ಡಾ.ಶೀಲಾದೇವಿ ಬಿರಾದಾರ ಮುಡಿಗೆ ಚಿನ್ನದ ಪದಕ

ಡಾ.ಶೀಲಾದೇವಿ ಬಿರಾದಾರ ಮುಡಿಗೆ ಚಿನ್ನದ ಪದಕ

ಡಾ.ಶೀಲಾದೇವಿ ಬಿರಾದಾರ ಮುಡಿಗೆ ಚಿನ್ನದ ಪದಕ

ಕಲಬುರಗಿ: ಕನ್ನಡ ಅಧ್ಯಯನ ಸಂಸ್ಥೆಯ ಅತಿಥಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುವ ಡಾ.ಶೀಲಾದೇವಿ ಬಿರಾದಾರ ಅವರಿಗೆ ಸ್ನಾತಕೋತ್ತರ ಪಿ.ಜಿ.ಡಿಪ್ಲೊಮಾ ವಚನ‌ ಸಾಹಿತ್ಯದಲ್ಲಿ ಪ್ರಥಮ ರ‍್ಯಾಂಕ್ ಮತ್ತು ಚಿನ್ನದ ಪದಕ ಪಡೆದಿದ್ದಾರೆ.ಇವರು ಆಳಂದ ತಾಲೂಕಿನ ರುದ್ರವಾಡಿ ಎಂಬ ಸಣ್ಣ ಹಳ್ಳಿಯ ರೈತರ ಮಗಳಾದ‌ ಡಾ.ಶೀಲಾದೇವಿ ಬಿರಾದಾರ ಅವರು ಶಿವಲಿಂಗಪ್ಪ ಮತ್ತು ಶ್ರೀದೇವಿಯವರ ಮಗಳು. ಇವರು ಆಳಂದದಲ್ಲಿ ಬಿ.ಎ.ಪದವಿ.ಗುಲಬರ್ಗಾ ವಿಶ್ವವಿದ್ಯಾಲಯ ದಲ್ಲಿ ಎಂ.ಎ.ಕನ್ನಡ ಮತ್ತು ಪಿಎಚ್.ಡಿ ಪದವಿಯನ್ನು ಪ್ರಭು ಖಾನಾಪುರೆ ಅವರ ಮಾರ್ಗದರ್ಶನದಲ್ಲಿ ಪಡೆದು, ಆಳಂದ, ಶಹಬಾದಗಳಲ್ಲಿ ಪದವಿ ಉಪನ್ಯಾಸಕಿಯಾಗಿ, ಗುಲಬರ್ಗಾ ವಿಶ್ವವಿದ್ಯಾಲಯದ ಬಸವಕಲ್ಯಾಣ, ಹಾಲಹಳ್ಳಿಯಲ್ಲಿ ಸೇವೆ.ಪ್ರಸ್ತುತ ಗುಲಬರ್ಗಾ ವಿಶ್ವವಿದ್ಯಾಲಯ ಕಲಬುರಗಿಯ ಕನ್ನಡ ಅಧ್ಯಯನ ಸಂಸ್ಥೆಯ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕುಸನೂರಿನ ಆಕಾಶ ದಶರಥ ತೆಗನೂರ ಅವರನ್ನು ವಿವಾಹವಾಗಿದ್ದಾರೆ.ಎರಡು ಕವನ ಸಂಕಲನ, ಎರಡು ಸ್ವತಂತ್ರ ಕೃತಿಗಳು,ಮೂರು ಸಂಪಾದನೆ ಕೃತಿ ಸಂಪಾದಿಸಿದ್ದಾರೆ.ಹದಿಮೂರು ಕತೆಗಳು,ತಾಂಕಾ,ಗಜಲ್, ಬರೆದಿದ್ದು, ಬಂಡಾಯಗಾರ್ತಿ,ಕವಯತ್ರಿ, ಕಥೆಗಾರ್ತಿ,ಸಂಶೋಧಕಿ, ಲೇಖಕಿಯಾಗಿ ಹೆಸರು ಮಾಡಿದ್ದಾರೆ‌ ಹಲವು ಪ್ರಶಸ್ತಿ ಗೌರವಕ್ಕೆ ಪಾತ್ರರಾಗಿದ್ದಾರೆ. ಸಿರಿಗನ್ನಡ ವೇದಿಕೆ ಜಿಲ್ಲಾ ಘಟಕದ ಕಾರ್ಯದರ್ಶಿಯಾಗಿ,ಕನ್ನಡ ಪರ ಸಂಘಟನೆ, ಹಲವು ಸಮ್ಮೇಳನದಲ್ಲಿ ಉಪನ್ಯಾಸ, ಕಾವ್ಯವಾಚನ ಮಾಡಿದವರು.