ಹಿಂದೂ–ಮುಸ್ಲಿಂ ಏಕತೆಯ ಸಂಕೇತ ಜವಳಗಾ ಬಿ ಗ್ರಾಮ: ಚನ್ನಮಲ್ಲ ಶಿವಯೋಗಿ ಶಿವಾಚಾರ್ಯರು

ಹಿಂದೂ–ಮುಸ್ಲಿಂ ಏಕತೆಯ ಸಂಕೇತ ಜವಳಗಾ ಬಿ ಗ್ರಾಮ: ಚನ್ನಮಲ್ಲ ಶಿವಯೋಗಿ ಶಿವಾಚಾರ್ಯರು

ಹಿಂದೂ–ಮುಸ್ಲಿಂ ಏಕತೆಯ ಸಂಕೇತ ಜವಳಗಾ ಬಿ ಗ್ರಾಮ: ಚನ್ನಮಲ್ಲ ಶಿವಯೋಗಿ ಶಿವಾಚಾರ್ಯರು

ಕಮಲಾಪುರ: “ದೇವನೊಬ್ಬ ನಾಮ ಹಲವು, ಸಬ್ ಕಾ ಮಾಲಿಕ್ ಏಕ ಹೈ” ಎಂಬ ಸಂದೇಶ ಮಾನವೀಯ ಏಕತೆಯನ್ನು ಸಾರುತ್ತದೆ ಎಂದು ಬಡದಾಳದ ಚೆನ್ನಮಲ್ಲ ಶಿವಯೋಗಿ ಶಿವಾಚಾರ್ಯರು ಹೇಳಿದರು.

ತಾಲೂಕಿನ ಜವಳಗಾ (ಬಿ ) ಗ್ರಾಮದಲ್ಲಿ ನಡೆದ ಹಜರತ್ ಬಾಲೇಸಾಹೇಬ ಜಾತ್ರಾ ಮಹೋತ್ಸವ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಗ್ರಾಮದಲ್ಲಿ ಹನುಮಾನ್ ದೇವಸ್ಥಾನ ಹಾಗೂ ಹಜರತ್ ಬಾಲೇಸಾಹೇಬ್ ದರ್ಗಾ ಇರುವುದರಿಂದ ಹಿಂದೂ–ಮುಸ್ಲಿಂ ಬಾಂಧವರು ಪ್ರತಿವರ್ಷ , ದವನದ ಹುಣ್ಣಿಮೆಯಂದು ಒಂದಾಗಿ ಜಾತ್ರೆಯನ್ನು ಆಚರಿಸುತ್ತಿದ್ದಾರೆ. ಧಾರ್ಮಿಕ ಸಭೆ, ರುದ್ರಾಭಿಷೇಕ, ಗಂಧಾರ್ಪಣೆ ಹಾಗೂ ಅನ್ನದಾಸೋಹದಂತಹ ಕಾರ್ಯಕ್ರಮಗಳ ಮೂಲಕ ಜಾತಿ–ಮತ ಭೇದವಿಲ್ಲದೆ ಎಲ್ಲರೂ ಒಂದೇ ಮಾನವರು ಎಂಬ ಸಂದೇಶವನ್ನು ಈ ಗ್ರಾಮ ನೀಡುತ್ತಿದೆ ಎಂದು ಹೇಳಿದರು.

ಇಂದಿನ ದಿನಗಳಲ್ಲಿ ಧರ್ಮದ ಹೆಸರಿನಲ್ಲಿ ಸಮಾಜದಲ್ಲಿ ಕಲಹ ಉಂಟುಮಾಡುವ ಕೆಲವರಿಗೆ ಜವಳಗಾ ಬಿ ಗ್ರಾಮದ ಈ ಏಕತೆಯ ಪರಂಪರೆ ಉತ್ತಮ ಮಾದರಿಯಾಗಿದೆ ಎಂದು ಅವರು ತಿಳಿಸಿದರು.

ನೀಲೂರಿನ ಪರಮಪೂಜ್ಯ ಶರಣಯ್ಯ ಸ್ವಾಮೀಜಿಗಳು ಕಾರ್ಯಕ್ರಮಕ್ಕೆ ಘನ ನೇತೃತ್ವ ವಹಿಸಿದ್ದರು. ನರೋಣದ ಚನ್ನಮಲ್ಲದೇವರು, ಚಿಂಚನಸೂರಿನ ಕಿರಿಯ ಶ್ರೀಗಳು, ಮುದ್ದಡಗಾ ರೇಣುಕಾಚಾರ್ಯ ಶಿವಾಚಾರ್ಯರು, ಕಾಡಾದ ಮಾಜಿ ಅಧ್ಯಕ್ಷ ಹರ್ಷವರ್ಧನ್ ಗುಗಳೆ, ಪತ್ರಕರ್ತ ಶರಣಗೌಡ ಪಾಟೀಲ ಪಾಳಾ, ಅಂಬಾರಾಯ ಕೋಣೆ ಸೇರಿದಂತೆ ಹಲವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

 ಸಂಘದ ಅಧ್ಯಕ್ಷ ರಾಜಕುಮಾರ್ ಪಾಟೀಲ ಕಾರ್ಯಕ್ರಮ ನಿರ್ವಹಿಸಿದರು. ಸುತ್ತ ಮುತ್ತಲಿನ ಭಕ್ತಾದಿಗಳು ಅನೇಕ ಗಣ್ಯರು ಹಾಗೂ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.