ಸುಲೇಪೇಟ ಆರೋಗ್ಯ ಕೇಂದ್ರಕ್ಕೆ ಮಾಜಿ ಸಂಸದ ಉಮೇಶ್ ಜಾಧವ್ ಭೇಟಿ ಪರಿಶೀಲನೆ

ಸುಲೇಪೇಟ ಆರೋಗ್ಯ ಕೇಂದ್ರಕ್ಕೆ  ಮಾಜಿ ಸಂಸದ ಉಮೇಶ್ ಜಾಧವ್ ಭೇಟಿ  ಪರಿಶೀಲನೆ

ಗ್ರಾಮೀಣ ಆರೋಗ್ಯ ಕೇಂದ್ರಗಳ ಸಮಸ್ಯೆ ನಿವಾರಣೆಗೆ ಆಗ್ರಹ

ಸುಲೇಪೇಟ ಆರೋಗ್ಯ ಕೇಂದ್ರಕ್ಕೆ ಮಾಜಿ ಸಂಸದ ಉಮೇಶ್ ಜಾಧವ್ ಭೇಟಿ ಪರಿಶೀಲನೆ

ಕಲಬುರಗಿ : ಸುಲೇಪೇಟೆ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯರು ಸೇರಿದಂತೆ ಅನೇಕ ಕೊರತೆಗಳಿಂದ ಗ್ರಾಮೀಣ ಪ್ರದೇಶದಲ್ಲಿ ಆರೋಗ್ಯ ಸೇವೆ ನೀಡಲು ಕಷ್ಟವಾಗುತ್ತಿರುವುದನ್ನು ಸರಕಾರವು ಕೂಡಲೇ ವೈದ್ಯರನ್ನು ನೇಮಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಲೋಕಸಭಾ ಸದಸ್ಯರಾದ ಡಾ. ಉಮೇಶ್ ಜಾಧವ್ ಸರಕಾರಕ್ಕೆ ಆಗ್ರಹ ವ್ಯಕ್ತಪಡಿಸಿದ್ದಾರೆ.

