ಹೊಲಿಗೆ ಯಂತ್ರೋಪಕರಣಗಳನ್ನು ವಿತರಿಸಿದ ಶಾಸಕ ಎಂ. ವೈ ಪಾಟೀಲ್
ಹೊಲಿಗೆ ಯಂತ್ರೋಪಕರಣಗಳನ್ನು ವಿತರಿಸಿದ ಶಾಸಕ ಎಂ. ವೈ ಪಾಟೀಲ್
ಕಲಬುರಗಿ: ೨೦೨೪ ೨೫ ನೇ ಸಾಲಿನ ಡಿ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಡಿಯಲ್ಲಿ ಅಫಜಲಪೂರ ವಿಧಾನಸಭಾ ಕ್ಷೇತ್ರದ ಶಾಸಕರ ಅಧ್ಯಕ್ಷತೆಯಲ್ಲಿ ಆಯ್ಕೆಯಾಗಿರುವ ಫಲಾನುಭವಿಗಳಿಗೆ ಹೊಲಿಗೆ ಯಂತ್ರೋಪಕರಣಗಳನ್ನು ಶಾಸಕರಾದ ಎಂ. ವೈ ಪಾಟೀಲ್ ಅವರು ಕಲಬುರಗಿಯಲ್ಲಿ ವಿತರಿಸಿದರು. ಈ ಸಂದರ್ಭದಲ್ಲಿ ನಿಗಮದ ವ್ಯವಸ್ಥಾಪಕ ಜಗದೇವಪ್ಪ, ಮುಖಂಡರಾದ ಉಗ್ರಮೂರ್ತಿ ಗರೂರು ಗುಡೂರ, ಶರಣು ಅಪಚ್ಚಂದ, ಲಿಂಗಣ್ಣ ಗೌಡ ಪಾಟೀಲ್ ಮಿಣಜಿಗಿ, ನಬೀಸಾಬ್ ಜೋಗುರ್ ಸೇರಿದಂತೆ ಇತರರು ಇದ್ದರು.
