ಕ್ಯಾನ್ಸರ್ ಭಯಬೇಡ ಜಾಗೃತಿ ಇರಲಿ

ಕ್ಯಾನ್ಸರ್ ಭಯಬೇಡ ಜಾಗೃತಿ ಇರಲಿ

ಕ್ಯಾನ್ಸರ್ ಗುಣಪಡಿಸಬಲ್ಲ ರೋಗ 

ಕ್ಯಾನ್ಸರ್ ಭಯಬೇಡ ಜಾಗೃತಿ ಇರಲಿ 

ಕಲಬುರ್ಗಿ ಬಸವ ಸಮಿತಿ ಅನುಭಾವ ಮಂಟಪ , ಡಾ. ಬಿ ಡಿ ಜತ್ತಿ ವಚನ ಅಧ್ಯಯನ ಮತ್ತು

 ಸಂಶೋಧನ ಕೇಂದ್ರದಲ್ಲಿ ಲಿಂ. ದಾನಮ್ಮ ವೀರಪ್ಪ ಅನಂತಪುರ ಸ್ಮರಣಾರ್ಥ ಜರುಗಿದ ಅರಿವಿನ ಮನೆ 895ನೆಯ ದತ್ತಿ ಕಾರ್ಯಕ್ರಮದಲ್ಲಿ ಆರೋಗ್ಯವೇ ಭಾಗ್ಯ ಕ್ಯಾನ್ಸರ್ ಅರಿವು ವಿಷಯದ ಕುರಿತು ಪ್ರಾತ್ಯೇಚ್ಛಿಕ ಉಪನ್ಯಾಸ ನೀಡಿದ ಡಾ. ಶಾಂತಲಿಂಗ ನಿಗ್ಗುಡ್ಗಿ ಅವರು ಕ್ಯಾನ್ಸರ್ ಗುಣಪಡಿಸಬಲ್ಲ ರೋಗವಾಗಿದೆ , ಶರಣರ ಮಾರ್ಗದಲ್ಲಿ ನಡೆದರೆ ಯಾವುದೇ ರೋಗ ಬರುವುದಿಲ್ಲ ಎಂದರು . ನಾವು ನಮ್ಮ ದೇಹಕ್ಕೆ ಸಮತೋಲನದ ಆಹಾರ ಪೂರೈಸಿದರೆ ದೇಹದ ಎಲ್ಲಾ ಜೀವಕೋಶಗಳು ಆರೋಗ್ಯಕರವಾಗಿರುತ್ತವೆ ಎಂದು ಸಲಹೆ ನೀಡಿದರು. ಶೇಕಡ 30ರಷ್ಟು ಕ್ಯಾನ್ಸರ್ ತಂಬಾಕು ಮತ್ತು ಮಧ್ಯಪಾನ ಸೇವನೆಯಿಂದ ,ಶೇಕಡ 18 ರಿಂದ 20 ರಷ್ಟು ಹಾರ್ಮೋನ್ಸ್ ಅಸಮತೋಲನೆಯಿಂದ ,ಶೇಕಡ 30 ರಿಂದ 35ರಷ್ಟು ಆಹಾರ ಪದ್ಧತಿ ಸರಿ ಇಲ್ಲದಿರುವುದರಿಂದ ಬರುತ್ತದೆ ಎಂದರು . 

