ದಾಲ್ ಮಿಲ್ಲರ್ಸ್‌ಗಳ ನಿರ್ಧಾರ ಆ.20ರೊಳಗೆ RIMS ಸಾಫ್ಟ್‌ವೇರ್ ಜಾರಿಗೆ ತರಲು ಆಗ್ರಹ – ಟೆಂಡರ್ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಡ್ಡಾಯಗೊಳಿಸುವಂತೆ ಮನವಿ

ದಾಲ್ ಮಿಲ್ಲರ್ಸ್‌ಗಳ ನಿರ್ಧಾರ ಆ.20ರೊಳಗೆ RIMS ಸಾಫ್ಟ್‌ವೇರ್ ಜಾರಿಗೆ ತರಲು ಆಗ್ರಹ – ಟೆಂಡರ್ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಡ್ಡಾಯಗೊಳಿಸುವಂತೆ ಮನವಿ

ದಾಲ್ ಮಿಲ್ಲರ್ಸ್‌ಗಳ ನಿರ್ಧಾರ

ಆ.20ರೊಳಗೆ RIMS ಸಾಫ್ಟ್‌ವೇರ್ ಜಾರಿಗೆ ತರಲು ಆಗ್ರಹ – ಟೆಂಡರ್ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಡ್ಡಾಯಗೊಳಿಸುವಂತೆ ಮನವಿ

ಕಲಬುರಗಿ: ಕಲಬುರಗಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (APMC)ಯಲ್ಲಿ ತೊಗರಿ ಟೆಂಡರ್ ಪ್ರಕ್ರಿಯೆಯನ್ನು ನಿಯಮಾನುಸಾರ, ಪಾರದರ್ಶಕವಾಗಿ ನಡೆಸಬೇಕು ಹಾಗೂ RIMS (REMS) ಸಾಫ್ಟ್‌ವೇರ್ ಅನ್ನು ಕಡ್ಡಾಯವಾಗಿ ಜಾರಿಗೆ ತರಬೇಕು ಎಂದು ಗುಲಬರ್ಗಾ ದಾಲ್ ಮಿಲ್ಲರ್ಸ್ ಅಸೋಸಿಯೇಷನ್ ಆಗ್ರಹಿಸಿದೆ.

ಈ ಕುರಿತು ಅಸೋಸಿಯೇಷನ್ ಅಧ್ಯಕ್ಷ ಚಂದ್ರಶೇಖರ್ ಎನ್. ಕೋಬಾಳ ಹಾಗೂ ಗೌರವ ಕಾರ್ಯದರ್ಶಿ ಹಣಮಂತರಾಯ ಎಂ. ತೋಟನಳ್ಳಿ ಅವರು ಜಾರಿ

 ವಿಭಾಗೀಯ ಕಚೇರಿ, ಕಲಬುರಗಿಯ ಎಪಿಎಂಸಿ ಅಧ್ಯಕ್ಷರು, ಹೆಚ್ಚುವರಿ ನಿರ್ದೇಶಕರು, ಹಾಗೂ ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಿದ್ದಾರೆ.

ಕಲಬುರಗಿ APMC ಮಾರುಕಟ್ಟೆ ಪ್ರಾಂಗಣದಲ್ಲಿ RIMS ಸಾಫ್ಟ್‌ವೇರ್ ಜಾರಿಗೆ ತರಬೇಕೆಂದು ದಾಲ್ ಮಿಲ್ಲರ್ಸ್‌ಗಳು ಹಲವು ಬಾರಿ APMC ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಇದುವರೆಗೆ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ಇದರಿಂದ ತೊಗರಿ ಟೆಂಡರ್ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಹಾಗೂ ನ್ಯಾಯಸಮ್ಮತತೆಯ ಬಗ್ಗೆ ಹಲವು ಸಮಸ್ಯೆಗಳು ಎದುರಾಗುತ್ತಿವೆ ಎಂದು ಅಸೋಸಿಯೇಷನ್ ದೂರಿದೆ.

ಆ.20, 2026ರೊಳಗೆ RIMS ಸಾಫ್ಟ್‌ವೇರ್ ಜಾರಿಗೆ ತರದಿದ್ದಲ್ಲಿ, RIMS ಜಾರಿಗೆ ಬರುವವರೆಗೆ ತೊಗರಿ ಖರೀದಿ ಟೆಂಡರ್ ಹರಾಜಿನಲ್ಲಿ ಭಾಗವಹಿಸದಿರಲು ಅಸೋಸಿಯೇಷನ್‌ನ ಸದಸ್ಯರು ನಿರ್ಧರಿಸಿದ್ದಾರೆ ಎಂದು ಮನವಿಯಲ್ಲಿ ಸ್ಪಷ್ಟಪಡಿಸಲಾಗಿದೆ.

RIMS ಜಾರಿಗೆ ಬಂದ ನಂತರ ತೊಗರಿ ಟೆಂಡರ್ ಪ್ರಕ್ರಿಯೆಯಲ್ಲಿ ಕೆಳಗಿನ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ APMC ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಎಂದು ಅಸೋಸಿಯೇಷನ್ ಒತ್ತಾಯಿಸಿದೆ.

ತೊಗರಿ ಟೆಂಡರ್ ಅನ್ನು ಲಾಟ್‌ವಾರು ನಡೆಸಬೇಕು.

