ಸಿರಿಗನ್ನಡ ವೇದಿಕೆಯ ಪ್ರಶಸ್ತಿ ಪ್ರದಾನ ಸಮಾರಂಭ ಸಾಧಕರ ಗುರುತಿಸುವಿಕೆ ಮುಖ್ಯ- ಡಾ.ಪೆರ್ಲ
ಸಿರಿಗನ್ನಡ ವೇದಿಕೆಯ ಪ್ರಶಸ್ತಿ ಪ್ರದಾನ ಸಮಾರಂಭ
ಸಾಧಕರ ಗುರುತಿಸುವಿಕೆ ಮುಖ್ಯ- ಡಾ.ಪೆರ್ಲ
ಕಲಬುರಗಿ:ಕಲ್ಯಾಣ ಕರ್ನಾಟಕ ಭಾಗದ ಸಾಹಿತಿಗಳು,ಸಾಧಕರಿಗೆ ಕೀಳರಿಮೆ ಬೇಡ ನಾವೇನು ಕಡಿಮೆ ಇಲ್ಲ ಸರಿಸಮಾನರು ಎಂದು ತೋರಿಸಿದ ವೇದಿಕೆ ಇದಾಗಿದೆ.ಕೊಡುವ ಕೈ ಮತ್ತು ಪಡೆಯುವ ಕೈ ಶುದ್ಧವಾಗಿರ ಬೇಕು.ಯೋಗ ಇಲ್ಲದವರಿಗೆ ಯೋಗ್ಯತೆ ಇರುವುದಿಲ್ಲ; ಯೋಗ್ಯತೆ ಇರುವವರಿಗೆ ಯೋಗ ಇರುವುದಿಲ್ಲ ಇಲ್ಲಿ ಸಾಧಕರ ಗುರುತಿಸಿ ಮುಖ್ಯವಾಹಿನಿಗೆ ತಂದಿದ್ದಾರೆ ಜವಾಬ್ದಾರಿ ಹೆಚ್ಚಿಸಿಕೊಂಡು ಕಾರ್ಯ ಮಾಡಬೇಕು ಎಂದು ಹಿರಿಯ ಸಾಹಿತಿ -ಆಕಾಶವಾಣಿ ನಿವೃತ್ತ ಕಾರ್ಯ ನಿರ್ವಾಹಕ ರಾದ ಡಾ.ಸದಾನಂದ ಪೆರ್ಲ ಸಲಹೆ ನೀಡಿದರು.
ರಂಗಾಯಣ ಸಭಾ ಭವನದಲ್ಲಿ ಸಿರಿಗನ್ನಡ ವೇದಿಕೆ ಜಿಲ್ಲೆ ಘಟಕ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ನಿಮಿತ್ಯ
ವಿಜ್ಞಾನ ರತ್ನ ಮತ್ತು ತ್ರಿವೇಣಿ ಸಂಗಮ ಪ್ರಶಸ್ತಿ ಪ್ರದಾನ ಹಾಗೂ ಪುಸ್ತಕ ಲೋಕಾರ್ಪಣೆಯಲ್ಲಿ ಮಾತನಾಡಿದ ಅವರು ಮಹಿಳೆಯರಿಗೆ೩೩% ಪ್ರತಿಶತ ಕೇಂದ್ರದಲ್ಲಿ ಅವಕಾಶ ಸಿಗುತ್ತದೆ.ಸಾಹಿತ್ಯ ಸಮಾಜ ಸೇವೆಯ ಮಹಿಳಾ ಮಣಿಗಳಿಗೆ ಅವಕಾಶ ಹೆಚ್ಚಲಿವೆ.ತಾವೆಲ್ಲ ಮುಂದೆ ಬರಬೇಕೆಂದರು.
