ಮೊದಲ ರುಬಾಯಿ ಪ್ರಕಟಿಸಿದ ಕವಯತ್ರಿ ಜಯದೇವಿ- ಡಾ. ಸತೀಶ್ ಕುಮಾರ ಹೊಸಮನಿ ಬಣ್ಣನೆ
ಮೊದಲ ರುಬಾಯಿ ಪ್ರಕಟಿಸಿದ ಕವಯತ್ರಿ ಜಯದೇವಿ- ಡಾ. ಸತೀಶ್ ಕುಮಾರ ಹೊಸಮನಿ ಬಣ್ಣನೆ
ಕಲಬುರಗಿ: ರುಬಾಯಿ ಇರಾನಿನಲ್ಲಿ ಹುಟ್ಟಿ ಫಾರಸಿ ಕವಿ ಉಮರ್ ಖಯ್ಯಾಮ್ ನಿಂದ ಪ್ರಸಿದ್ಧವಾದ ಚಿಕ್ಕ ಕಾವ್ಯ, ಪ್ರತಿಮೆ,ರೂಪಕದ ಮೂಲಕ ಜೀವನಾನುಭವ ಹೇಳುವ ಕಾವ್ಯವನ್ನು ಕನ್ನಡದಲ್ಲಿ ಹಲವರು ಕವಿಗಳು ಬರೆದರೂ ಮಹಿಳೆ ಬರೆದದ್ದು ಡಾ.ಜಯದೇವಿ ಗಾಯಕವಾಡರ ಸಾಕಿ ಕೇಳಿದ ರುಬಾಯಿಗಳು ಐದನೂರು ರುಬಾಯಿಯಲ್ಲಿ
ಶಕ್ತಿಯಿವೆ ಎಂದು ಶಾಲಾ ಶಿಕ್ಷಣ ಇಲಾಖೆಯ ನಿರ್ದೇಶಕ ಡಾ.ಸತೀಶ್ ಕುಮಾರ ಹೊಸಮನಿ ಅಭಿಪ್ರಾಯ ಪಟ್ಟರು.
ರಂಗಾಯಣ ಸಭಾ ಭವನದಲ್ಲಿ ಸಿರಿಗನ್ನಡ ವೇದಿಕೆ ಜಿಲ್ಲೆ ಘಟಕ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ನಿಮಿತ್ಯ
ವಿಜ್ಞಾನ ರತ್ನ ಮತ್ತು ತ್ರಿವೇಣಿ ಸಂಗಮ ಪ್ರಶಸ್ತಿ ಪ್ರದಾನ ಹಾಗೂ ಪುಸ್ತಕ ಲೋಕಾರ್ಪಣೆಯಲ್ಲಿ ಮಾತನಾಡಿದ ಅವರು ಜಯದೇವಿ ಅವರು ನಾಡಿನ ಶ್ರೇಷ್ಠ ಲೇಖಕಿ, ಅವರಿಗೆ ಸರಕಾರದ ಹಲವು ಶ್ರೇಷ್ಠ ಪ್ರಶಸ್ತಿ ಅವರಿಗೆ ನೀಡಲು ಸರಕಾರಕ್ಕೆ ಒತ್ತಾಯಿಸಿದರು.ಸರಕಾರಿ ಶಾಲಾ,ಕಾಲೇಜುಗಳಲ್ಲಿ ಅಭ್ಯಾಸ ಮಾಡಿಸಲು ಪಾಲಕರಿಗೆ ಕರೆ ನೀಡಿ ಮೊದಲ ಮಹಿಳಾ ರುಬಾಯಿ ಬರೆದ ಕೀರ್ತಿ ಡಾ.ಗಾಯಕವಾಡ ಮೇಡಂ ಅವರಿಗೆ ಸಲ್ಲುತ್ತದೆಂದರು.
