ಸರ್ಕಾರಿ ಶಾಲೆ ಮಕ್ಕಳ ಭವಿಷ್ಯ ಉಜ್ವಲವಾಗಲಿ- ದೀಪಕ್ ಆರ್

ಸರ್ಕಾರಿ ಶಾಲೆ ಮಕ್ಕಳ ಭವಿಷ್ಯ ಉಜ್ವಲವಾಗಲಿ- ದೀಪಕ್ ಆರ್

ಸರ್ಕಾರಿ ಶಾಲೆ ಮಕ್ಕಳ ಭವಿಷ್ಯ ಉಜ್ವಲವಾಗಲಿ- ದೀಪಕ್ ಆರ್

ಸರ್ಕಾರಿ ಶಾಲೆಗಳ ಮಕ್ಕಳು ಬೆಳೆದು ಉನ್ನತ ಹುದ್ದೆಗೆ ಏರಬೇಕು. ಈ ದೇಶದ ಸತ್ಪ್ರಜೆಯಾಗಿ ದೇಶಕ್ಕೆ ಉತ್ತಮವಾದ ಸೇವೆಗಳನ್ನು ಕೊಡುವ ದೊಡ್ಡ ಅಧಿಕಾರಿಗಳಾಗಿ ಬೆಳೆಯಬೇಕು. ಅವರಿಗೆ ಬೇಕಾಗುವ ಸಣ್ಣಪುಟ್ಟ ಸಹಾಯವನ್ನು ಮಾಡಲು ವಿಶೇಷವಾಗಿ ಸರ್ಕಾರಿ ಶಾಲೆಗಳಿಗೆ ಮತ್ತು ಅಲ್ಲಿನ ಮಕ್ಕಳಿಗೆ ಪೂರಕವಾಗಿರುವ ವಸ್ತುಗಳನ್ನು ಕೊಡಲು ನಾವು ಸದಾ ಪ್ರಯತ್ನವನ್ನು ಮಾಡುತ್ತೇವೆ ಎಂದು ನೋವೆಲ್ ಹೋಪ್ ಫೌಂಡೇಶನ್ ನ ಸಿ ಎಸ್ ಆರ್ ಎಕ್ಸಿಕ್ಯೂಟಿವ್ ಆಗಿರುವ ದೀಪಕ್ ಆರ್.ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೆಕ್ಕರಸಾವಳಗಿ ಶಾಲೆಯ 225 ಮಕ್ಕಳಿಗೆ ಉಚಿತ ಬ್ಯಾಗ್ ವಿತರಿಸಿ ಈ ಮಾತುಗಳನ್ನು ಹೇಳಿದರು. ಮುಂಬರುವ ದಿನಗಳಲ್ಲಿ ಇಲ್ಲಿನ ಮಕ್ಕಳಿಗೆ ಉಚಿತವಾಗಿ ಸ್ಟೀಲ್ ಬಾಟಲ್ ಮತ್ತು ಪ್ಲೇಟ್ಗಳನ್ನು ನೀಡುವ ಭರವಸೆಯನ್ನು ನೀಡಿದರು. ನೊವೆಲ್ ಹೋಪ್ ಫೌಂಡೇಶನ್ ಇನ್ನು ಹಲವು ಕ್ಷೇತ್ರಗಳಲ್ಲಿ ತನ್ನದೇ ಆದ ಸಾಮಾಜಿಕ ಸೇವೆಯನ್ನು ಮಾಡುತ್ತಿದ್ದು ಅದರ ಸದ್ಬಳಕೆಯನ್ನು ಎಲ್ಲರೂ ಪಡೆದುಕೊಳ್ಳಲು ಕರೆ ನೀಡಿದರು. ಈ ಬಾರಿ ಮೂರು ಸಾವಿರದವರೆಗೆ ಬ್ಯಾಗ್ ಗಳನ್ನು ಕಲ್ಬುರ್ಗಿ ಜಿಲ್ಲೆಯಲ್ಲಿ ಹಂಚಲಾಗಿದೆ ಎಂದರು. ವಿದ್ಯಾರ್ಥಿಗಳು ಸದಾ ಕನಸುಗಳನ್ನು ಕಾಣಬೇಕು ಆ ಕನಸುಗಳಿಗೆ ಇಂಬು ನೀಡುವ ಕೆಲಸವನ್ನು ನಾವು ಖಂಡಿತಾ ಮಾಡುತ್ತೇವೆ ಎಂದರು. ನಮ್ಮ ಸಂಸ್ಥೆಯ ಮುಖ್ಯ ಶಾಖೆಯು ಬೆಂಗಳೂರಿನಲ್ಲಿದೆ ಅದು ರಾಜ್ಯದ ಎಲ್ಲ ಜಿಲ್ಲೆಗಳ ಸರ್ಕಾರಿ ಶಾಲೆಯ ಮಕ್ಕಳಿಗೆ ಹಲವಾರು ಸೌಲಭ್ಯಗಳನ್ನು ಒದಗಿಸಿಕೊಟ್ಟಿದ್ದೇವೆ, ಮುಂಬರುವ ದಿನಗಳಲ್ಲಿ ಕೂಡ ಇನ್ನು ವಿಶಿಷ್ಟ ಮತ್ತು ವಿನೂತನ ಯೋಜನೆಗಳೊಂದಿಗೆ ನಾವು ನಿಮ್ಮ ಮುಂದೆ ಬರುತ್ತೇವೆ ಎಂದರು. ವಿದ್ಯಾರ್ಥಿಗಳು ಕಠಿಣ ಪರಿಶ್ರಮದೊಂದಿಗೆ ಅಭ್ಯಾಸವನ್ನು ಮುಂದುವರಿಸಿ ಈ ದೇಶಕ್ಕೆ ದೊಡ್ಡ ಸಂಪತ್ತಾಗಿ ಬೆಳೆಯಬೇಕೆಂದು ಕಿವಿ ಮಾತು ಮಾತು ಹೇಳಿದರು.