ಭಾರತ ರತ್ನ ಸಿ.ವಿ ರಾಮನ್ ಮತ್ತು ಸಾವಿತ್ರಿಬಾಯಿ, ಫಾತಿಮಾಶೇಖ,ರಮಾಬಾಯಿ ಅಂಬೇಡ್ಕರ್ ಅವರ ಜೀವನ ಹೋರಾಟ,ತ್ಯಾಗ,ಶಿಕ್ಷಣ, ಅವರ ಸಾಮುದಾಯಿಕ ಚಿಂತನೆಯನ್ನು ನಮ್ಮ ಮಹಿಳೆಯರು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಕೇಂದ್ರ ಸಾಹಿತ್ಯ ಅಕಾಡೆಮಿ ಕನ್ನಡ ಸಲಹಾ ಸಮಿತಿ ಸದಸ್ಯೆ ಡಾ.ಜಯದೇವಿ ಗಾಯಕವಾಡ ಕಾರ್ಯಕ್ರಮ ಉದ್ಘಾಟಿಸಿ ಕರೆ ನೀಡಿದರು.
ಮುಖ್ಯ ಅತಿಥಿಗಳಾದ ವೈದ್ಯಾಧಿಕಾರಿ ಡಾ.ಸಂಧ್ಯಾ ಕಾನೇಕರ ಮಾತನಾಡಿ ತಂದೆ ಓದಿಸಿ ಬರೆಯಿಸಿದರೆ; ಪತಿ ನೌಕರಿ ಜೊತೆಗೆ ಸಮಾಜ ದುಡಿಮೆಗೆ ಅವಕಾಶ ಕಲ್ಪಿಸಿದವರನ್ನು ಮರೆಯಬಾರದೆಂದರು.ಹಿರಿಯ ಸಾಹಿತಿ ಡಾ.ಶೋಭಾದೇವಿ ಚೆಕ್ಕಿಯವರು ಮಹಿಳೆಯರ ಸಾಧನೆ ಅಗಾಧವಾಗಿದೆ.ಅವರ ಕಾರ್ಯ ಗಗನ ಮುಟ್ಟಿವೆ ಎಂದರು
ಹಿರಿಯ ಸಾಹಿತಿ ಪ್ರೊ.ಶಿವರಾಜ ಪಾಟೀಲ ಮಾತನಾಡಿ ಸಮಾಜದಲ್ಲಿ ಪ್ರಶಸ್ತಿ ಬಂದ ಮೇಲೆ ನಾವು ಪರಿವರ್ತನೆ ಆಗಿ ಒಳ್ಳೆಯ ದಾರಿಯಲ್ಲಿ ನಡೆಯಬೇಕೆಂದರು.ಗವಿಸಿದ್ಧಪ್ಪ ಒಬ್ಬ ಚಾಣಾಕ್ಷ ಸಂಘಟಕ,ಸಾಹಿತಿ,ಪ್ರತಿಭೆ ಗುರುತಿಸಿ ಅವರಿಗೆ ಪ್ರೋತ್ಸಾಹ ನೀಡುವಲ್ಲಿ ಸಫಲರಾಗಿದ್ದಾರೆಂದರು.
ಇದೇ ಸಂದರ್ಭದಲ್ಲಿ ಸಾಹಿತಿ ಡಾ.ಜಯದೇವಿ ಗಾಯಕವಾಡರ ಸಾಕಿ ಕೇಳಿದ ರುಬಾಯಿಗಳು ಎಂಬ ಕಾವ್ಯ ಸಂಕಲನ ಬಿಡುಗಡೆ ಮಾಡಿದ ಶಾಲಾ ಶಿಕ್ಷಣ ಇಲಾಖೆಯ ನಿರ್ದೇಶಕ ಡಾ.ಸತೀಶ್ ಕುಮಾರ ಹೊಸಮನಿ ಲೋಕಾರ್ಪಣೆ ಮಾಡಿ ಇಂತಹ ಅಪರೂಪದ ನಾಲ್ಕು ಸಾಲಿನ ಪದ್ಯ ಡಿವಿಜಿ,ಬ್ಯಾಳಿ,ಅಮರಚಿಂತ, ಮೊದಲಾದ ಕವಿಗಳು ಬರೆದಿದ್ದಾರೆ. ಆದರೆ ಮಹಿಳೆಯರು ಬರೆದ ಮೊದಲ ರುಬಾಯಿ ಸಂಕಲನ ಇದಾಗಿದೆ. ಇಲ್ಲಿ ಸಾಮಾಜಿಕ ಕಳಕಳಿ,ಮಹಿಳಾ,ಚಿಂತನೆ,ದಲಿತ ಪ್ರಜ್ಞೆ ವ್ಯಕ್ತ ವಾಗಿದೆ ಇದೊಂದು ಉತ್ತಮ ಕಾವ್ಯ ಸಂಕಲನ ಎಂದರು.