ಕಲ್ಯಾಣ ಕರ್ನಾಟಕ ಭಾಗದ ಸಾಹಿತಿಗಳು,ಸಾಧಕರಿಗೆ ಕೀಳರಿಮೆ ಬೇಡ ನಾವೇನು ಕಡಿಮೆ ಇಲ್ಲ ಸರಿಸಮಾನರು ಎಂದು ತೋರಿಸಿದ ವೇದಿಕೆ ಇದಾಗಿದೆ.ಕೊಡುವ ಕೈ ಮತ್ತು ಪಡೆಯುವ ಕೈ ಶುದ್ಧವಾಗಿರ ಬೇಕು.ಯೋಗ ಇಲ್ಲದವರಿಗೆ ಯೋಗ್ಯತೆ ಇರುವುದಿಲ್ಲ; ಯೋಗ್ಯತೆ ಇರುವವರಿಗೆ ಯೋಗ ಇರುವುದಿಲ್ಲ ಇಲ್ಲಿ ಸಾಧಕರ ಗುರುತಿಸಿ ಮುಖ್ಯವಾಹಿನಿಗೆ ತಂದಿದ್ದಾರೆ ಜವಾಬ್ದಾರಿ ಹೆಚ್ಚಿಸಿಕೊಂಡು ಕಾರ್ಯ ಮಾಡಬೇಕು ಎಂದು ಹಿರಿಯ ಸಾಹಿತಿ -ಆಕಾಶವಾಣಿ ನಿವೃತ್ತ ಕಾರ್ಯ ನಿರ್ವಾಹಕ ರಾದ ಡಾ.ಸದಾನಂದ ಪೆರ್ಲ ಪ್ರಶಸ್ತಿ ಪ್ರದಾನ ಮಾಡಿ ಸಲಹೆ ನೀಡಿದರು.
ಮುಖ್ಯ ಅತಿಥಿಗಳಾದ ವೈದ್ಯಾಧಿಕಾರಿ ಡಾ.ಸಂಧ್ಯಾ ಕಾನೇಕರ ಮಾತನಾಡಿ ತಂದೆ ಓದಿಸಿ ಬರೆಯಿಸಿದರೆ; ಪತಿ ನೌಕರಿ ಜೊತೆಗೆ ಸಮಾಜ ದುಡಿಮೆಗೆ ಅವಕಾಶ ಕಲ್ಪಿಸಿದವರನ್ನು ಮರೆಯಬಾರದೆಂದರು.ಹಿರಿಯ ಸಾಹಿತಿ ಡಾ.ಶೋಭಾದೇವಿ ಚೆಕ್ಕಿಯವರು ಮಹಿಳೆಯರ ಸಾಧನೆ ಅಗಾಧವಾಗಿದೆ.ಅವರ ಕಾರ್ಯ ಗಗನ ಮುಟ್ಟಿವೆ ಎಂದರು
ಹಿರಿಯ ಸಾಹಿತಿ ಪ್ರೊ.ಶಿವರಾಜ ಪಾಟೀಲ ಮಾತನಾಡಿ ಸಮಾಜದಲ್ಲಿ ಪ್ರಶಸ್ತಿ ಬಂದ ಮೇಲೆ ನಾವು ಪರಿವರ್ತನೆ ಆಗಿ ಒಳ್ಳೆಯ ದಾರಿಯಲ್ಲಿ ನಡೆಯಬೇಕೆಂದರು.ಗವಿಸಿದ್ಧಪ್ಪ ಒಬ್ಬ ಚಾಣಾಕ್ಷ ಸಂಘಟಕ,ಸಾಹಿತಿ,ಪ್ರತಿಭೆ ಗುರುತಿಸಿ ಅವರಿಗೆ ಪ್ರೋತ್ಸಾಹ ನೀಡುವಲ್ಲಿ ಸಫಲರಾಗಿದ್ದಾರೆಂದರು
ಅಧ್ಯಕ್ಷತೆ ವಹಿಸಿದ ಜಿಲ್ಲಾಧ್ಯಕ್ಷ ಸಾಹಿತಿ ಡಾ.ಗವಿಸಿದ್ಧಪ್ಪ ಪಾಟೀಲ ಮಾತನಾಡಿ ಸಿರಿಗನ್ನಡ ವೇದಿಕೆ ಸಾಹಿತ್ಯ, ಸಂಸ್ಕೃತಿ ಬೆಳೆಸಿ,ಸಾಹಿತಿ,ಕವಿ,ಕಲಾವಿದರಿಗೆ ಮುಖ್ಯವಾಹಿ ನಿಗೆ ತಂದು ಉತ್ತಮ ಸಾಧಕರಿಗೆ ಕೊಡುವ ಪ್ರಶಸ್ತಿ ಅವರಿಗೆ ಉತ್ತೇಜನ ನೀಡುವುದಾಗಿದೆ ಎಂದರು.
