ರಾಮಚಂದ್ರ ಕಾಂಬಳೆ ಅವರ 60ನೇ ಜನ್ಮದಿನ: ಅನ್ನದಾನ, ಸಿಹಿ ವಿತರಣೆ
ರಾಮಚಂದ್ರ ಕಾಂಬಳೆ ಅವರ 60ನೇ ಜನ್ಮದಿನ: ಅನ್ನದಾನ, ಸಿಹಿ ವಿತರಣೆ
ಕಲಬುರಗಿ: ನಗರದ ಗೆಳೆಯರ ಬಳಗದ ವತಿಯಿಂದ ಹಸಿರು ಕ್ರಾಂತಿಯ ಹರಿಕಾರ ಹಾಗೂ ಭಾರತದ ಮಾಜಿ ಉಪಪ್ರಧಾನಿ ಡಾ. ಬಾಬು ಜಗಜೀವನ್ ರಾಮ್ ಅವರ ಪುತ್ಥಳಿ ಆವರಣದಲ್ಲಿ ಮಾತಂಗ ವಿಕಾಸ ಸಮಿತಿಯ ರಾಜ್ಯಾಧ್ಯಕ್ಷ ರಾಮಚಂದ್ರ ಕಾಂಬಳೆ ಅವರ 60ನೇ ಜನ್ಮದಿನದ ಅಂಗವಾಗಿ ಅನ್ನದಾನ ಹಾಗೂ ಸಿಹಿ ವಿತರಣೆ ಕಾರ್ಯಕ್ರಮ ನಡೆಯಿತು.
ಶೋಷಿತ ಜನ ಜಾಗೃತಿ ವೇದಿಕೆಯ ರಾಜ್ಯ ಪ್ರಧಾನ ಸಂಚಾಲಕ ಬಸವರಾಜ ಜವಳಿ, ಕಾಂಗ್ರೆಸ್ ಸೋಶಿಯಲ್ ಮೀಡಿಯಾ ಜಿಲ್ಲಾ ಸಂಯೋಜಕ ಮಂಜುನಾಥ ನಾಲ್ವರ್ಕರ್, ಮಾದಿಗ ದಂಡೋರ ರಾಜ್ಯ ಕಾರ್ಯದರ್ಶಿ ರಾಜು ಹದನೂರ್, ಮಹಿಳಾಪರ ವೇದಿಕೆಯ ರಾಜ್ಯಾಧ್ಯಕ್ಷೆ ಜಿಗಿದೇವಿ ಹೆಗಡೆ, ಮಹದೇವ ಕವಲೆ, ಮಲ್ಲಿಕಾರ್ಜುನ ಚಟ್ನಹಳ್ಳಿ, ದೇವಿಂದ್ರ ಭಟ್ಟರಗಿ ಸೇರಿದಂತೆ ಗೆಳೆಯರ ಬಳಗದ ಸದಸ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ರಾಮಚಂದ್ರ ಕಾಂಬಳೆ ಅವರಿಗೆ 60ನೇ ಜನ್ಮದಿನದ ಶುಭಾಶಯಗಳನ್ನು ಸಲ್ಲಿಸಿ, ಅವರ ಸಾಮಾಜಿಕ ಸೇವೆ ಹಾಗೂ ಸಮುದಾಯದ ಅಭಿವೃದ್ಧಿಗೆ ನೀಡುತ್ತಿರುವ ಕೊಡುಗೆಯನ್ನು ಗಣ್ಯರು ಶ್ಲಾಘಿಸಿದರು.

