ಬುದ್ಧ ತತ್ವಕ್ಕೆ ಮರು ಪಯಣದ ಕೃತಿ ಬುದ್ಧ ಭಾರತ ಮಹಾಕಾವ್ಯ: ವಿಕ್ರಂ ವಿಸಾಜಿ

ಬುದ್ಧ ತತ್ವಕ್ಕೆ ಮರು ಪಯಣದ ಕೃತಿ ಬುದ್ಧ ಭಾರತ ಮಹಾಕಾವ್ಯ: ವಿಕ್ರಂ ವಿಸಾಜಿ

ಬುದ್ಧ ಭಾರತ ಮಹಾಕಾವ್ಯ ಲೋಕಾರ್ಪಣೆ ಪ್ರೊ. ಟಿ.ಎಂ ಭಾಸ್ಕರ್ ಅಭಿನಂದನೆ

 ಬುದ್ಧ ತತ್ವಕ್ಕೆ ಮರು ಪಯಣದ ಕೃತಿ ಬುದ್ಧ ಭಾರತ ಮಹಾಕಾವ್ಯ: ವಿಕ್ರಂ ವಿಸಾಜಿ

 ಕಲಬುರಗಿ : ವಿಶ್ರಾಂತ ಕುಲಪತಿಗಳಾದ ನಾಡಿನ ಖ್ಯಾತ ಕವಿ, ನಾಟಕಕಾರ ಪ್ರೊ. ಟಿಎಂ ಭಾಸ್ಕರ್ ಅವರ ಮಹಾಕಾವ್ಯ ಬುದ್ಧ ಭಾರತವು ಬುದ್ಧನ ತತ್ವಕ್ಕೆ ಮರುಪಯಣ ಮಾಡಿಸುವ ಶ್ರೇಷ್ಠ ಮಹಾಕಾವ್ಯವಾಗಿದೆ ಎಂದು ಕವಿ,ವಿಮರ್ಶಕ ಪ್ರೊ. ವಿಕ್ರಮ್ ವಿಸಾಜಿ ಅಭಿಪ್ರಾಯ ಪಟ್ಟರು.

   ಕಲಬುರಗಿ ರಂಗಾಯಣದಲ್ಲಿ ಆಗಸ್ಟ್ 16ರಂದು ಸಿರಿಗನ್ನಡ ವೇದಿಕೆ ಜಿಲ್ಲಾ ಘಟಕ,ಕರ್ನಾಟಕ ಬೌದ್ಧ ಸಾಹಿತ್ಯ ಮತ್ತು ಸಾಂಸ್ಕೃತಿಕ ಪರಿಷತ್, ಸಾಕ್ಷಿ ಪ್ರತಿಷ್ಠಾನ ಇವುಗಳ ಜಂಟಿ ಆಶ್ರಯದಲ್ಲಿ ನಡೆದ ಮಹಾಕಾವ್ಯ ಬುದ್ಧ ಭಾರತ ಕೃತಿ ಲೋಕಾರ್ಪಣೆ ಹಾಗೂ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಟಿ.ಎಂ ಭಾಸ್ಕರ್ ಅವರ ಅಭಿನಂದನಾ ಸಮಾರಂಭದಲ್ಲಿ ಕೃತಿಯ ಕುರಿತು ಮಾತನಾಡಿ 400 ಪುಟಗಳ ಮಹಾಕಾವ್ಯದಲ್ಲಿ ಬುದ್ಧನ ಜೀವನ ಮತ್ತು ಬುದ್ಧನ ತತ್ವ ಪ್ರಮುಖ ಅಂಶಗಳಾಗಿ ಶಾಂತ ರಸದಲ್ಲಿ ಮಹಾಕಾವ್ಯ ರಚನೆಗೊಂಡಿದೆ. ಜಾನಪದ, ವಚನ, ತತ್ವಪದಗಳ ಪ್ರೇರಣೆಯಿಂದ ಹಾಡುಗಬ್ಬವಾಗಿ ಮಹಾಕಾವ್ಯವು ಮೂಡಿಬಂದಿದೆ. ಭಾಷೆಯ ಜೊತೆ ತಾದತಮ್ಯ ಹೊಂದಿ ಬುದ್ಧನ ಶೀಲ,ಪ್ರಜ್ಞೆ ಕರುಣೆಯನ್ನು 29 ಭಾಗಗಳಲ್ಲಿ ಮಹಾಕಾವ್ಯದಲ್ಲಿ ಕಟ್ಟಿಕೊಡಲಾಗಿದೆ. ಭಾಸ್ಕರ್ ಅವರು ಮಹಾಕಾವ್ಯವನ್ನು ವಿಭಿನ್ನ ಶೈಲಿಯಲ್ಲಿ ಹುಡುಕಾಟ, ವಿನಯ ಪೂರ್ವಕ ಶೈಲಿಯಲ್ಲಿ ಸ್ವರಾಕ್ಷರಗಳ ಮೂಲಕ ವೈಚಾರಿಕತೆಯನ್ನು ಕಟ್ಟಿಕೊಡಲು ಪ್ರಯತ್ನಿಸಿ ಬುದ್ಧ ತತ್ವದೆಡೆಗೆ ಓದುಗನನ್ನು ಮರುಪಯಣ ಮಾಡುವಂತೆ ರಚಿಸಿದ್ದಾರೆ ಎಂದು ವಿಸಾಜಿ ಹೇಳಿದರು.

