ಅಂಬೇಡ್ಕರ್ ಅವರ ವಿಚಾರಧಾರೆಗಳು ಸಾರ್ವಕಾಲಿಕ ಶ್ರೇಷ್ಠ ಡಾ.ಮರಿಯಪ್ಪ ನಾಟೇಕಾರ

ಅಂಬೇಡ್ಕರ್ ಅವರ ವಿಚಾರಧಾರೆಗಳು ಸಾರ್ವಕಾಲಿಕ ಶ್ರೇಷ್ಠ ಡಾ.ಮರಿಯಪ್ಪ ನಾಟೇಕಾರ

ಅಂಬೇಡ್ಕರ್ ಅವರ ವಿಚಾರಧಾರೆಗಳು ಸಾರ್ವಕಾಲಿಕ ಶ್ರೇಷ್ಠ ಡಾ.ಮರಿಯಪ್ಪ ನಾಟೇಕಾರ 

ಗುರುಮಠಕಲ : ಮೇರು ವ್ಯಕ್ತಿತ್ವದ ಮೇಧಾವಿ, ತತ್ವಜ್ಞಾನಿ,ಭಾರತ ರತ್ನ ಡಾ.ಬಿ ಆರ್.ಅಂಬೇಡ್ಕರ್ ರವರ ವಿಚಾರಧಾರೆಗಳು ಸಾರ್ವಕಾಲಿಕ ಶ್ರೇಷ್ಠ ಎಂದು ಯುವ ಸಾಹಿತಿ ಡಾ.ಮರಿಯಪ್ಪ ನಾಟೇಕಾರ ಹೇಳಿದರು.

ನಗರದ ಸರಕಾರಿ ಪದವಿಪೂರ್ವ ಬಾಲಕರ ಕಾಲೇಜಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಯಾದಗಿರಿ ಇವರ ಸಹಯೋಗದಲ್ಲಿ ಆಯೋಜಿಸಿದ ಭಾರತ ರತ್ನ ಡಾ.ಬಿ.ಆರ್. ಅಂಬೇಡ್ಕರ್ ಓದು ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡುತ್ತ ಮಾತನಾಡಿದ ಅವರು ಇಂದಿನ ಯುವಕರು ಅಂಬೇಡ್ಕರ ಜೀವನ ಚರಿತ್ರೆ ಓದಿ ಅರ್ಥೈಸಿಕೊಂಡು ಸ್ವಾಭಿಮಾನದಿಂದ ಬದುಕಬೇಕೆಂದು ಸಲಹೆ ನೀಡಿದರು.

ಸರಕಾರಿ ಪದವಿ ಪೂರ್ವ ಬಾಲಕಿಯರ ಕಾಲೇಜಿನ ಪ್ರಾಂಶುಪಾಲರಾದ ಮಲ್ಲಿಕಾರ್ಜುನ್ ಹೊಸಮನಿ ಮಾತನಾಡಿ ಅವರು, ಸಭೆ,ಸಮಾರಂಭಗಳಲ್ಲಿ ಮತ್ತು ವೇದಿಕೆಯ ಮೇಲೆ ಭಾಷಣ ಮಾಡುವಾಗ ಮಾತ್ರ ಜಾತಿ ತಾರತಮ್ಯ ಹೋಗಲಾಡಿಸಿದ್ದೇವೆ, ಹೊರತು ಮನಸ್ಸಿನಿಂದ ಸಾಧ್ಯವಾಗುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿ ಮಾತನಾಡಿದರು.

ಕಾಲೇಜಿನ ಪ್ರಾಂಶುಪಾಲರಾದ ಸುದರ್ಶನ್ ರೆಡ್ಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡು ಮಾತನಾಡಿದ ಅವರು,ಜಾತಿ ವ್ಯವಸ್ಥೆಯನ್ನು ಕಿತ್ತೆಸೆದು ಸಾಮಾಜಿಕ ಹೋರಾಟದ ಮೂಲಕ ದಲಿತರಿಗೆ,ದೀನ ದುರ್ಬಲರಿಗೆ,ಶೋಷಿತರಿಗೆ ನ್ಯಾಯ ದೊರಕಿಸಿಕೊಟ್ಟ ಕೀರ್ತಿ ಡಾ.ಬಿ.ಆರ್.ಅಂಬೇಡ್ಕರ ಅವರಿಗೆ ಸಲ್ಲುತ್ತದೆ ಎಂದು ನುಡಿದರು.

ಈ ಸಮಾರಂಭದ ವೇದಿಕೆಯ ಮೇಲೆ, ಪತ್ರಕರ್ತ ಎಂ.ಬಿ.ನಾಯ್ಕಿನ್, ಗುರುಮಿಟ್ಕಲ್ ಬಸ್ ಘಟಕದ ವ್ಯವಸ್ಥಾಪಕರಾದ ಭೀಮಾಶಂಕರ ಕಲ್ಲೂರ ಉಪಸ್ಥಿತರಿದ್ದರು,ಈ ಕಾರ್ಯಕ್ರಮ ಸಂದರ್ಭದಲ್ಲಿ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿತ್ತು,ಅನುರಾಧ ಪ್ರಥಮ,ರಜನಿಕಾಂತ್ ದ್ವಿತೀಯ, ಪವನ್ ತೃತೀಯ ಸೇರಿದಂತೆ ವೀರೇಶ್ ಮತ್ತು ವಿಕೇಶ್ ಇಬ್ಬರಿಗೆ ಸಮಾಧಾನಕರ ಬಹುಮಾನದ ಪ್ರಮಾಣ ಪತ್ರದ ಜೊತೆಗೆ ಪುಸ್ತಕಗಳು ನೀಡಿ ಗೌರವಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕಿ ಉತ್ತರಾದೇವಿ ಮಠಪತಿ ಪ್ರಾಸ್ತಾವಿಕ ಮಾತುಗಳನ್ನಾಡಿದರು,ಈ ಸಂದರ್ಭದಲ್ಲಿ ವೇದಿಕೆ ಮೇಲಿರುವ ಸರ್ವರನ್ನ ಶಂಕರ ಗೂಳಿ ಸ್ವಾಗತಿಸಿದರು,ಭೂಮಿಕ ಮತ್ತು ಸಂಗಡಿಗರು ಪ್ರಾರ್ಥಿಸಿದರು,ಕಾರ್ಯಕ್ರಮದ ಪ್ರಾರಂಭದಲ್ಲಿ ಕು.ಅನುರಾಧ ಸಂವಿಧಾನ ಪೀಠಿಕೆ ಬೋಧಿಸಿದರು,ಜ್ಯೋತಿಲತಾ ತಡಬಿಡಿಮಠ ನಿರೂಪಿಸಿ ವಂದಿಸಿದರು..