ಕರಗ ಮಹೋತ್ಸವದಲ್ಲಿ ಕೆಂಗೇರಿಯ ಇತಿಹಾಸ ಗ್ರಂಥ ಲೋಕಾರ್ಪಣೆ ಸುತ್ತೂರು ಶ್ರೀಗಳಿಂದ ಕೃತಿ ಅನಾವರಣ
ಕರಗ ಮಹೋತ್ಸವದಲ್ಲಿ ಕೆಂಗೇರಿಯ ಇತಿಹಾಸ ಗ್ರಂಥ ಲೋಕಾರ್ಪಣೆಸುತ್ತೂರು ಶ್ರೀಗಳಿಂದ ಕೃತಿ ಅನಾವರಣ
ಕೆಂಗೇರಿ : ಕೆಂಗೇರಿಯ ಸಾಂಸ್ಕೃತಿಕ ಪರಂಪರೆ ಮತ್ತು ಇತಿಹಾಸವನ್ನು ಪರಿಚಯಿಸುವ **‘ಕೆಂಗೇರಿ: ಸಂಪ್ರದಾಯ–ಸಂಸ್ಕೃತಿ–ಸಾಧನೆಗಳ ಸಂಗಮ’** ಎಂಬ ಕೃತಿಯನ್ನು ಹಿರಿಯ ಇತಿಹಾಸ ಸಂಶೋಧಕ ಹಾಗೂ ಲೇಖಕರಾದ ಕೆಂಗೇರಿ ಚಕ್ರಪಾಣಿ ರಚಿಸಿದ್ದಾರೆ. ಈ ಕೃತಿಯನ್ನು ಸುತ್ತೂರು ಶ್ರೀ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರು ಕೆಂಗೇರಿಯ ಎಲ್ಲಮ್ಮ ದೇವಿಯ ಕರಗ ಮಹೋತ್ಸವದ ಸುವರ್ಣ ಸಂಭ್ರಮದ ಆರಂಭೋತ್ಸವದ ಸಂದರ್ಭದಲ್ಲಿ ಲೋಕಾರ್ಪಣೆಗೊಳಿಸಿದರು.
ಸುತ್ತೂರು ಶ್ರೀಗಳು ಮಾತನಾಡಿ , ಕೆಂಗೇರಿಯ ಸಮೃದ್ಧ ಸಾಂಸ್ಕೃತಿಕ ವೈಭವ ಹಾಗೂ ಇತಿಹಾಸವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವಲ್ಲಿ ಈ ಕೃತಿ ಮಹತ್ವದ ಪಾತ್ರ ವಹಿಸುತ್ತದೆ ಎಂದು ಅಭಿಪ್ರಾಯಪಟ್ಟರು. ಸ್ಥಳೀಯ ಸಂಪ್ರದಾಯ, ಸಂಸ್ಕೃತಿ ಮತ್ತು ಸಾಧನೆಗಳ ಕುರಿತು ಸಮಗ್ರವಾಗಿ ಬೆಳಕು ಚೆಲ್ಲುವಂತಹ ಕೃತಿಯಾಗಿದೆ ಎಂದು ಪ್ರಶಂಸಿಸಿದರು.
ಕಾರ್ಯಕ್ರಮದಲ್ಲಿ ಕಾಗಿನೆಲೆ ಸಂಸ್ಥಾನದ ಪೂಜ್ಯ ನಿರಂಜನಾನಂದ ಮಹಾಸ್ವಾಮಿಜಿ ಸೇರಿದಂತೆ ಭಕ್ತರು ಹಾಗೂ ಗಣ್ಯರು ಉಪಸ್ಥಿತರಿದ್ದು, ಕೃತಿಯ ಮಹತ್ವವನ್ನು ಶ್ಲಾಘಿಸಿದರು.
ಈ ಕೃತಿಯನ್ನು ಶ್ರೀ ಕೆಂಗೇರಿ ಯಲ್ಲಮ್ಮ ದೇವಿ ಭಕ್ತ ಮಂಡಳಿ ಪ್ರಕಟಿಸಿದ್ದು, ಪುಸ್ತಕ ಪ್ರಕಟಣೆಗೆ ಪ್ರೋತ್ಸಾಹ ನೀಡಿದ ಮಿತ್ರರಾದ ಶ್ರೀ ಕೆ.ಆರ್. ಸತ್ಯನಾರಾಯಣರು, ಶ್ರೀ ಮುನಿಆಂಜಿನಪ್ಪರು ಹಾಗೂ ಪುಸ್ತಕ ಬರವಣಿಗೆಗೆ ಮಾರ್ಗದರ್ಶನ ನೀಡಿದ ಶ್ರೀ ಟಿ.ಎಸ್. ಗೋಪಾಲ್ ರವರಿಗೆ ಲೇಖಕರು ಕೃತಜ್ಞತೆಗಳನ್ನು ಸಲ್ಲಿಸಿದರು.
