ಎನ್‌ಎಸ್‌ಎಸ್ ವಾರ್ಷಿಕ ವಿಶೇಷ ಶಿಬಿರ ಚಾಲನೆ

ಎನ್‌ಎಸ್‌ಎಸ್ ವಾರ್ಷಿಕ ವಿಶೇಷ ಶಿಬಿರ ಚಾಲನೆ

ಎನ್‌ಎಸ್‌ಎಸ್ ವಾರ್ಷಿಕ ವಿಶೇಷ ಶಿಬಿರ ಚಾಲನೆ

ಕಲಬುರಗಿ: ನಗರದ ಬುದ್ಧ ವಿಹಾರದಲ್ಲಿ ಸರ್ಕಾರಿ ಮಹಾವಿದ್ಯಾಲಯ (ಸ್ವಾಯತ್ತ) ಕಲಬುರಗಿ ಹಾಗೂ ಗುಲಬರ್ಗಾ ವಿಶ್ವವಿದ್ಯಾಲಯ ಕಲಬುರಗಿಯ ೨೦೨೫-೨೬ನೇ ಸಾಲಿನ ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್) ಕೋಶದ ಸಂಯುಕ್ತ ಆಶ್ರಯದಲ್ಲಿ ಸ್ವ-ಆರ್ಥಿಕ ಘಟಕ ಹಾಗೂ ವಿಶ್ವವಿದ್ಯಾಲಯದ ಎ, ಬಿ ಮತ್ತು ಪಿ.ಜಿ ಘಟಕಗಳ ವಾರ್ಷಿಕ ವಿಶೇಷ ಶಿಬಿರಕ್ಕೆ ಕಾಲೇಜಿನ ಕಲಾ ವಿಭಾಗದ ಡೀನ್ ಡಾ. ವಿಜಯಕುಮಾರ ಸಾಲಿಮನಿ ಅವರು ಸಸಿಗಳಿಗೆ ನೀರು ಹಾಕುವ ಮೂಲಕ ಚಾಲನೆ ನೀಡಿದರು.