ಆಹಾರ ಉತ್ಪಾದನೆಯಲ್ಲಿ ರಾಸಾಯನಿಕಗಳ ಅತಿಯಾದ ಬಳಕೆಯಿಂದ ಕೂಡ ಕ್ಯಾನ್ಸರ್ ಬರುತ್ತಿದೆ . ಸಾವಯವ ಕೃಷಿ ಉತ್ಪಾದನೆಯ ಆಹಾರ ಆರೋಗ್ಯಕ್ಕೆ ಒಳ್ಳೆಯದು . ದೇಹದಿಂದ ತ್ಯಾಜ್ಯ ಹೊರಹಾಕುವಿಕೆಯಲ್ಲಿ ಆಗುವ ಬದಲಾವಣೆ ,ಅತಿಯಾದ ಕೆಮ್ಮು, ರೋಗವಾಸಿಯಾಗದಿರುವುದು ಕ್ಯಾನ್ಸರ್ ಲಕ್ಷಣಗಳಾಗಿರುತ್ತವೆ . ರೋಗವನ್ನು ಆರಂಭಿಕ ಹಂತದಲ್ಲಿ ಗುಣಪಡಿಸುವುದು ಸುಲಭವಾಗಿರುತ್ತದೆ .ಬಾಯಿ ಗಂಟಲು ಶ್ವಾಸಕೋಶದ ಕ್ಯಾನ್ಸರ್ ಗಂಡಸರಲ್ಲಿ ಮತ್ತು ಗರ್ಭಕೋಶ, ಸ್ತನ ಕ್ಯಾನ್ಸರ್ ಹೆಂಗಸರಲ್ಲಿ ಸಾಮಾನ್ಯವಾಗಿ ಆಗುತ್ತವೆ . ಹೆಣ್ಣುಮಕ್ಕಳು ತಿಂಗಳಿಗೊಮ್ಮೆ ತಮ್ಮ ಸ್ತನವನ್ನು ಮುಟ್ಟಿ ನೋಡಿಕೊಂಡು ಗೆಡ್ಡೆ ಆಗಿದಿಯೋ ಇಲ್ಲವೋ ಎಂದು ಖಚಿತಪಡಿಸಿಕೊಳ್ಳಬೇಕು . ಗೆಡ್ಡೆ ಸಣ್ಣದಿದ್ದಾಗಲೇ ವೈದ್ಯರನ್ನು ಕಾಣಬೇಕು . 

ಕ್ಯಾನ್ಸರ್ ಗೆ ವ್ಯಾಕ್ಸಿನ್ ಬಂದಿದೆ 12 ರಿಂದ 15 ವರ್ಷದವರು ಇದನ್ನು ತೆಗೆದುಕೊಳ್ಳಬಹುದು . ಶರಣರ ಜೀವನಶೈಲಿ ಅಳವಡಿಸಿಕೊಂಡರೆ ಕ್ಯಾನ್ಸರ್ ರೋಗದಿಂದ ಮುಕ್ತರಾಗಬಹುದು . ನಮ್ಮ ಭಾಗದಲ್ಲಿ ಋತುಮಾನಕ್ಕೆ ತಕ್ಕಂತೆ ಸಿಗುವ ಹಣ್ಣುಗಳನ್ನು ಸೇವಿಸಿದರೆ ಕ್ಯಾನ್ಸರ್ ತಡೆಗಟ್ಟಬಹುದು ಎಂದು ಹೇಳಿದರು 

 ಕಾರ್ಯಕ್ರಮದಲ್ಲಿ ಕಲ್ಬುರ್ಗಿ ಬಸವ ಸಮಿತಿಯ ಅಧ್ಯಕ್ಷರಾದ ಡಾ. ವಿಲಾಸ್ವತಿ ಕೂಬಾ ,ಡಾ.ವೀರಣ್ಣ ದಂಡೆ, ಡಾ.ಜಯಶ್ರೀ ದಂಡೆ , ದತ್ತಿ ದಾಸೋಹಿಗಳಾದ ಸಿದ್ದೇಶ್ವರ ಅನಂತಪುರ 

 ಉದ್ಯಮಿ ರಾಜೇಂದ್ರ ಕೂಬಾ,ಕಾರ್ಯದರ್ಶಿ ಡಾ.ಆನಂದ ಪಾಟೀಲ ಸಿದ್ಧಾಮಣಿ , ಪ್ರಾಧ್ಯಾಪಕಿ ಡಾ. ಜ್ಯೋತಿ ಅನಂತಪುರ ಡಾ.ಕೆ. ಎಸ್. ವಾಲಿ , ಶರಣಗೌಡ ಪಾಟೀಲ್ ಪಾಳಾ , ಉದ್ದಂಡಯ್ಯ ಭಾಗವಹಿಸಿದರು.