ರಾತ್ರಿ ೧೨ ಗಂಟೆಗೆ ದಿಢೀರ ಭೇಟಿ: ಸೇಡಂ ವೃದ್ಧಾಶ್ರಮ ಪರಿಶೀಲಿಸಿದ ಅಧಿಕಾರಿ ಸಾಧಿಕ್ ಹುಸೇನ್

ರಾತ್ರಿ ೧೨ ಗಂಟೆಗೆ ದಿಢೀರ ಭೇಟಿ: ಸೇಡಂ ವೃದ್ಧಾಶ್ರಮ ಪರಿಶೀಲಿಸಿದ ಅಧಿಕಾರಿ ಸಾಧಿಕ್ ಹುಸೇನ್

ರಾತ್ರಿ ೧೨ ಗಂಟೆಗೆ ದಿಢೀರ ಭೇಟಿ: ಸೇಡಂ ವೃದ್ಧಾಶ್ರಮ ಪರಿಶೀಲಿಸಿದ ಅಧಿಕಾರಿ ಸಾಧಿಕ್ ಹುಸೇನ್

ಕಲಬುರಗಿ ಜಿಲ್ಲೆ: ಸೇಡಂ ತಾಲೂಕಿನ ವೃದ್ಧಾಶ್ರಮದ ಕುರಿತು ಕೇಳಿಬಂದ ಆರೋಪಗಳ ಹಿನ್ನೆಲೆಯಲ್ಲಿ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಸಾಧಿಕ್ ಹುಸೇನ್ ಅವರು ಮಳೆಗಾಳಿಯನ್ನೂ ಲೆಕ್ಕಿಸದೇ ರಾತ್ರಿ ೧೨ ಗಂಟೆಯ ಬಳಿಕ ದಿಢೀರನೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಸೇಡಂ ತಾಲೂಕಿನ ಲಿಂಗರಾಜ ತಾರಫೈಲ್ ಅವರು ವಿಜಯಲಕ್ಷ್ಮಿ ಗ್ರಾಮೀಣ ಅಭಿವೃದ್ಧಿ ಸ್ವಸಹಾಯ ಸಂಘದ ಹೆಸರಿನಲ್ಲಿ ನಡೆಸುತ್ತಿರುವ ವೃದ್ಧಾಶ್ರಮದ ವಿರುದ್ಧ ನವ ಕರ್ನಾಟಕ MRW /VRW / URW ಹಾಗೂ ವಿಕಲಚೇತನರ ಗೌರವಧನ ಕಾರ್ಯಕರ್ತರ ಸಂಘದ ಸಂಸ್ಥಾಪಕ ಅಧ್ಯಕ್ಷ ಅಂಬಾಜಿ ಮೇಟಿ ಎಂಬ ವ್ಯಕ್ತಿ ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಕ್ಕೆ ಸುಮಾರು ೩೦ ಲಕ್ಷ ರೂಪಾಯಿ ವಂಚನೆ ಮಾಡಲಾಗಿದೆ ಎಂದು ಆರೋಪಿಸಿದ್ದರು. ಈ ದೂರಿನ ಮೇರೆಗೆ ತಕ್ಷಣವೇ ಸ್ಥಳಕ್ಕೆ ತೆರಳಿದ ಅಧಿಕಾರಿ ಸಾಧಿಕ್ ಹುಸೇನ್ ಅವರು ವೃದ್ಧಾಶ್ರಮದಲ್ಲಿನ ಊಟದ ವ್ಯವಸ್ಥೆ, ಫಲಾನುಭವಿಗಳ ಸ್ಥಿತಿ ಹಾಗೂ ಸಿಬ್ಬಂದಿಗಳ ಕಾರ್ಯವೈಖರಿಯನ್ನು ಪರಿಶೀಲಿಸಿದರು.

