ವಿಮಾ ಕಂಪನಿಯಿಂದ ಅನ್ಯಾಯ : ರೈತರಿಂದ ಆಕ್ರೋಶ ಜ್ವಾಲೆಯ ಬೃಹತ್ ಪ್ರತಿಭಟನೆ ಹೆದ್ದಾರಿ ತಡೆದು ರಸ್ತೆಯ ಮೇಲೆ ಅಡುಗೆ ಬೇಯಿಸಿ ಉಣಬಡಿಸಿದ ರೈತರು

ವಿಮಾ ಕಂಪನಿಯಿಂದ ಅನ್ಯಾಯ : ರೈತರಿಂದ ಆಕ್ರೋಶ ಜ್ವಾಲೆಯ ಬೃಹತ್ ಪ್ರತಿಭಟನೆ  ಹೆದ್ದಾರಿ ತಡೆದು ರಸ್ತೆಯ ಮೇಲೆ ಅಡುಗೆ ಬೇಯಿಸಿ ಉಣಬಡಿಸಿದ ರೈತರು

ವಿಮಾ ಕಂಪನಿಯಿಂದ ಅನ್ಯಾಯ : ರೈತರಿಂದ ಆಕ್ರೋಶ ಜ್ವಾಲೆಯ ಬೃಹತ್ ಪ್ರತಿಭಟನೆ 

ಹೆದ್ದಾರಿ ತಡೆದು ರಸ್ತೆಯ ಮೇಲೆ ಅಡುಗೆ ಬೇಯಿಸಿ ಉಣಬಡಿಸಿದ ರೈತರು 

ಚಿಂಚೋಳಿ : ತಾಲೂಕಿನ ಸುಲೇಪೇಟ ಹೋಬಳಿ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಗ್ರಾಮಗಳ ರೈತರಿಗೆ ಸಿಗಬೇಕಾದ ಬೆಳೆ ವಿಮೆ ಪರಿಹಾರದಲ್ಲಿ ತಾರತಮ್ಯವಾಗಿದೆ ಎಂದು ಆಗ್ರಹಿಸಿ, ಸುಲೇಪೇಟ ನಾಗರೀಕ ಹಿತರಕ್ಷಣಾ ಸಮಿತಿ ಸುಮಾರು 6 ಗಂಟೆಗಳ ಕಾಲ ಬಸವೇಶ್ವರ ವೃತ್ತ ಸುತ್ತುವರೆದು ಬೃಹತ್ ಪ್ರತಿಭಟನೆ ನಡೆಸಿತ್ತು.

ಈ ಭಾಗದ ಪ್ರತಿಯೊಬ್ಬ ರೈತರಿಂದ ಸಾವಿರಾರು ರೂಪಾಯಿಗಳ ಹಣ ವಿಮಾ ಕಂಪನಿಯವರು ಪಡೆದಿದ್ದಾರೆ. ಆದರೆ ಪರಿಹಾರದ ರೂಪದಲ್ಲಿ ಕೇವಲ 100-200 ರೂಪಾಯಿಗಳು ಮಾತ್ರ ರೈತರ ಖಾತೆಗೆ ಜಮಾ ಮಾಡಿರುತ್ತಾರೆ. ರೈತರ ನಿರೀಕ್ಷೆಯಂತೆ ಹಣ ಬಂದಿರುವುದಿಲ್ಲ. ಆದ್ದರಿಂದ ಈ ಭಾಗದ ರೈತರಿಗೆ ವಿಮಾ ಕಂಪನಿಯಿಂದ ಅನ್ಯಾಯವಾಗಿದೆ ಎಂದು ರೈತರು ದೂರಿದ್ದಾರೆ. ಕಳೆದ ವರ್ಷ ಈ ಭಾಗದ ರೈತರ ಬೆಳೆಗಳು ಅತಿವೃಷ್ಠಿಯಿಂದ ಸಂಪೂರ್ಣ ನಾಶವಾಗಿತ್ತು. ಅಧಿಕಾರಿಗಳು ವಿಮಾ ಕಂಪನಿಗಳಿಗೆ 14% ರಿಂದ 18% ರಷ್ಟು ಹಾನಿಯಾಗಿದೆ ಎಂದು ತಪ್ಪು ಮಾಹಿತಿ ಒದಗಿಸಿದ್ದಾರೆ. ಆದರೆ ಈ ಭಾಗದ ರೈತರ ಬೆಳೆಗಳು 70% ರಿಂದ 80% ರಷ್ಟು ಬೆಳೆಗಳು ಹಾನಿಯಾಗಿರುತ್ತದೆ. ಸರಕಾರ ಈ ಭಾಗದ ರೈತರ ಕಡೆಗೆ ಗಮನಹರಿಸಿ ರೈತರಿಗೆ ಹೆಚ್ಚಿನ ವಿಮಾ ಹಣ ಬಿಡುಗಡೆಗೊಳಿಸಬೇಕು.ನೊಂದ ರೈತ ಕುಟುಂಬಗಳಿಗೆ ಆದ ಅನ್ಯಾಯವನ್ನು ಸರಿಪಡಿಸಬೇಕೆಂದು ಆಗ್ರಹಿಸಿ ಸರಕಾರಕ್ಕೆ ಒತ್ತಾಯಿಸಿದ್ದಾರೆ. ಸುಲೇಪೇಟ ಮತ್ತು ಸುತ್ತಮುತ್ತಲಿನ ಸುಮಾರು 40 ಹಳ್ಳಿಗಳ ರೈತರಿಗೆ 2025-26ನೇ ಸಾಲಿನ ಬೆಳೆ ವಿಮೆ ಕೂಡಲೇ ರೈತರ ಖಾತೆಗಳಿಗೆ ಜಮಾ ಮಾಡಬೇಕೆಂಬ ಸೇರಿ ವಿವಿಧ ಬೇಡಿಕೆಗಳ ಮನವಿ ಪತ್ರವನ್ನು ಚಿಂಚೋಳಿ ತಹಸೀಲ್ದಾರ್ ರ ಮೂಲಕ ಮುಖ್ಯ ಮಂತ್ರಿಗಳಿಗೆ ಸಲ್ಲಿಸಿದರು.