     ಸುಲೇಪೇಟೆ ಆರೋಗ್ಯ ಕೇಂದ್ರಕ್ಕೆ ಭಾನುವಾರ (ಆಗಸ್ಟ್ 9ರಂದು) ಭೇಟಿ ನೀಡಿದ ನಂತರ ಸುತ್ತಿಗಾರರ ಜೊತೆ ಮಾತನಾಡಿ ಇತ್ತೀಚೆಗೆ ಸುಲೇಪೇಟೆ ಆರೋಗ್ಯ ಕೇಂದ್ರಕ್ಕೆ ಎದೆ ನೋವಿನಿಂದ ಬಳಲುತ್ತಿದ್ದ ರೋಗಿ ಒಬ್ಬರನ್ನು ಕರೆತಂದಾಗ ವೈದ್ಯರ ಸಕಾಲಿಕ ನೆರವು ಹಾಗೂ ಆಮ್ಲಜನಕದ ಕೊರತೆಯಿಂದ ರೋಗಿ ಸಾವನ್ನಪ್ಪಿರುವ ಘಟನೆ ಸಂಭವಿಸಿದೆ. ವೈದ್ಯರ ಕೊರತೆ ಇರುವುದರಿಂದ ರೋಗಿಯನ್ನು ಕೂಡಲೆ ಚಿಂಚೋಳಿಗೆ ವರ್ಗಾಯಿಸುವಂತೆ ಸಿಬ್ಬಂದಿಗಳು ನೀಡಿದ ಸಲಹೆಯಂತೆ ಕರೆದೊಯ್ಯುವಾಗ ರೋಗಿ ಸಾವನ್ನಪ್ಪಿದ್ದು ಇದು ಸರಕಾರದ ಆರೋಗ್ಯ ಸೇವೆಯ ನಿರ್ಲಕ್ಷ್ಯಕ್ಕೆ ಪ್ರತ್ಯಕ್ಷ ನಿದರ್ಶನವಾಗಿದೆ ಇದೇ ರೀತಿ ಚಿಂಚೋಳಿ ರಸ್ತೆ ಅಪಘಾತ ಸಂಭವಿಸಿದಾಗ ಸಕಾಲಕ್ಕೆ ಆಂಬುಲೆನ್ಸ್ ದೊರೆಯದೆ ಇಬ್ಬರು ಜೀವ ಕಳೆದುಕೊಂಡಿದ್ದಾರೆ. 15 ನಿಮಿಷಗಳಲ್ಲಿ ಆಂಬುಲೆನ್ಸ್ ಆಗಮಿಸಬೇಕಾಗಿದ್ದರು ಸಕಾಲದಲ್ಲಿ ಸೇವೆ ಸಿಗದೆ ಅಪಘಾತ ಸಂಭವಿಸಿದೆ ಇಬ್ಬರು ಸಾವನ್ನಪ್ಪಿದ್ದಾರೆ. ರಾಜ್ಯ ಆರೋಗ್ಯ ಸಚಿವ ಯು. ಟಿ. ಖಾದರ್ ಉತ್ತಮ ಕಾರ್ಯ ನಿರ್ವಹಿಸುತ್ತಿದ್ದರು ಗ್ರಾಮೀಣ ಪ್ರದೇಶಗಳ ಆರೋಗ್ಯ ಕೇಂದ್ರಗಳಿಗೆ ವೈದ್ಯರ ನೇಮಕವಾಗದೆ ತೀವ್ರ ಸಮಸ್ಯೆ ಎದುರಿಸಲಾಗುತ್ತಿದೆ. ಸುಲೇಪೇಟೆ ಹೋಬಳಿಯಾಗಿದ್ದು ಒಂದು ಲಕ್ಷಕ್ಕೂ ಅಧಿಕ ಜನಸಂಖ್ಯೆ ಹೊಂದಿರುವುದರಿಂದ ಕೂಡಲೇ ವೈದ್ಯರನ್ನು ನೇಮಿಸಬೇಕಾಗಿದೆ. ತಾನು ಲೋಕಸಭಾ ಸದಸ್ಯರಿದ್ದಾಗ ಎಂಪಿ ನಿಧಿಯಿಂದ 60 ಲಕ್ಷ ರೂಪಾಯಿ ವೆಚ್ಚ ಮಾಡಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣಗೊಂ ಡಿದ್ದರೂ ಸ್ವಚ್ಛತೆ ಇಲ್ಲದೆ ಆಸ್ಪತ್ರೆಯ ಪರಿಸರವು ಪೂರ್ಣವಾಗಿ ಹಾಳಾಗಿದೆ. ಆಕ್ಸಿಜನ್ ಘಟಕ,ಜೀವ ರಕ್ಷಕ ಕಿಟ್ ಹಾಗೂ ತಜ್ಞ ವೈದ್ಯರ ಕೊರತೆಯಿಂದ ಗ್ರಾಮೀಣರಿಗೆ ಆರೋಗ್ಯ ಸೇವೆ ನೀಡಲು ಕಷ್ಟ ಸಾಧ್ಯವಾಗಿದೆ. ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ 371 (ಜೆ) ಕಲಂ ನ ಅನ್ವಯ ಗ್ರಾಮೀಣ ಪ್ರದೇಶಗಳ ಆಸ್ಪತ್ರೆ ಸುಧಾರಣೆಗೆ ಹೆಚ್ಚಿನ ಹಣವನ್ನು ಮೀಸಲಿರಿಸಿ ಆರೋಗ್ಯ ಕ್ಷೇತ್ರದ ಸುಧಾರಣೆಗೆ ಸರಕಾರವು ಕೂಡಲೇ ಕ್ರಮಕೈಗೊಳ್ಳಬೇಕು ಎಂದು ಸ್ವತಃ ವೈದ್ಯನಾಗಿ ತಾನು ಆಗ್ರಹಿಸುವುದಾಗಿ ಡಾ. ಉಮೇಶ್ ಜಾಧವ್ ಸರಕಾರವನ್ನು ಒತ್ತಾಯಿಸಿದ್ದಾರೆ.