ಶಹಾಬಾದ : ಸರಕಾರಿ ಪದವಿಪೂರ್ವ ಕಾಲೇಜಿಗೆ ಲಕ್ಕಮ್ಮ ಪ್ರಥಮ :..

ಶಹಾಬಾದ : ಸರಕಾರಿ ಪದವಿಪೂರ್ವ ಕಾಲೇಜಿಗೆ ಲಕ್ಕಮ್ಮ ಪ್ರಥಮ :..

ಶಹಾಬಾದ : ಸರಕಾರಿ ಪದವಿಪೂರ್ವ ಕಾಲೇಜಿಗೆ ಲಕ್ಕಮ್ಮ ಪ್ರಥಮ :..

ಸರ್ಕಾರಿ ಪಿಯು ವಿದ್ಯಾರ್ಥಿಗಳ ಅಭೂತಪೂರ್ವವಾದ ಸಾಧನೆ 

ನಾಗರಾಜ್ ದಂಡಾವತಿ ವರದಿ ಶಹಾಬಾದ : - ನಗರದ ಸರ್ಕಾರಿ ಪದವಿಪೂರ್ವ ಮಹಾವಿದ್ಯಾಲಯದ ವಾಣಿಜ್ಯ ವಿಭಾಗದ ಲಕ್ಕಮ್ಮ ದಶರಥ ರವರು ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ. 

ಲಕ್ಕಮ್ಮ ದಶರಥ ವಿಧ್ಯಾರ್ಥಿಯು 567/600 (94.5%) ಅಂಕ ಪಡೆದು ಕಾಲೇಜಿಗೆ ಮತ್ತು ತಾಲ್ಲೂಕಿಗೆ ಕೀರ್ತಿ ತಂದಿದ್ದಾರೆ ಎಂದು ಕಾಲೇಜಿನ ಪ್ರಾಚಾರ್ಯರಾದ ಪರಮೇಶ್ವರ ರವರು ಹರ್ಷ ವ್ಯಕ್ತಪಡಿಸಿ, ಅಭಿನಂದಿಸಿದ್ದಾರೆ. 

ಸರಕಾರಿ ಪಿಯು ಕಾಲೇಜಿನಿಂದ 110 ವಿಧ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಇದರಲ್ಲಿ 92 ವಿಧ್ಯಾರ್ಥಿಗಳು ಪಾಸಾಗಿದ್ದು, ಒಟ್ಟಾಗಿ ಕಾಲೇಜಿಗೆ ಶೇ.83.64% ಬಂದಿದೆ.

ಕಲಾ ವಿಭಾಗ 82.22%, ವಾಣಿಜ್ಯ ವಿಭಾಗದಲ್ಲಿ 100%, ವಿಜ್ಞಾನ ವಿಭಾಗ 67.47% ಪಲಿತಾಂಶ ಬಂದಿದೆ.

21 ಜನ ವಿಧ್ಯಾರ್ಥಿಗಳು ಡಿಸ್ಟಿಂಕ್ಷನ್ ನಲ್ಲಿ ಪಾಸಾಗಿದ್ದು, 54 ಪ್ರಥಮ, 14 ದ್ವಿತೀಯ ಹಾಗೂ 3 ಪಾಸಾಗಿದ್ದಾರೆ ಎಂದು ಸರ್ಕಾರಿ ಪದವಿಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯರಾದ ಪರಮೇಶ್ವರ ಮತ್ತು ಉಪನ್ಯಾಸಕ ವರ್ಗ ಹಾಗೂ ಸಿಬ್ಬಂದಿ ವರ್ಗದವರು ಎಲ್ಲಾ ವಿಧ್ಯಾರ್ಥಿಗಳನ್ನ ಅಭಿನಂದಿಸಿ, ಹರ್ಷ ವ್ಯಕ್ತಪಡಿಸಿದ್ದಾರೆ.