ಪೂರ್ವಭಾವಿ ಸಭೆ : ಅಂಬೇಡ್ಕರ ಜಯಂತಿ ಅದ್ದೂರಿಯಾಗಿ ಆಚರಿಸೋಣ
ಪೂರ್ವಭಾವಿ ಸಭೆ : ಅಂಬೇಡ್ಕರ ಜಯಂತಿ ಅದ್ದೂರಿಯಾಗಿ ಆಚರಿಸೋಣ
ನಾಗರಾಜ್ ದಂಡಾವತಿ ವರದಿ ಶಹಾಬಾದ : - ಭಾರತದ ಭಾಗ್ಯ ವಿಧಾತ, ಸಂವಿದಾನ ಶಿಲ್ಪಿ, ಬಾಬಾ ಸಾಹೇಬ ಡಾ. ಅಂಬೇಡ್ಕರ್ ಅವರ 135ನೇ ಜಯಂತಿಯನ್ನು ಏ. 14 ರಂದು ತಾಲ್ಲೂಕು ಆಡಳಿತದ ವತಿಯಿಂದ ಆಚರಿಸುವ ಕುರಿತು ತಾಲ್ಲೂಕ ತಹಶೀಲ್ದಾರ್ ಕಛೇರಿ ಸಭಾ ಭವನದಲ್ಲಿ ತಹಶೀಲ್ದಾರ್ ನೀಲಪ್ರಭಾ ಬಬಲಾದ ಅವರ ಅಧ್ಯಕ್ಷತೆಯಲ್ಲಿ ಜರುಗಿತು.
ತಾಲ್ಲೂಕ ತಹಶೀಲ್ದಾರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂವಿದಾನ ಶಿಲ್ಪಿ ಡಾ.ಬಾಬಾ ಸಾಹೇಬ ಅಂಬೇಡ್ಕರ್ ಅವರ 135ನೇ ಜಯಂತಿಯನ್ನು ಏ. 14 ರಂದು ಅರ್ಥಪೂರ್ಣವಾಗಿ ಎಲ್ಲರೂ ಸೇರಿ ಅದ್ದೂರಿಯಾಗಿ ಆಚರಿಸೋಣ ಎಂದು ಸೂಚನೆ ನೀಡಿದರು.
ಹಾಗೆ ತಾಲ್ಲೂಕಿನ ಎಲ್ಲಾ ಇಲಾಖೆಯ ಕಛೇರಿಯಲ್ಲಿ ತಪ್ಪದೆ ಡಾ.ಅಂಬೇಡ್ಕರ್ ಜಯಂತಿ ಆಚರಣೆ ಮಾಡಬೇಕು, ಜೊತೆಗೆ ತಾಲ್ಲೂಕ ಆಡಳಿತದ ವತಿಯಿಂದ ಆಚರಿಸುವ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ, ಯಶಸ್ವಿಗೊಳಿಸಬೇಕು ಎಂದರು.
ಇಲಾಖೆಯ ಕಛೇರಿಗಳಲ್ಲಿ ಆಚರಿಸದೆ ಇರುವ ಯಾವುದೆ ದೂರು ಬಂದರೆ ಅಂತವರ ವಿರುದ್ದ ನಿರ್ದಾಕ್ಷಣ್ಯವಾಗಿ ಕಠಿಣ ಕ್ರಮ ಕೈಗೊಳ್ಳಲಾಗುವದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಗ್ರೇಡ್ 2 ತಹಶೀಲ್ದಾರ ಗುರುರಾಜ್ ಸಂಗಾವಿ, ಅಣವೀರಪ್ಪ ಹುಳಗೇರಿ, ತಾ. ಪಂ. ಇ.ಒ ಮಲ್ಲಿನಾಥ್ ರಾವೂರ, ಸಿಡಿಪಿಓ ಶಿವಶರಣಪ್ಪ ಭೂ ಶೆಟ್ಟಿ, ನಗರಸಭೆಯ ಶರಣಗೌಡ, ಸಾಬಣ್ಣ ಸುಂಗುಲ್ಕರ, ಪಿಎಸ್ಐ ಚಂದಕಾಂತ ಮಖಾಲೆ, ಸಿಆರಪಿ ಸತ್ಯನಾರಾಯಣ ಹಾಗೂ ಜಯಂತ್ಯೋತ್ಸವ ಸಮಿತಿಯ ಅಧ್ಯಕ್ಷ ರಾಜೇಶ ಯನಗುಂಟಿಕರ,ಸುರೇಶ ಮೆಂಗನ,ಕೃಷ್ಣಪ್ಪ ಕರಣಿಕ,ರಾಜೇಂದ್ರ ಜಂಬಗಿ,ಪಿಎಸ್ ಮೈತ್ರಿ,ಸುನಿಲ ಮೆಂಗನ,ಶಿವಶಾಲ ಪಟ್ಟಣ,ಮಹಾದೇವ ತರನಳ್ಳಿ,ಸತೀಶ್ ಕೋಬಾಳ,ಪ್ರವೀಣ ರಾಜನ,ಮಲ್ಲಣ್ಣ ಮರ್ತೂರ,ರಾಕೇಶ ಜಾಯಿ,ಮೋಹನ ಹಳ್ಳಿ,ಮಲ್ಲಿಕಾರ್ಜುನ ಕಟ್ಟಿ, ಮಲ್ಲಿಕಾರ್ಜುನ ಹಳ್ಳಿ ಸೇರಿದಂತೆ ಜಯಂತ್ಯೋತ್ಸವ ಸಮಿತಿಯ ಪದಾದಿಕಾರಿಗಳು, ಸದಸ್ಯರು ಮತ್ತು ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.
