ಸುಳ್ಳು ಭರವಸೆ ನೀಡಿ, ಅಲೆದಾಡಿಸುವ ಪ್ರವೃತ್ತಿ ಮುಂದುವರೆಸುವ ಭೀಮರೆಡ್ಡಿಯನ್ನು ಕಂಪನಿಯಿಂದ ವಜಾಗೊಳಿಸಿ : ಭೀಮಶೆಟ್ಟಿ ಯಂಪಳ್ಳಿ
ಕಂಪನಿಯಲ್ಲಿ ಭೂಮಿ ಕಳೆದುಕೊಂಡ ಕುಟುಂಬ ಕ್ಕೆ ಖಾಯಂ ನೌಕರಿ ಒದಗಿಸದ ಚೆಟ್ಟಿನಾಡ ಸಿಮೆಂಟ್ ಕಂಪನಿ: ಸಿಪಿಐಎಂ ಪಕ್ಷ ಪ್ರತಿಭಟನೆ
ಸುಳ್ಳು ಭರವಸೆ ನೀಡಿ, ಅಲೆದಾಡಿಸುವ ಪ್ರವೃತ್ತಿ ಮುಂದುವರೆಸುವ ಭೀಮರೆಡ್ಡಿಯನ್ನು ಕಂಪನಿಯಿಂದ ವಜಾಗೊಳಿಸಿ : ಭೀಮಶೆಟ್ಟಿ ಯಂಪಳ್ಳಿ
ಚಿಂಚೋಳಿ : ಕಂಪನಿಗೆ ಭೂಮಿ ಕಳೆದುಕೊಂಡ ರೈತರ ಕುಟುಂಬಕ್ಕೆ ಖಾಯಂ ನೌಕರಿ ಒದಗಿಸದೆ ಸ್ಥಳೀಯರನ್ನು ಕಡೆಗಣಿಸಿ ಚಿಟ್ಟಿನಾಡು ಸಿಮೆಂಟ್ ಕಂಪನಿ ಅನ್ಯ ರಾಜ್ಯದ ಯುವಕರಿಗೆ ನೌಕರಿ ಒದಗಿಸುತ್ತಿದೆ. ಇದರಿಂದ ಸ್ಥಳೀಯ ತಾಲೂಕಿನ ಯುವಕರು ನಿರುದ್ಯೋಗಿಗಳಾಗಿ ರಸ್ತೆಯ ಮೇಲೆ ಅಲೆದಾಡುವಂತೆ ಮಾಡಿದೆ ಎಂದು ಆರೋಪಿಸಿ ಜಿಲ್ಲಾ ಕಾರ್ಯಾಧ್ಯಕ್ಷ ಭೀಮಶೆಟ್ಟಿ ಯಂಪಳ್ಳಿ ಅವರ ಮುಂದಾಳತ್ವದಲ್ಲಿ ಭಾರತ ಕಮ್ಯುನಿಸ್ಟ್ ಪಕ್ಷ (ಸಿಪಿಐಎಂ) ಕಂಪನಿ ಎದುರುಗಡೆ ಪ್ರತಿಭಟನೆ ನಡೆಸಿತ್ತು.
ರೈತರು ಕುಟುಂಬದಲ್ಲಿ ಒಬ್ಬರಿಗೆ ಖಾಯಂ ನೌಕರಿ ನೀಡಬೇಕೆಂದು ಷರತ್ತು ವಿಧಿಸಿ ಕಂಪನಿಗೆ ಕೃಷಿ ಭೂಮಿ ನೀಡಲಾಗಿದೆ. ಆದರೆ ಕಂಪನಿಯ ಭೀಮರೆಡ್ಡಿ ಅವರು ಕಂಪನಿಗೆ ಯಾವುದೇ ಭೂಮಿ ಒದಗಿಸದ ನೂರಾರು ಜನರಿಗೆ ಖಾಯಂ ನೌಕರಿ ನೀಡಿ ಸೇರಿಸಿಕೊಂಡು ಭೂಮಿ ಕಳೆದುಕೊಂಡ ಸ್ಥಳೀಯರಿಗೆ ಅನ್ಯಾಯ ಮಾಡಲಾಗಿದೆ. ಕಂಪನಿಯ ಭೀಮರೆಡ್ಡಿ ದಲಾಳಿಗಳಪರ ಕೆಲಸ ಮಾಡುತ್ತಿದಾರೆ ಎಂದು ಆರೋಪಿಸಿದ್ದಾರೆ. ಎರಡು ವರ್ಷದ ಹಿಂದೆ ಕಲ್ಲೂರ್ ಗ್ರಾಮದ ಭೂಮಿ ಕಳೆದುಕೊಂಡ 17 ಫಲಾನುಭವಿ ಕುಟುಂಬಗಳಿಗೆ ಖಾಯಂ ನೌಕರಿ ನೀಡುವಂತೆ ಆಗ್ರಹಿಸಿ ನಡೆಸಿದ ಹೋರಾಟಕ್ಕೆ ಇದೇ ಭೀಮರೆಡ್ಡಿ ಅವರು ಎರಡು ತಿಂಗಳಲ್ಲಿ ನೌಕರಿ ಒದಗಿಸಲಾಗುವುದೆಂದು ಆಶ್ವಾಸನೆ ನೀಡಿ, ಸುಳ್ಳು ಹೇಳಿ ಮೋಸ ಮಾಡುವ ಪ್ರವೃತ್ತಿ ರೆಡ್ಡಿ ಮುಂದುವರೆಸಿಕೊಂಡಿದ್ದಾರೆ. ಇಂತಹ ಸುಳ್ಳು ಭರವಸೆ ನೀಡುವ ಭೀಮರೆಡ್ಡಿಗೆ ಕಂಪನಿಯಿಂದ ವಜಾಗೊಳಿಸಿ, ಸ್ಥಳೀಯರಿಗೆ ನ್ಯಾಯಯುತ ಖಾಯಂ ನೌಕರಿ ಒದಗಿಸಿ ಸ್ಥಳೀಯ ನಿರುದ್ಯೋಗ ಸಮಸ್ಯೆ ನಿರ್ಮೂಲನೆ ಮಾಡಬೇಕೆನ್ನುವ ಬೇಡಿಕೆಗಳ ಮನವಿ ಪತ್ರವನ್ನು ತಹಸೀಲ್ದಾರರಿಗೆ ಮತ್ತು ಚೆಟ್ಟಿನಾಡ ಕಂಪನಿಗೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಿಪಿಎಂ ಜಾಫರ್ ಮೀರಿಯಾಣ, ಕಾರ್ಯದರ್ಶಿ ಪ್ರಭು ಪ್ಯಾರಾಬದಿ, ಜಗದೇವಿ ಚಂದನಕೇರಾ, ಹಣಮಂತರಾವ ದೇಶಪಾಂಡೆ, ಭೀಮಶಾ ಕೊರಡಂಪಳ್ಳಿ ಅವರು ಸೇರಿದಂತೆ ಸಿಪಿಐಎಂ ಪಕ್ಷದ ಕಾರ್ಯಕರ್ತರು ಇದ್ದರು.
