಟೇಶ್ ಎಂ ಕಡೇಚೂರ್, ಡಾ. ರಾಜೇಶ್ ಎಂ ಕಡೇಚೂರ್, ಕೆ ಆರ್ ಐ ಡಿ ಎಲ್ ನಿವೃತ್ತ ಇಂಜಿನಿಯರ್ ಬಿ.
ವಿಜಯಕುಮಾರ್, ಹಿರಿಯ ಉದ್ಯಮಿ ಸತೀಶ್ ವಿ. ಗುತ್ತೇದಾರ್, ಪುಣೆ ಮಹಾನಗರ ಪಾಲಿಕೆಯ ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷರಾದ ಶ್ರೀನಾಥ್ ಭೀಮಾಲೆ, ಮತ್ತಿತರರು ಪಾಲ್ಗೊಳ್ಳಿದ್ದಾರೆ ಎಂದು ಕಡೇಚೂರ್ ಗ್ರೂಪ್ ಆಫ್ ಹೋಟೆಲ್ಸ್ ನ ಆಡಳಿತ ನಿರ್ದೇಶಕರಾದ ಡಾ. ಸದಾನಂದ ಪೆರ್ಲ ತಿಳಿಸಿದ್ದಾರೆ.
ಕರ್ನಾಟಕದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಎರಡನೇ ದರ್ಜೆ ನಗರಗಳಲ್ಲಿ ಕಲಬುರಗಿ ಕೂಡಾ ಒಂದಾಗಿದ್ದು ಪ್ರವಾಸೋದ್ಯಮ ಇಲಾಖೆಯು ಕಲ್ಯಾಣ ಕರ್ನಾಟಕ ಭಾಗದಲ್ಲಿ ಉತ್ತಮವಾದ ವಸತಿ ಗೃಹ ಮತ್ತು ಹೋಟೆಲ್ ಉದ್ಯಮವನ್ನು ಬೆಳೆಸಲು ಪ್ರೋತ್ಸಾಹ ನೀಡುತ್ತಿದೆ. ಇದರ ಅಂಗವಾಗಿ ಅತ್ಯಾಧುನಿಕ ಸುಸಜ್ಜಿತ 33 ಕೊಠಡಿಗಳ ಹೋಟೆಲ್ ನಿರ್ಮಾಣಕ್ಕೆ ಮಂಜೂರಾತಿ ನೀಡಿ ಆರ್ಥಿಕ ನೆರವು ನೀಡಿದೆ. ಅತ್ಯಂತ ವಿಶಾಲ ಹಾಗೂ ಟ್ರಾಫಿಕ್ ಮುಕ್ತ ಹಾಗೂ ಪ್ರಕೃತಿಯ ಮಡಿಲಲ್ಲಿ ನಿರ್ಮಾಣಗೊಂಡ ವಸತಿ ಗೃಹವು ಈ ಭಾಗದ ಪ್ರವಾಸೋದ್ಯಮ ಕ್ಷೇತ್ರಕ್ಕೆ ಉತ್ತಮ ಕೊಡುಗೆಯಾಗಿ ತಲೆ ಎತ್ತಲಿದೆ ಎಂದು ಡಾ. ಪೆರ್ಲ ತಿಳಿಸಿದ್ದಾರೆ.
