ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ವನಂಜಕರ ನಗರ ವಿಕ್ಷಣೆ

ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ವನಂಜಕರ ನಗರ ವಿಕ್ಷಣೆ 

ಸಾರ್ವಜನಿಕರೊಂದಿಗೆ ನೇರ ಸಂವಾದ - ಸಮಸ್ಯೆಗಳನ್ನು ಆಲಿಸಿದರು :

ಶಹಾಬಾದ : - ನಗರದ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ನಗರ ಪೊಲೀಸ್ ಠಾಣೆಯ ಪೊಲೀಸ ಇನ್ಸ್‌ಪೆಕ್ಟರ್‌ ಪಿ.ಎಸ್ ವನಂಜಕರ ಅವರು ನಗರ ಸಭೆಯ ವಾರ್ಡ್ ನಂ 27 ಇಂದಿರಾ ನಗರ ಮಡ್ಡಿ 2 ರ ಬಡಾವಣೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. 

ಈ ಸಂದರ್ಭದಲ್ಲಿ ಸಾರ್ವಜನಿಕರೊಂದಿಗೆ ನೇರ ಸಂವಾದ ನಡೆಸಿ ಅವರ ಸಮಸ್ಯೆಗಳನ್ನು ಆಲಿಸಿದರು.

ಇನ್ಸ್‌ಪೆಕ್ಟರ್‌ ಮತ್ತು ಅವರ ತಂಡವು ಬಡಾವಣೆಯ ಪ್ರಮುಖ ರಸ್ತೆಗಳು ಮತ್ತು ಜನನಿಬಿಡ ಪ್ರದೇಶಗಳಲ್ಲಿ ಸಂಚರಿಸಿ ಭದ್ರತಾ ವ್ಯವಸ್ಥೆಯನ್ನು ಪರಿಶೀಲಿಸಿದರು.

ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿದ ಪೊಲೀಸ ಇನ್ಸ್‌ಪೆಕ್ಟರ್‌, ಅಕ್ರಮ ಚಟುವಟಿಕೆಗಳ ಮೇಲೆ ನೀಗಾ ಇರಿಸಲು ಮತ್ತು ಜನರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲು ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಸೂಚಿಸಿದರು.

ಅಪರಿಚಿತ ವ್ಯಕ್ತಿಗಳು ಅಥವಾ ಸಂಶಯಾಸ್ಪದ ಚಟುವಟಿಕೆಗಳು ಕಂಡು ಬಂದಲ್ಲಿ ತಕ್ಷಣವೇ 112 ಪೊಲೀಸ್ ಸಹಾಯವಾಣಿಗೆ ಕರೆ ಮಾಡುವಂತೆ ನಾಗರಿಕರಲ್ಲಿ ಮನವಿ ಮಾಡಿ, ಕರ ಪತ್ರಗಳನ್ನು ಹಂಚಿದರು.

ಪ್ರತಿಯೊಂದು ಮನೆ, ಚೌಕ ಮತ್ತು ವ್ಯಾಪಾರ ಅಂಗಡಿಗಳ ಮುಂಭಾಗದಲ್ಲಿ ಕಡ್ಡಾಯವಾಗಿ ಗುಣಮಟ್ಟದ ಸಿ.ಸಿ. ಟಿವಿ ಕ್ಯಾಮೆರಾಗಳನ್ನು ಅಳವಡಿಸಿಕೊಳ್ಳಲು ತಿಳಿಸಿದರು.

ಅಪರಾಧ ತಡೆಗೆ ಕ್ಯಾಮೆರಾಗಳು ಕೇವಲ ದೃಶ್ಯಗಳನ್ನು ಸೆರೆಹಿಡಿಯುವುದಿಲ್ಲ, ಅವು ಅಪರಾಧಿಗಳಲ್ಲಿ ಭಯ ಹುಟ್ಟಿಸುತ್ತವೆ ಮತ್ತು ಯಾವುದೇ ಅಹಿತಕರ ಘಟನೆ ನಡೆದರೆ ತನಿಖೆಗೆ ದೊಡ್ಡ ಪುರಾವೆಯಾಗುತ್ತವೆ ಎಂದು ಸಾರ್ವಜನಿಕರಿಗೆ ಮನವರಿಕೆ ಮಾಡಿಕೊಟ್ಟರು.

ನಗರ ಪೊಲೀಸ್ ಇಲಾಖೆಯ ಈ ಕ್ರಮವು ಜನಸಾಮಾನ್ಯರಲ್ಲಿ ಸುರಕ್ಷತೆ ಮತ್ತು ಧೈರ್ಯ ತುಂಬಿಸುವ ಭಾವನೆಯನ್ನು ಮೂಡಿಸಿದೆ ಮತ್ತು ಪೊಲೀಸ್-ನಾಗರಿಕರ ನಡುವಿನ ಬಾಂಧವ್ಯವನ್ನು ಬಲಪಡಿಸಲು ಸಹಕಾರಿಯಾಯಿತು ಎನ್ನುತ್ತಾರೆ ಬಡಾವಣೆಯ ನಾಗರಿಕರು.

ಈ ಸಂದರ್ಭದಲ್ಲಿ ಕದಸಂಸ ಜಿಲ್ಲಾ ಸಂ. ಸಂಚಾಲಕ ಬಸವರಾಜ ಮಯೂರ, ನಗರ ಸಭೆಯ ಸ್ಥಾಯಿ ಸಮಿತಿಯ ಮಾಜಿ ಅಧ್ಯಕ್ಷ ಶರಣು ಪಗಲಾಪುರ, ಕಾಂಗ್ರೇಸ ಪಕ್ಷದ ಯುವ ಕಾರ್ಯದರ್ಶಿ ಮಹ್ಮದ ಇಮ್ರಾನ, ಬಿಜೆಪಿ ಯ ನಾಗರಾಜ ಮುದ್ನಾಳ, ಮೋಹನ ಹಳ್ಳಿ ಮತ್ತು ಮಹ್ಮದ ಶಫೀಕ, ಪ್ರಭಾಕರ ಕಾಂಬಳೆ, ಶಾರುಖ, ಶೋಹೆಬ ಹಾಗೂ ಪಿಎಸಐ ಶಾಮರಾಯ, ಪೊಲೀಸ ಸಿಬ್ಬಂದಿಗಳಾದ ಸಂತೋಷ ದೊಡ್ಡಮನಿ, ಹುಸೇನ ಪಾಷ ಸೇರಿದಂತೆ ಅನೇಕ ಜನ ಉಪಸ್ಥಿತರಿದರು.