ಬೇಲೂರು ಉರಿಲಿಂಗಪೆದ್ದಿ ಮಠದ ಪೂಜ್ಯ ಶ್ರೀ ಪಂಚಾಕ್ಷರಿ ಸ್ವಾಮೀಜಿ ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು.
ಡಾ.ಪೀರಪ್ಪ ಸಜ್ಜನ ಮತ್ತು ಶೋಭಾದೇವಿ ಚೆಕ್ಕಿ ಪ್ರಾರ್ಥನೆ ನೆರವೇರಿಸಿದರು.ಸ್ವಾಗತವನ್ನು ಕೋಶಾಧ್ಯಕ್ಷ ಸಿದ್ದರಾಮ ಸರಸಂಬಿ ಕೋರಿದರು.ಪ್ರಧಾನ ಕಾರ್ಯದರ್ಶಿ ಡಾ.ಸಿದ್ದಪ್ಪ ಹೊಸಮನಿ ಪ್ರಾಸ್ತಾವಿಕ ನುಡಿ ಆಡಿದರು. ಡಾ.ರಾಜಕುಮಾರ ಮಾಳಗೆ ನಿರೂಪಿಸಿದರು ಡಾ.ಶೀಲಾದೇವಿ ಬಿರಾದಾರ ವಂದಿಸಿದರು.
ಸಿ. ವಿ. ರಾಮನ್ ವಿಜ್ಞಾನ ರತ್ನ ಪ್ರಶಸ್ತಿ ಪುರಸ್ಕೃತರು:
ಡಾ. ವಿನಯ. ವಿ. ಕನ್ನೂರ,ಡಾ.ಎನ್.ಜಿ.ಶ್ರೀಧರ
ಶ್ರೀ ಯಮನೂರಪ್ಪ,ಶ್ರೀಮತಿ ಸ್ನೇಹಾ ಕಟ್ಟಿಮನಿ,ಶ್ರೀ ಶರಣಪ್ಪ ಗದ್ದೇಗಾಂವ್,ಶ್ರೀಮತಿ ಪ್ರಭಾವತಿ ಸಿದ್ದಪ್ಪ ಮೇಟಿ
ಡಾ. ದೊಂಡಿಬಾ ವಿಶ್ವನಾಥ,ಶ್ರೀ ಶ್ರೀಧರ ವಿರುಪಯ್ಯ ಬಳಿಗೇರ,ಶ್ರೀಮತಿ ಪಂಚಶೀಲಾ ಕಟ್ಟಿಮನಿ,ಶ್ರೀ ಮಹಾಲಿಂ ಗ ಪಂಚಾಕ್ಷರಿ,ಶ್ರೀ ರಾಜಶೇಖರಯ್ಯ ಹಿರೇಮಠ
ಶ್ರೀ ಮಲ್ಲಣ್ಣ ಕರೇಕಲ್,ಕು. ಶೋಭಾ ಕಟ್ಟಿಮನಿ,ಪೂಜಾರಿ ಸಂಜಯಕುಮಾರ್ ಶಾಂತಪ್ಪ,ಡಾ. ಚಂದ್ರಶೇಖರ ಆರ್. ಚಿಕ್ಕೇಗೌಡ.ಶ್ರೀಮತಿ ಉಷಾದೇವಿ ಜಗದೇವ,ಶ್ರೀ ಮಹ ಮ್ಮದ್ ಇಸ್ರಾರ ಪಟೇಲ,ಡಾ. ಅರುಣ
ಸಾವಿತ್ರಿಬಾಯಿ ಫುಲೆ ಪ್ರಶಸ್ತಿ ಪುರಸ್ಕೃತರು:ಡಾ. ಸುಖದೇವಿ .ಎಂ ಘಂಟೆ.
