ನಾಡೋಜ ಡಾ.ಪಿ.ಎಸ್ ಶಂಕರ್ ಅವರಿಗೆ ಪತ್ನಿ ವಿಯೋಗ

ನಾಡೋಜ ಡಾ.ಪಿ.ಎಸ್ ಶಂಕರ್ ಅವರಿಗೆ ಪತ್ನಿ ವಿಯೋಗ

ನಾಡೋಜ ಡಾ.ಪಿ.ಎಸ್ ಶಂಕರ್ ಅವರಿಗೆ ಪತ್ನಿ ವಿಯೋಗ

 ಕಲಬುರಗಿ : ನಾಡೋಜ ಡಾ. ಪಿ.ಎಸ್. ಶಂಕರ ಅವರ ಧರ್ಮ ಪತ್ನಿ ಶ್ರೀಮತಿ ಅಂಬಿಕಾ ಶಂಕರ ಅವರು ಸೋಮವಾರ ಆಗಸ್ಟ್ 10 ರಂದು

 ಬೆಳಿಗ್ಗೆ 9.30 ಗಂಟೆಗೆ ತೀವ್ರ ಹೃದಯಾಘಾತದಿಂದ ಅಸುನೀಗಿದರು.ಅವರಿಗೆ 82 ವರ್ಷ ವಯಸ್ಸಾಗಿತ್ತು. 

 ಪ್ರತಿಷ್ಠಿತ ಡಾ. ಪಿ.ಎಸ್.ಶಂಕರ ಪ್ರತಿಷ್ಠಾನದ ಅಧ್ಯಕ್ಷರಾಗಿ ಕಳೆದ 25 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದರು. ಅವರಿಗೆ ಇಬ್ಬರು ಮಕ್ಕಳು.  ಶ್ರೀ ದೀಪಕ ಅಭಿಯಂತರು. ಮಗಳು ಡಾ.ರೂಪಾ, ಅರಿವಳಿಕೆ ತಜ್ಞೆ .

ಆರೋಗ್ಯ ,ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಮಾಜ ಸೇವೆ ಸಲ್ಲಿಸುವ ಸಂಸ್ಥೆಯನ್ನು ಕಟ್ಟಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಪ್ರತಿಷ್ಠಿತ ಸಂಸ್ಥೆಯಾಗಿ ಬೆಳೆಸಿದವರು.

ಮೃತರ ಪಾರ್ಥಿವ ಶರೀರದ ಅಂತ್ಯಕ್ರಿಯೆಯು ಬುಧವಾರ (ಆಗಸ್ಟ್ 12ರಂದು) ಬೆಳಗ್ಗೆ 10 ಗಂಟೆಗೆ ಕಲಬುರಗಿಯ ನ್ಯೂರಾಘವೇಂದ್ರ ಕಾಲೋನಿಯ ವಿದ್ಯುತ್ ಚಿತಾಗಾರದಲ್ಲಿ ನೆರವೇರಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

*ಡಾ.ಪಿ.ಎಸ್ ಶಂಕರ್ ಪತ್ನಿವಿಯೋಗಕ್ಕೆ ಕಂಬನಿ*

      ಶ್ರೀಮತಿ ಅಂಬಿಕಾ ಶಂಕರ್ 

 ಪ್ರತಿಷ್ಠಿತ ಡಾ. ಪಿ.ಎಸ್.ಶಂಕರ ಪ್ರತಿಷ್ಠಾನದ ಅಧ್ಯಕ್ಷರಾಗಿ ಕಳೆದ 25 ವರ್ಷಗಳಿಂದ ಸಲ್ಲಿಸಿದ ಸೇವೆ ಅಮೂಲ್ಯವಾಗಿದೆ.ಮಾನವೀಯ ಮೌಲ್ಯ ಬಿತ್ತುವ ಉಪನ್ಯಾಸಗಳು ಹಾಗೂ ಶಿಕ್ಷಣ ವೈದ್ಯಕೀಯ ರಂಗದ ಅನೇಕ ಬಡ ವಿದ್ಯಾರ್ಥಿಗಳಿಗೆ ನೆರವಾಗಿ ಜನಾನುರಾಗಿದ್ದಾರೆ. ಸರಳ ಸಜ್ಜನಿಕೆಯ ವ್ಯಕ್ತಿತ್ವ ಹೊಂದಿ ಎಲ್ಲರ ಪ್ರೀತಿ ಪಾತ್ರರಾದ ಅವರ ಅಗಲುವಿಕೆ ತುಂಬಲಾರದ ನಷ್ಟವಾಗಿದೆ ಎಂದು ಕಲ್ಯಾಣ ಕರ್ನಾಟಕ ಆರ್ಯ ಈಡಿಗ ಹೋರಾಟ ಸಮಿತಿಯ ಅಧ್ಯಕ್ಷರಾದ ಸತೀಶ್ ವಿ. ಗುತ್ತೇದಾರ್ ಪ್ರಧಾನ ಕಾರ್ಯದರ್ಶಿ ವೆಂಕಟೇಶ ಕಡೇ ಚೂರ್, ಶ್ರೀಮತಿ ಬಾಲಮ್ಮ ಮಹಾದೇವಪ್ಪ ಕಡೇಚೂರ್ ಪ್ರತಿಷ್ಠಾನದ ಟ್ರಸ್ಟಿ ಡಾ.ರಾಜೇಶ್ ಕಡೇಚೂರ್, ಆಕಾಶವಾಣಿಯ ನಿವೃತ್ತ ಕಾರ್ಯಕ್ರಮ ಮುಖ್ಯಸ್ಥರಾದ ಡಾ ಸದಾನಂದ ಪೆರ್ಲ, ಕಲಬರಗಿ ಜಿಲ್ಲಾ ಹೋಟೆಲ್ ಅಸೋಸಿಯೇಷನ್ ಅಧ್ಯಕ್ಷರಾದ ನರಸಿಂಹ ಮೆಂಡನ್, ಮಹಾನಗರ ಪಾಲಿಕೆ ಉಪ ಆಯುಕ್ತರಾದ ಶ್ರೀಮತಿ ಪ್ರಮೀಳಾ ಎಂ.ಕೆ, ಸವಿತಾ ಗುತ್ತೇದಾರ್, ಲತಾ ಶ್ರೀನಿವಾಸ ಆಚಾರ್ಯ ಮತ್ತಿತರರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಶ್ರೀಮತಿ ಅಂಬಿಕಾ ಶಂಕರ್ ಅವರು ಪತಿ ಡಾ.ಪಿ ಎಸ್ ಶಂಕರ್,ಇಬ್ಬರು ಮಕ್ಕಳು. 

  ದೀಪಕ ಅಭಿಯಂತರು. ಮಗಳು ಡಾ.ರೂಪಾ, ಅರಿವಳಿಕೆ ತಜ್ಞೆ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ .