"ಅರುಣ್ ಸ್ವಾಮಿಗೆ ನೃತ್ಯ ಕಲಾ ಪ್ರಶಸ್ತಿ

"ಅರುಣ್ ಸ್ವಾಮಿಗೆ ನೃತ್ಯ ಕಲಾ ಪ್ರಶಸ್ತಿ

"ಅರುಣ್ ಸ್ವಾಮಿಗೆ ನೃತ್ಯ ಕಲಾ ಪ್ರಶಸ್ತಿ"

ಕಲಬುರಗಿ: ನಗರದ ಯುವ ನೃತ್ಯ ಕಲಾವಿದ ಅರುಣ್ ಎಂ. ಸ್ವಾಮಿ ಅವರಿಗೆ ಗುಲ್ಬರ್ಗ ಡ್ಯಾನ್ಸ್ ಸಂಘದ ವತಿಯಿಂದ ನೃತ್ಯ ಕಲಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ನಾಲ್ಕನೇ ತರಗತಿಯಲ್ಲಿದ್ದಾಗಲೇ ಕಲಬುರಗಿಯ ನೃತ್ಯ ತರಗತಿಗೆ ಸೇರ್ಪಡೆಗೊಂಡ ಅರುಣ್ ಸ್ವಾಮಿ, ಅಂದಿನಿಂದ ನಿರಂತರವಾಗಿ ನೃತ್ಯ ಮತ್ತು ವಿವಿಧ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇದುವರೆಗೆ ಹಲವಾರು ಉನ್ನತ ಕಾರ್ಯಕ್ರಮಗಳಲ್ಲಿ ನೃತ್ಯ ಪ್ರದರ್ಶನ ನೀಡಿದ್ದು, ವಿವಿಧ ನೃತ್ಯ ಸ್ಪರ್ಧೆಗಳಲ್ಲಿ ಭಾಗವಹಿಸಿ ಹಲವು ಬಹುಮಾನಗಳನ್ನು ಪಡೆದುಕೊಂಡಿದ್ದಾರೆ.

ನೃತ್ಯ ಕ್ಷೇತ್ರದಲ್ಲಿನ ಅವರ ಸಾಧನೆ ಹಾಗೂ ನಿರಂತರ ಕಲಾ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಪ್ರಶಸ್ತಿ ದೊರೆತ ಹಿನ್ನೆಲೆಯಲ್ಲಿ ಮಾತನಾಡಿದ ಅರುಣ್ ಎಂ. ಸ್ವಾಮಿ, 

"ಕಲೆಯ ಹಾದಿಯಲ್ಲಿ ಹೆಜ್ಜೆ ಇಟ್ಟು, ಸಾಧನೆಯ ಶಿಖರವೇರಿದೆ,

ಇಂದು ಸಿಕ್ಕ ಈ ಪ್ರಶಸ್ತಿ, ನನ್ನ ಪರಿಶ್ರಮಕ್ಕೆ ಸಿಕ್ಕ ಗೌರವವಾಗಿದೆ. 

ನನ್ನ ನೃತ್ಯ ಕ್ಷೇತ್ರದಲ್ಲಿ ಸಾಧನೆಗೆ ಪ್ರೋತ್ಸಾಹ ಹಾಗೂ ಮಾರ್ಗದರ್ಶನ ನೀಡಿದ ಶ್ರೀ ಅಕ್ಷಯ್ ಸರ್ ಮತ್ತು ಶ್ರೀಮತಿ ಜ್ಯೋತಿ ಅಕ್ಷಯ ಹಾಗೂ ಅವರಿಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಲು ಪ್ರೋತ್ಸಾಹಿಸಿದ ಬೆಂಬಲರಿಗೆ ಕೃತಜ್ಞತೆ ಸಲ್ಲಿಸುತ್ತೇನೆ" ಎಂದರು! ಪ್ರಸ್ತುತ ಇವರು ಖಾಸಗಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾರೆ. ವಿದ್ಯಾಭ್ಯಾಸದ ಜೊತೆಗೆ ನೃತ್ಯ ಹಾಗೂ ವಿವಿಧ ಕ್ಷೇತ್ರದಲ್ಲಿಯೂ ಸಾಧನೆಯ ಮೇಲುಗೈ ಹೊಂದಿದ್ದಾರೆ!  ಇವರ ಸಾಧನೆಯ ಹಾದಿ ಅನೇಕ ಯುವ ಪೀಳಿಗೆಗೆ ಪ್ರೇರಣೆಯಾಗಿದೆ.