ಸತತ 4 ನೇ ಬಾರಿಗೆ ಎನ್ ಪಿ ಟಿ ಎಲ್ ಪ್ರಶಸ್ತಿಗೆ ಭಾಜನರಾದ ಪಿ ಡಿ ಎ ಇಂಜಿನಿಯರಿಂಗ್ ಕಾಲೇಜು ಪ್ರಾಧ್ಯಾಪಕಿ ಡಾ ಜಯಶ್ರೀ ಅಗರಖೇಡ್
ಸತತ 4 ನೇ ಬಾರಿಗೆ ಎನ್ ಪಿ ಟಿ ಎಲ್ ಪ್ರಶಸ್ತಿಗೆ ಭಾಜನರಾದ ಪಿ ಡಿ ಎ ಇಂಜಿನಿಯರಿಂಗ್ ಕಾಲೇಜು ಪ್ರಾಧ್ಯಾಪಕಿ ಡಾ ಜಯಶ್ರೀ ಅಗರಖೇಡ್
ಕಲಬುರ್ಗಿ: ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಪೂಜ್ಯ ದೊಡ್ಡಪ್ಪ ಅಪ್ಪ ಇಂಜಿನಯರಿಂಗ್ ಕಾಲೇಜು ಎನ್ ಪಿ ಟಿ ಇ ಎಲ್ ಆನ್ಲೈನ್ ಕಲಿಕಾ ತರಬೇತಿಯಲ್ಲಿ ಅತ್ಯುತ್ತಮ ಭಾಗವಹಿಸುವಿಕೆಗಾಗಿ ಎನ್ ಪಿ ಟಿ ಇ ಎಲ್ ವಿಶೇಷ ಸಕ್ರಿಯ ಕಂಟೆಂಡರ್ ವರ್ಗದ ಪ್ರಶಸ್ತಿಗೆ ಭಾಜನವಾಗಿದೆ.
ಸ್ವಯಂ ಎನ್ ಪಿ ಟಿ ಎಲ್ ವತಿಯಿಂದ ಐಐಟಿ ಮದ್ರಾಸ್ ನಲ್ಲಿ ಇದೆ ವರ್ಷದ ಜುಲೈ 11 ರಂದು ಆಯೋಜಿಸಲಾಗಿದ್ದ ಸ್ಪೋಕ್ ಸನ್ಮಾನ ಕಾರ್ಯಗಾರದಲ್ಲಿ ಈ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಸಕ್ರಿಯ ಅಧ್ಯಾಯ ದಿಂದ ಆಕಾಂಕ್ಷಿ ಮತ್ತು ನಂತರ ಕಂಟೆಂಡರ್ ಹಂತದವರೆಗೆ ಈ ಕಾಲೇಜು ಉನ್ನತಮಟ್ಟದ ಸ್ಥಾನ ಪಡೆಯುವಲ್ಲಿ ನಿರಂತರವಾದ ಪ್ರಗತಿಯನ್ನು ಸಾಧಿಸಿದೆ.
ಈ ಸಾಧನೆಗೆ ಸಂಸ್ಥೆಯ ಅಧ್ಯಕ್ಷರಾದ ಶಶೀಲ್ ಜಿ ನಮೋಶಿ ಯವರ ನಿರಂತರ ಬೆಂಬಲದಿಂದಾಗಿ ಸಂಸ್ಥೆಯು ಸತತವಾಗಿ 4 ನೇ ಬಾರಿಗೆ ಎನ್ ಪಿ ಟಿ ಎಲ್ ವಿಶೇಷ ಸಕ್ರಿಯ ಕಂಟೆಂಡರ್ ವರ್ಗದ ಪ್ರಶಸ್ತಿಯನ್ನು ಪಡೆದುಕೊಂಡಿದೆ.ಈ ಕಾಲೇಜಿನ ಪ್ರಾಧ್ಯಾಪಕರು,ಕೌಶಲ್ಯ ಅಭಿವೃದ್ಧಿ ಕೆಂದ್ರದ ನಿರ್ದೇಶಕರು, ಎನ್ ಪಿ ಟಿ ಎಲ್ ಸಿಂಗಲ್ ಪಾಯಿಂಟ್ ಆಫ್ ಕಾಂಟ್ರಾಕ್ಟ್ ಆಗಿರುವ ಡಾ ಜಯಶ್ರೀ ಅಗರಖೇಡ ಅವರು ಕಾಲೇಜಿನ ಈ ಗೌರವವನ್ನು ಸ್ವಿಕರಿಸಿದರು.
ಈ ಸಾಧನೆಗೈದ ಡಾ ಜಯಶ್ರೀ ಅಗರಖೇಡರವರನ್ನು ಸಂಸ್ಥೆಯ ಅಧ್ಯಕ್ಷರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಶಶೀಲ್ ಜಿ ನಮೋಶಿ, ಉಪಾಧ್ಯಕ್ಷರಾದ ರಾಜಾ ಭೀಮಳ್ಳಿ,ಕಾರ್ಯದರ್ಶಿಗಳಾದ ಉದಯಕುಮಾರ್ ಚಿಂಚೋಳಿ, ಜಂಟಿ ಕಾರ್ಯದರ್ಶಿಗಳಾದ ಡಾ ಕೈಲಾಶ್ ಪಾಟೀಲ್ ಹಾಗೂ ಎಲ್ಲ ಆಡಳಿತ ಮಂಡಳಿ ಸದಸ್ಯರು, ಪ್ರಾಚಾರ್ಯರಾದ ಡಾ ಎಸ್ ಆರ್ ಪಾಟೀಲ್,ಡಾ ಪವನ್ ರಂಗದಾಲ್ , ಡಾ ರಾಕೇಶ್ ಹುಡೇದ, ಡಾ ಶಿವಕುಮಾರ ಬಿಲಗುಂದಿ ಅಭಿನಂದಿಸಿದ್ದಾರೆ