•ಪ್ರತಿಭಟನೆ ಸಡಿಲಿಸದ ರೈತರು : 

ವಿಮಾ ಕಂಪನಿಯಿಂದ ಆದ ಅನ್ಯಾಯವನ್ನು ಸರಿಪಡಿಸಬೇಕೆಂಬ ಉದ್ದೇಶದೊಂದಿಗೆ ರೈತರು ಬೆಳಿಗ್ಗೆ 10 ಗಂಟೆಯಿಂದ 4 ಗಂಟೆಯವರೆಗೆ ಸುಮಾರು 6 ಗಂಟೆಗಳ ಕಾಲ ರಸ್ತೆ ತಡೆದು ಪ್ರತಿಭಟನೆ ನಡೆಸಿತು. ಇದ್ದರಿಂದ ಕಲಬುರಗಿ -ಚಿಂಚೋಳಿ ಮತ್ತು ಸೇಡಂ -ಚಿಂಚೋಳಿ ಹಾಗೂ ಚಿಂಚೋಳಿ ಹುಮ್ನಾಬಾದ್ ಮುಖ್ಯ ರಸ್ತೆಗಳು ಬಂದ್ ಮಾಡಿ, ಟೈರ್ ಗೆ ಬೆಂಕಿ ಹಚ್ಚಿ ಕಂಪನಿಯ ಅನ್ಯಾಯದ ವಿರುದ್ಧ ಆಕ್ರೋಶದ ಜ್ವಾಲೆ ರೈತರು ಹೋರಹಾಕಿದರು.

•ಮುಖ್ಯ ಹೆದ್ದಾರಿ ರಸ್ತೆಯ ಮೇಲೆ ಅಡುಗೆ : ರೈತರು ವಿಮಾ ಕಂಪನಿ ರೈತರಿಗೆ ಅನ್ಯಾಯ ಮಾಡಿರುವ ಹಿನ್ನಲೆಯನಲ್ಲಿ ಕಲಬುರ್ಗಿ ಕೃಷಿ ಜಂಟಿ ನಿರ್ದೇಶಕರು ಬಂದು ಮನವಿ ಪಡೆಯುವವರೆಗೂ ಪ್ರತಿಭಟನೆ ಕೈಬಿಡುವುದಿಲ್ಲ ಎಂದು ಪಟ್ಟು ಹಿಡಿದು ಕೂತ ರೈತರು ಕಂಪನಿ ಧೋರಣೆ ಖಂಡಿಸಿ ರಸ್ತೆಯ ಮೇಲೆ ಅಡುಗೆ ಮಾಡಿ ಉಣಬಡಿಸಿದರು.  

ಈ ಪ್ರತಿಭಟನೆಯಲ್ಲಿ ಸುಲೇಪೇಟ ನಾಗರೀಕ ಹಿತಾರಕ್ಷಣಾ ಸಮಿತಿ ಅಧ್ಯಕ್ಷ ಮುರಗೆಪ್ಪ ಕುಕ್ಕಡಿ, ಮಲ್ಲಿಕಾರ್ಜುನ ದೇಸಾಯಿ, ಶರಣಬಸಪ್ಪ ಸ್ವಂತ, ರುದ್ರಮುನಿ ರಾಮತೀರ್ಥ, ಚೇತನ ಸುಲೇಪೇಟ, ಶರಣಬಸಪ್ಪ ಮಮ್ಮಶೆಟ್ಟಿ, ರುದ್ರಶೆಟ್ಟಿ ಪಡಶೆಟ್ಟಿ, ಮಲ್ಲಿಕಾರ್ಜುನ, ವೀರಶೆಟ್ಟಿ ತಾರಾಪೂರ್, ಪ್ರಕಾಶ ಸಜ್ಜನ ಅವರು ಸೇರಿದಂತೆ ಸುಲೇಪೇಟ ಹೋಬಳಿಯ ಸುತ್ತಮುತ್ತಲಿನ ಗ್ರಾಮಗಳ ರೈತರು ಇದ್ದರು.