ಡಾ. ವಿಜಯಲಕ್ಷ್ಮೀ ರಾಠೋಡ,ಶ್ರೀಮತಿ ಗಿರಿಜಾದೇವಿ ಶ್ರೀಶೈಲ್ ನಾಗರಾಳ,ಶ್ರೀಮತಿ ಬಸವಲಿಂಗಮ್ಮ ಉಮೇಶ ಕಲ್ಲಾ,ಶ್ರೀ ರಮೇಶ್ ಚಿಚಕೋಟೆ,ಶ್ರೀಮತಿ ಶ್ವೇತಾ ದಿವಾಕರ ಸ್ವಾಮಿ ಪಂಚಾನನಗುರು,ಶ್ರೀ ಪ್ರಭು ಎಸ್. ನೀಲಂಕಾರ
ಡಾ. ರೇಣುಕಾ ಬಿರಾದಾರ.ಪ್ರೊ. ಸುನಂದಾ ತಾಯಪ್ಪ
ಶ್ರೀ ಕೃಷ್ಣ ಕಾಂತಿ,ಶ್ರೀ ಸಿದ್ದಣ್ಣ ಓದಿ,ಶ್ರೀಮತಿ ಮಲ್ಲಮ್ಮ ಮಲ್ಲಿಕಾರ್ಜುನ.
ಫಾತಿಮಾ ಶೇಖ್ ಪ್ರಶಸ್ತಿ ಪುರಸ್ಕೃತರು:
ಡಾ. ಖಾಜಾವಲಿ ಈಚನಾಳ,ಶ್ರೀ ಸೂರ್ಯಕಾಂತ ಪಿ. ಅತನೂರ,ಡಾ. ನಾನಾಗೌಡ ಜಿ. ಪಾಟೀಲ,ಶ್ರೀಮತಿ ಸೈರಾಬಾನು ರ. ಹತ್ತಿಗೇರಿ,
ಶ್ರೀಮತಿ ಬಸಮ್ಮ ಶೇಖರ,ಶ್ರೀ ಜಲೀಲ್ ಪಟೇಲ
ಶ್ರೀ ರಹಮಾನ ಡಿ.,ಕು. ಗೀತಾ ಹೊಸಮನಿ
ರಮಾಬಾಯಿ ಅಂಬೇಡ್ಕರ್ ಪ್ರಶಸ್ತಿ ಪುರಸ್ಕೃತರು:
ಶ್ರೀಮತಿ ಜಗದೇವಿ ಶಿವಪುತ್ರ ಕಲಕೋರೆ,ಶ್ರೀಮತಿ ಶರಣಮ್ಮ ರವಿಕುಮಾರ,ಶ್ರೀ ಸಂತೋಷ್ ಪೋದ್ಧಾರ
ಶ್ರೀಮತಿ ಶ್ವೇತಾ ಪ್ರವೀಣ ಸಾಲಿಮಠ
ಕು. ಪ್ರೀತಿ,ಶ್ರೀಮತಿ ಪಾರ್ವತಿ,ಕು. ಅಂಬಿಕಾ,ಶ್ರೀಮತಿ ರೇಣುಕಾ ಕನಕಪ್ಪ ಕೂಚಬಾಳ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ವರದಿ ಡಾ .ಅವಿನಾಶ .ಎಸ್. ದೇವನೂರ .