ಅಧ್ಯಕ್ಷತೆ ವಹಿಸಿದ ಜಿಲ್ಲಾಧ್ಯಕ್ಷ ಸಾಹಿತಿ ಡಾ.ಗವಿಸಿದ್ಧಪ್ಪ ಪಾಟೀಲ ಮಾತನಾಡಿ ಸಿರಿಗನ್ನಡ ವೇದಿಕೆ ಸಾಹಿತ್ಯ, ಸಂಸ್ಕೃತಿ ಬೆಳೆಸಿ,ಸಾಹಿತಿ,ಕವಿ,ಕಲಾವಿದರಿಗೆ ಮುಖ್ಯವಾಹಿ ನಿಗೆ ತಂದು ಉತ್ತಮ ಸಾಧಕರಿಗೆ ಕೊಡುವ ಪ್ರಶಸ್ತಿ ಅವರಿಗೆ ಉತ್ತೇಜನ ನೀಡುವುದಾಗಿದೆ ಎಂದರು.
ಬೇಲೂರು ಉರಿಲಿಂಗಪೆದ್ದಿ ಮಠದ ಪೂಜ್ಯ ಶ್ರೀ ಪಂಚಾಕ್ಷರಿ ಸ್ವಾಮೀಜಿ ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು.
ಡಾ.ಪೀರಪ್ಪ ಸಜ್ಜನ ಮತ್ತು ಶೋಭಾದೇವಿ ಚೆಕ್ಕಿ ಪ್ರಾರ್ಥನೆ ನೆರವೇರಿಸಿದರು.ಸ್ವಾಗತವನ್ನು ಕೋಶಾಧ್ಯಕ್ಷ ಸಿದ್ದರಾಮ ಸರಸಂಬಿ ಕೋರಿದರು.ಪ್ರಧಾನ ಕಾರ್ಯದರ್ಶಿ ಡಾ.ಸಿದ್ದಪ್ಪ ಹೊಸಮನಿ ಪ್ರಾಸ್ತಾವಿಕ ನುಡಿ ಆಡಿದರು. ಡಾ.ರಾಜಕುಮಾರ ಮಾಳಗೆ ನಿರೂಪಿಸಿದರು ಡಾ.ಶೀಲಾದೇವಿ ಬಿರಾದಾರ ವಂದಿಸಿದರು.
ಸಿ. ವಿ. ರಾಮನ್ ವಿಜ್ಞಾನ ರತ್ನ ಪ್ರಶಸ್ತಿ ಪುರಸ್ಕೃತರು:
ಡಾ. ವಿನಯ. ವಿ. ಕನ್ನೂರ,ಡಾ.ಎನ್.ಜಿ.ಶ್ರೀಧರ
ಶ್ರೀ ಯಮನೂರಪ್ಪ,ಶ್ರೀಮತಿ ಸ್ನೇಹಾ ಕಟ್ಟಿಮನಿ,ಶ್ರೀ ಶರಣಪ್ಪ ಗದ್ದೇಗಾಂವ್,ಶ್ರೀಮತಿ ಪ್ರಭಾವತಿ ಸಿದ್ದಪ್ಪ ಮೇಟಿ
ಡಾ. ದೊಂಡಿಬಾ ವಿಶ್ವನಾಥ,ಶ್ರೀ ಶ್ರೀಧರ ವಿರುಪಯ್ಯ ಬಳಿಗೇರ,ಶ್ರೀಮತಿ ಪಂಚಶೀಲಾ ಕಟ್ಟಿಮನಿ,ಶ್ರೀ ಮಹಾಲಿಂ ಗ ಪಂಚಾಕ್ಷರಿ,ಶ್ರೀ ರಾಜಶೇಖರಯ್ಯ ಹಿರೇಮಠ