ಕಲ್ಯಾಣ ಕರ್ನಾಟಕ ಭಾಗದ ಯುವ ಸಾಹಿತಿಯಾಗಿ ಬೆಳೆಯುತ್ತಿರುವ ಪ್ರತಿಭೆ. ಇವರು ಗುಲಬರ್ಗಾ ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಸಂಸ್ಥೆಯ ಸ್ನಾತಕೋತ್ತರ ಪಿ. ಜಿ. ಡಿಪ್ಲೋಮಾ ವಚನ ಸಾಹಿತ್ಯದಲ್ಲಿ ಪ್ರಥಮ ರ‍್ಯಾಂಕ್ ಮತ್ತು ಚಿನ್ನದ ಪದಕ ಪಡೆದ ನಿಮಿತ್ಯ 43ನೇ ಘಟಿಕೋತ್ಸವದಲ್ಲಿ ಗೌರವಿಸಲಾಗುತ್ತಿದೆ.ಇವರ ಅನನ್ಯ ಬಹು ಮುಖ ಪ್ರತಿಭೆಗೆ ಸಂದ ಗೌರವ ಎಂದು ಸಿರಿಗನ್ನಡ ವೇದಿಕೆ ಮತ್ತು ಸಾಕ್ಷಿ ಪ್ರತಿಷ್ಠಾನ ಅಧ್ಯಕ್ಷ ಡಾ.ಗವಿಸಿದ್ಧಪ್ಪ ಪಾಟೀಲ, ಉರಿಲಿಂಗಪೆದ್ದಿ ಮಠದ ಪೀಠಾಧಿಪತಿ ಪೂಜ್ಯಶ್ರೀ ಪಂಚಾಕ್ಷರಿ ಸ್ವಾಮೀಜಿ, ಯುವ ಮುಖಂಡ ಸುರೇಶ ಕಾನೇಕರ್,ಕೇಂದ್ರ ಸಾಹಿತ್ಯ ಅಕಾಡೆಮಿ ಕನ್ನಡ ಸಲಹಾ ಸಮಿತಿ ಸದಸ್ಯರಾದ ಡಾ.ಜಯದೇವಿ ಗಾಯಕವಾಡ,ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನದ ಡಾ.ಬಸವರಾಜ ಕೊನೇಕ, ಮಹಾಂತಜ್ಯೋತಿ ಪ್ರತಿಷ್ಠಾನ ಅಧ್ಯಕ್ಷ ಪ್ರೊ.ಶಿವರಾಜ ಪಾಟೀಲ,ಡಾ.ಸಂಧ್ಯಾ ಎಸ್. ಕಾನೇಕರ್,ಡಾ.ಶಾಂತಪ್ಪ ಡಂಬಳ,ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಹನುಮಂತರಾವ್ ದೊಡ್ಡಮನಿ,ಡಾ.ರಾಜಕುಮಾರ ಮಾಳಗೆ,ಡಾ.ಸಿದ್ದಪ್ಪ ಹೊಸಮನಿ,ದಸಾಪ ಬೀದರ ಜಿಲ್ಲಾ ಅಧ್ಯಕ್ಷ ಡಾ.ಪೀರಪ್ಪ ಸಜ್ಜನ,ದಸಾಪ ತಾಲೂಕಾಧ್ಯಕ್ಷ ಶಿವರಾಜ ಮೇತ್ರೆ, ಮತ್ತಿತರು ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.