ಪರಿಶೀಲನೆಯ ವೇಳೆ ವೃದ್ಧಾಶ್ರಮದಲ್ಲಿ ಎಲ್ಲಾ ವ್ಯವಸ್ಥೆಗಳು ಸಮರ್ಪಕವಾಗಿರುವುದು ಕಂಡು ಬಂದಿದೆ ಎಂದು ತಿಳಿದುಬಂದಿದೆ. ಸಾಮಾನ್ಯವಾಗಿ ಇಂತಹ ಆರೋಪಗಳು ಬಂದಾಗ ವಿಳಂಬ ಮಾಡುವ ಅಧಿಕಾರಿಗಳ ನಡುವೆ, ತಕ್ಷಣ ಸ್ಪಂದಿಸಿ ರಾತ್ರಿ ವೇಳೆಯಲ್ಲೇ ಪರಿಶೀಲನೆ ನಡೆಸಿದ ಸಾಧಿಕ್ ಹುಸೇನ್ ಅವರ ಕ್ರಮ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.

ಇದೇ ವೇಳೆ, RTI ಹಾಕಿ ಬ್ಲಾಕ್ ಮೇಲ್ ಮಾಡುವುದು ಸುಳ್ಳು ಆರೋಪಗಳನ್ನು ಮಾಡಿ ಸಮಾಜ ಸೇವಕರ ಹಾಗೂ ಸರ್ಕಾರಿ ನೌಕರರ ಮೇಲೆ ಮಾನಸಿಕ ಒತ್ತಡ ಸೃಷ್ಟಿಸುತ್ತಿರುವ ಅಂಬಾಜಿ ಮೇಟಿ ವಿಶೇಷವಾಗಿ ಅಂಗವಿಕಲರ ಹೆಸರು ಹೇಳಿ ಅಂಗವಿಕಲರಿಗೆ ಮೋಸ ಮಾಡುತ್ತಿರುವ ಹಾಗೂ ಈತನ ಜೊತೆ ಹಿಂದುಗಡೆಯಿಂದ ಕುಮ್ಮಕ್ಕು ನೀಡುತ್ತಿರುವ ಸಹಚರರ ವಿರುದ್ಧ ಸೂಕ್ತ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮಲ್ಲಿಕಾರ್ಜುನ್ ಜಿನಿಕೇರಿ, ರಾಜು ವಾಡೆಕರ್, ಕಿರಣ್ ಕುಮಾರ್ ಜೈನ್, ಶರಣು ಕುಮಾರ್ ಪೂಜಾರಿ, ಡಾ. ಉಸ್ಮಾನ್, ಮಾರುತಿ ಮುಗಟಿ, ಮಲ್ಲಿಕಾರ್ಜುನ್ ದಿನ್ನಿ, ಸುಭಾಷ್ (ವಕೀಲರು), ಚಂದ್ರಕಾಂತ್ ನಾಟೇಕರ್, ಪ್ರಕಾಶ್ ಮಾಳಿಗೆ, ದಿಗಂಬರ್ ತ್ರಿಮೂರ್ತಿ, ಸಿದ್ದು ನವಲಗಿ, ಶ್ರೀಮಂತ ಭಂಡಾರಿ, ದಿಲೀಪ್ ಕುಮಾರ್ ಸೇರಿದಂತೆ ಹಲವು ಸಮಾಜ ಚಿಂತಕರು ಆಗ್ರಹಿಸಿದ್ದಾರೆ.

ಸುಳ್ಳು ದೂರಿನ ಆಧಾರದ ಮೇಲೆ ನಿರಪರಾಧಿಗಳಿಗೆ ಕಿರುಕುಳ ನೀಡುವವರ ವಿರುದ್ಧ ಹಾಗೂ ಇಂಥ ಕಾರ್ಯಗಳಿಗೆ ಕುಮ್ಮಕ್ಕು ಸಹಕಾರ ನೀಡುತ್ತಿರುವರ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳದಿದ್ದರೆ ಜಿಲ್ಲಾಡಳಿತದ ವಿರುದ್ಧ ಹೋರಾಟ ನಡೆಸುವುದಾಗಿ ಅವರು ಎಚ್ಚರಿಕೆ ನೀಡಿದ್ದಾರೆ.