ಶ್ರೀ ಮಲ್ಲಣ್ಣ ಕರೇಕಲ್,ಕು. ಶೋಭಾ ಕಟ್ಟಿಮನಿ,ಪೂಜಾರಿ ಸಂಜಯಕುಮಾರ್ ಶಾಂತಪ್ಪ,ಡಾ. ಚಂದ್ರಶೇಖರ ಆರ್. ಚಿಕ್ಕೇಗೌಡ.ಶ್ರೀಮತಿ ಉಷಾದೇವಿ ಜಗದೇವ,ಶ್ರೀ ಮಹ ಮ್ಮದ್ ಇಸ್ರಾರ ಪಟೇಲ,ಡಾ. ಅರುಣ
ಸಾವಿತ್ರಿಬಾಯಿ ಫುಲೆ ಪ್ರಶಸ್ತಿ ಪುರಸ್ಕೃತರು:
ಡಾ. ವಿಜಯಲಕ್ಷ್ಮೀ ರಾಠೋಡ,ಶ್ರೀಮತಿ ಗಿರಿಜಾದೇವಿ ಶ್ರೀಶೈಲ್ ನಾಗರಾಳ,ಶ್ರೀಮತಿ ಬಸವಲಿಂಗಮ್ಮ ಉಮೇಶ ಕಲ್ಲಾ,ಶ್ರೀ ರಮೇಶ್ ಚಿಚಕೋಟೆ,ಶ್ರೀಮತಿ ಶ್ವೇತಾ ದಿವಾಕರ ಸ್ವಾಮಿ ಪಂಚಾನನಗುರು,ಶ್ರೀ ಪ್ರಭು ಎಸ್. ನೀಲಂಕಾರ
ಡಾ. ರೇಣುಕಾ ಬಿರಾದಾರ.ಪ್ರೊ. ಸುನಂದಾ ತಾಯಪ್ಪ
ಶ್ರೀ ಕೃಷ್ಣ ಕಾಂತಿ,ಶ್ರೀ ಸಿದ್ದಣ್ಣ ಓದಿ,ಶ್ರೀಮತಿ ಮಲ್ಲಮ್ಮ ಮಲ್ಲಿಕಾರ್ಜುನ.
ಫಾತಿಮಾ ಶೇಖ್ ಪ್ರಶಸ್ತಿ ಪುರಸ್ಕೃತರು:
ಡಾ. ಖಾಜಾವಲಿ ಈಚನಾಳ,ಶ್ರೀ ಸೂರ್ಯಕಾಂತ ಪಿ. ಅತನೂರ,ಡಾ. ನಾನಾಗೌಡ ಜಿ. ಪಾಟೀಲ,ಶ್ರೀಮತಿ ಸೈರಾಬಾನು ರ. ಹತ್ತಿಗೇರಿ,ಡಾ. ಸುಖದೇವಿ ಘಂಟೆ
ಶ್ರೀಮತಿ ಬಸಮ್ಮ ಶೇಖರ,ಶ್ರೀ ಜಲೀಲ್ ಪಟೇಲ
ಶ್ರೀ ರಹಮಾನ ಡಿ.,ಕು. ಗೀತಾ ಹೊಸಮನಿ
ರಮಾಬಾಯಿ ಅಂಬೇಡ್ಕರ್ ಪ್ರಶಸ್ತಿ ಪುರಸ್ಕೃತರು:
ಶ್ರೀಮತಿ ಜಗದೇವಿ ಶಿವಪುತ್ರ ಕಲಕೋರೆ,ಶ್ರೀಮತಿ ಶರಣಮ್ಮ ರವಿಕುಮಾರ,ಶ್ರೀ ಸಂತೋಷ್ ಪೋದ್ಧಾರ
ಶ್ರೀಮತಿ ಶ್ವೇತಾ ಪ್ರವೀಣ ಸಾಲಿಮಠ
ಕು. ಪ್ರೀತಿ,ಶ್ರೀಮತಿ ಪಾರ್ವತಿ,ಕು. ಅಂಬಿಕಾ,ಶ್ರೀಮತಿ ರೇಣುಕಾ ಕನಕಪ್ಪ ಕೂಚಬಾಳ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