ರೈತರು ಯಾವುದೇ ಲಾಟ್ ನಂಬರ್‌ನ ಟೆಂಡರ್ ಅನ್ನು ರದ್ದುಪಡಿಸಿದಲ್ಲಿ, ಅವರು ಮತ್ತೆ ಮಾರಾಟಕ್ಕೆ ಸಿದ್ಧರಾದಾಗ ಅದೇ ಲಾಟ್ ಅನ್ನು ಮತ್ತೊಮ್ಮೆ ಟೆಂಡರ್ ಮೂಲಕವೇ ಮಾರಾಟ ಮಾಡಬೇಕು.

ಪ್ರತಿ ಖರೀದಿ ಇನ್‌ವಾಯ್ಸ್ ಅಥವಾ ಬಿಲ್‌ನಲ್ಲಿ ಸಂಬಂಧಪಟ್ಟ ಲಾಟ್ ನಂಬರ್ ಅನ್ನು ಕಡ್ಡಾಯವಾಗಿ ನಮೂದಿಸಬೇಕು.

ಟೆಂಡರ್‌ಗೆ ದರ ಅಥವಾ ಕೋಟೇಶನ್ ನೀಡುವ ಪ್ರಕ್ರಿಯೆಯನ್ನು ಮಧ್ಯಾಹ್ನ 12 ಗಂಟೆಯೊಳಗೆ ಪೂರ್ಣಗೊಳಿಸಿ, ಟೆಂಡರ್ ಫಲಿತಾಂಶವನ್ನು ಮಧ್ಯಾಹ್ನ 12.30ರೊಳಗೆ ಪ್ರಕಟಿಸಬೇಕು. ಈ ಸಮಯದ ವ್ಯವಸ್ಥೆಯನ್ನು ಈ ಹಿಂದೆ ಅನುಸರಿಸಲಾಗುತ್ತಿತ್ತು ಎಂದು ಅಸೋಸಿಯೇಷನ್ ತಿಳಿಸಿದೆ.

ತೊಗರಿ ಟೆಂಡರ್ ಪ್ರಕ್ರಿಯೆಯನ್ನು ನಿಯಮಾನುಸಾರ, ಕಟ್ಟುನಿಟ್ಟಾಗಿ ಹಾಗೂ ಸಂಪೂರ್ಣ ಪಾರದರ್ಶಕವಾಗಿ ನಡೆಸಬೇಕು. ಯಾವುದೇ ರೀತಿಯ ಅನಿಯಮಿತತೆಗೆ ಅವಕಾಶ ನೀಡಬಾರದು ಎಂದು ಆಗ್ರಹಿಸಲಾಗಿದೆ.

ಪ್ರಸ್ತುತ ದಾಲ್ ಮಿಲ್ಲಿಂಗ್ ಉದ್ಯಮವು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಅನೇಕ ದಾಲ್ ಮಿಲ್‌ಗಳು ನಷ್ಟದಲ್ಲಿವೆ. ಇಂತಹ ಸಂದರ್ಭದಲ್ಲಿ APMCಯಲ್ಲಿನ ತೊಗರಿ ಟೆಂಡರ್ ಪ್ರಕ್ರಿಯೆಯಲ್ಲಿನ ಅನಿಯಮಿತತೆಗಳು ಹಾಗೂ RIMS ಸಾಫ್ಟ್‌ವೇರ್ ಜಾರಿಗೆ ಬಾರದಿರುವುದು ಉದ್ಯಮದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ ಎಂದು ಅಸೋಸಿಯೇಷನ್ ತಿಳಿಸಿದೆ.

ರೈತರು ಹಾಗೂ ದಾಲ್ ಮಿಲ್ಲರ್‌ಗಳ ಹಿತಾಸಕ್ತಿಯನ್ನು ಕಾಪಾಡಲು ಟೆಂಡರ್ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮತ್ತು ನ್ಯಾಯಸಮ್ಮತತೆಯನ್ನು ಖಚಿತಪಡಿಸಬೇಕು. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ತಕ್ಷಣ ಮಧ್ಯಪ್ರವೇಶಿಸಿ APMC ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಮನವಿಯಲ್ಲಿ ಕೋರಲಾಗಿದೆ.

ಆ.20ರೊಳಗೆ RIMS ಸಾಫ್ಟ್‌ವೇರ್ ಜಾರಿಗೆ ತರಲು ಹಾಗೂ ಅಸೋಸಿಯೇಷನ್ ಸೂಚಿಸಿರುವ ಎಲ್ಲ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿದೆ.

ಸಂದರ್ಭದಲ್ಲಿ ಉಪಾಧ್ಯಕ್ಷರಾದ ಶರಣಬಸಪ್ಪ ಎನ್. ಮಾಚೆಟ್ಟಿ, ವಿಷ್ಣುದಾಸ್ ತಪಡಿಯಾ, ಜಂಟಿ ಕಾರ್ಯದರ್ಶಿ ಲಿಂಗಬಸಪ್ಪ ರಾಯನಾಡ್, ಖಜಾಂಚಿ ಕಿರಣ ಚಿಂಚೋಳಿ, ಎಂ.ಸಿ. ಸದಸ್ಯರಾದ ಅರವಿಂದ್ ತೋಷ್ನಿವಾಲ್, ಭೀಮಾಶಂಕರ ಕಲಶೆಟ್ಟಿ, ನಿಜಾಮುದ್ದೀನ್, ರಾಜಶೇಖರ್ ಇಟಗಂಪಳ್ಳಿ ಮತ್ತು ಉಮೇಶ ಪಿ. ಅಡ್ಕಿ, ಸೇರಿದಂತೆ ಇತರರು ಇದ್ದರು.