ನಂತರ ಅವರು ಮಾತನಾಡುತ್ತಾ ನನ್ನ ಭಾರತಕ್ಕಾಗಿ ಯುವಕರು ಮತ್ತು ಡಿಜಿಟಲ್ ಸಾಕ್ಷರತೆಗಾಗಿ ಯುವಕರು ಎಂಬ ವಿಷಯದ ಕುರಿತು ಮಾತನಾಡಿ, ಶಿಬಿರಾರ್ಥಿಗಳಲ್ಲಿ ಸಮಾನತೆ, ಐಕ್ಯತೆ, ಒಳ್ಳೆಯ ನಡವಳಿಕೆ ಹಾಗೂ ಶಿಸ್ತು ಬೆಳೆಸಲು ಎನ್‌ಎಸ್‌ಎಸ್ ವಾರ್ಷಿಕ ಶಿಬಿರಗಳ ಅಗತ್ಯವಿದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಂಶುಪಾಲರಾದ ಡಾ. ಸವಿತಾ ತಿವಾರಿ ಅವರು ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಡಾ. ದವಲಪ್ಪ ಬಿ.ಹೆಚ್, ಡಾ. ಶ್ರೀಮಂತ ಹೋಳ್ಕರ್, ಡಾ. ರಾಜಶೇಖರ ಮಡಿವಾಳ, ಡಾ. ರವೀಂದ್ರಕುಮಾರ ಭಂಡಾರಿ, ಎನ್‌ಎಸ್‌ಎಸ್ ಅಧಿಕಾರಿಗಳಾದ ಡಾ. ಶಿವಲಿಂಗಪ್ಪ ಪಾಟೀಲ, ಡಾ. ಬಸಂತ ಸಾಗರ, ಡಾ. ಮೀನಾಕ್ಷಿ ಹುಗ್ಗಿ, ಡಾ. ರವಿ ಬೌದ್ದೆ, ಡಾ. ಬಲಭೀಮ ಸಾಂಗ್ಲಿ, ಶಿಬಿರಾಧಿಕಾರಿಗಳಾದ ಡಾ. ಚಂದ್ರಕಾAತ ಜಮಾದಾರ, ಡಾ. ಅಜರಾ ಪರವಿನ್, ಡಾ. ನಾಗಪ್ಪ ಗೋಗಿ, ಡಾ. ರಾಜೇಶ್, ಡಾ. ಸುಜಾತಾ ದೊಡ್ಡಮನಿ, ಪತ್ರಾಂಕಿತ ವ್ಯವಸ್ಥಾಪಕ ಅಜಯಸಿಂಗ್ ತಿವಾರಿ, ಅಧೀಕ್ಷಕ ಶಿವಾನಂದ ಸ್ವಾಮಿ ಗೌರವ, ಪ್ರಾಧ್ಯಾಪಕರಾದ ಡಾ. ಅನಿಲಕುಮಾರ ಹಾಲು, ಡಾ. ಮಲ್ಲಿಕಾರ್ಜುನ ಶೆಟ್ಟಿ, ಪ್ರೊ. ರೆಹಮಾನ್, ಡಾ. ಅರುಣಕುಮಾರ ಸಲಗರ, ಡಾ. ರಮೇಶ್ ಪೋತೆ, ಡಾ. ಶಾಹಿನ್ ಫಾತಿಮಾ, ಡಾ. ಮಲ್ಲಿಕಾರ್ಜುನ ಸಾವರಕರ್, ಡಾ. ಶಂಕರ ರಾಠೋಡ್, ಡಾ. ಶಶಿಕಾಂತ ಕೊಳ್ಳಿ, ಡಾ. ಶೈಲಜಾ ಮಹಾದೇವಪ್ಪ, ಡಾ.ಮೇರಿ, ಡಾ. ವೈ. ಎಸ್. ವಗ್ಗಿ, ಡಾ. ಶಾಮಲಾ ಸ್ವಾಮಿ, ಡಾ. ರಮೇಶ, ಡಾ. ಶ್ರೀದೇವಿ ರಾಠೋಡ್ ಹಾಗೂ ಕಾಲೇಜಿನ ಎಲ್ಲಾ ಪ್ರಾಧ್ಯಾಪಕರು ಮತ್ತು ಅತಿಥಿ ಉಪನ್ಯಾಸಕರು ಉಪಸ್ಥಿತರಿದ್ದರು.

ವಿದ್ಯಾರ್ಥಿನಿ ವಂದನಾ ಪ್ರಾರ್ಥನೆ ಸಲ್ಲಿಸಿದರೆ, ರವಿಕಿರಣ ಎನ್‌ಎಸ್‌ಎಸ್ ಗೀತೆಯನ್ನು ಹಾಡಿದರು. ಡಾ. ಶಿವಲಿಂಗಪ್ಪ ಪಾಟೀಲ ಅವರು ಅತಿಥಿಗಳನ್ನು ಸ್ವಾಗತಿಸಿದರು. ಡಾ. ಬಲಭೀಮ ಸಾಂಗ್ಲಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಬಸಂತ ಸಾಗರ ಅವರು ವಂದಿಸಿದರು. ಕಾರ್ಯಕ್ರಮವನ್ನು ಡಾ. ರವಿ ಬೌದ್ದೆ ಅವರು ನಿರೂಪಿಸಿದರು.

ಈ ಕಾರ್ಯಕ್ರಮದಲ್ಲಿ ೨೫೦ಕ್ಕೂ ಹೆಚ್ಚು ಶಿಬಿರಾರ್ಥಿಗಳು ಭಾಗವಹಿಸಿದ್ದು, ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು. ವಿಶೇಷ ಶಿಬಿರವು ೦೨-೦೪-೨೦೨೬ ರಿಂದ ೦೮-೦೪-೨೦೨೬ ರವರೆಗೆ ಜರುಗಲಿದೆ.