ನೋವೆಲ್ ಹೋಪ್ ಫೌಂಡೇಶನ್ ಒಂದು ನಿಸ್ವಾರ್ಥ ಮತ್ತು ಉತ್ತಮವಾಗಿರುವ ಎನ್‌ಜಿಒ ಸಂಸ್ಥೆಯಾಗಿದ್ದು ಅದು ಸರ್ಕಾರಿ ಶಾಲೆಯ ಮಕ್ಕಳಿಗೆ ವಿಶೇಷವಾಗಿ ಬ್ಯಾಗು ಪ್ಲೇಟು ಬಾಟಲ್ ಗಳನ್ನು ಕೊಟ್ಟು ವಿದ್ಯಾರ್ಥಿಗಳ ಹಾಜರಾತಿ ಹೆಚ್ಚಳಕ್ಕೆ ಪೂರಕವಾಗಿ ಕೆಲಸ ಮಾಡುತ್ತಿದ್ದು, ಮಕ್ಕಳ ಮುಖದಲ್ಲಿ ನಿಜವಾದ ನಗು ತರುತ್ತಿರುವ ಕೆಲಸ ಇವರ ಸಂಸ್ಥೆಯಿಂದ ಆಗುತ್ತಿದ್ದು, ನೀವು ಅವರಿಗೆ ಉತ್ತಮವಾದ ಫಲಿತಾಂಶವನ್ನು ಓದಿನ ಮೂಲಕ ಕೊಡುತ್ತಾ ಸಾಗಿದರೆ ಅವರು ನಿಮಗೆ ಇನ್ನೂ ಹಲವು ಕಲಿಕೆಗೆ ಪೂರಕವಾಗಿರುವ ಕಲಿಕೋಪಕರಣಗಳನ್ನು ಕೊಡಲು ಖಂಡಿತ ಮುಂದೆ ಬರುತ್ತಾರೆ. ಅವರ ಈ ಕಾರ್ಯ ವರ್ಣನೀಯವಾಗಿದೆ ಎಂದು ಶ್ರೀ ವಿಜಯಕುಮಾರ್ ಸೂರಪ್ಪನವರ ಹೇಳಿದರು.  

ಕಾರ್ಯಕ್ರಮದಲ್ಲಿ ಎಸ್ ಡಿ ಎಮ್ ಸಿ ಅಧ್ಯಕ್ಷರಾದ ರಾಜಕುಮಾರ ಯಂಕಂಚಿ, ಸಿದ್ದರಾಮ ಮಾಹೂರ, ಮಾಳಪ್ಪ ನೈಕೋಡಿ, ಬಸವರಾಜ ಕಿರಸಾವಳಗಿ

ಮುಖ್ಯ ಗುರುಗಳಾದ ಶಶಿಕಾಂತ ದೊಡ್ಮನಿ, ಪರಮಾನಂದ ಸರಸಂಬಿ,ವಿಜಯಕುಮಾರ ಸುತಾರ,ಮಹೇಶ್ ಬೋಳಶೆಟ್ಟಿ ಹಾಜರಿದ್ದರು.ಶ್ರೀ ಜಾವೀದ ಹುಂಡೇಕಾರ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.