    ಕೃತಿಯನ್ನು ಲೋಕಾರ್ಪಣೆ ಮಾಡಿದ ಪುಸ್ತಕ ಉದ್ಯಮಿ ಡಾ. ಬಸವರಾಜ್ ಜಿ ಕೊನೆಕ್ ಮಾತನಾಡಿ ಮಹಾಕಾವ್ಯಗಳ ಯುಗ ಮುಗಿಯಿತು ಎಂಬ ಕಾಲಘಟ್ಟದಲ್ಲಿ ಕಲ್ಯಾಣ ಕರ್ನಾಟಕದ ನೆಲದಿಂದ ಬುದ್ಧ ಭಾರತ ಮಹಾಕಾವ್ಯವನ್ನು ಪ್ರೊ ಭಾಸ್ಕರ್ ಮಹಾಕಾವ್ಯವನ್ನು ಉತ್ಕೃಷ್ಟವಾಗಿ ರಚನೆ ಮಾಡಿಕೊಟ್ಟಿದ್ದಾರೆ ಎಂದು ಬಣ್ಣಿಸಿದರು. ಕನ್ನಡ ಲೇಖಕರು ಓದುಗರ ಸಹಕಾರಿ ಸಂಘದ ಅಧ್ಯಕ್ಷರಾದ ಅಪರಾವು ಅಕ್ಕೋಣಿ ಮಾತನಾಡಿ ಮಹಾಕಾವ್ಯ ಬುದ್ಧ ಭಾರತದಲ್ಲಿ ಸಾರುವ ತತ್ವ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿ ಬಾಳಬೇಕು ಎಂದು ಹೇಳಿದರು. ಕೇಂದ್ರ ಸಾಹಿತ್ಯ ಅಕಾಡೆಮಿಯ ಕನ್ನಡ ಸಲಹಾ ಸಮಿತಿ ಸದಸ್ಯರಾದ ಡಾ. ಜಯದೇವಿ ಗಾಯಕವಾಡ ಮಾತನಾಡಿ ಕನ್ನಡ ಮಹಾಕಾವ್ಯ ಪರಂಪರೆಯಲ್ಲಿ ಪ್ರೊ. ಟಿ ಎಂ ಭಾಸ್ಕರ್ ಬುದ್ಧ ಭಾರತ ಮಹಾಕಾವ್ಯವನ್ನು ರಚನೆ ಮಾಡಿ ಮಹಾಕವಿಯಾಗಿ ಗುರುತಿಸಿಕೊಂಡಿದ್ದಾರೆ. ಸಾಹಿತ್ಯ ಲೋಕದ ಮಹಾಕಾವ್ಯ ಪ್ರಕಾರಕ್ಕೆ ಈ ಕೃತಿಯ ಮೂಲಕ ಹೊಸ ಭಾಷ್ಯವನ್ನು ಬರೆದು ಬುದ್ಧ ಜೀವನ ತತ್ವ ಸಂದೇಶಗಳನ್ನು ಅನಾವರಣ ಮಾಡಿಕೊಟ್ಟಿದ್ದಾರೆ ಎಂದರು.

 ಕಾರ್ಯಕ್ರಮದಲ್ಲಿ ಅಣದೂರಿನ 

ವರಜ್ಯೋತಿ ಭಂತೇಜಿ ಆಶೀರ್ವಚನ ನೀಡಿದರು. ಸಾಹಿತಿ ಡಾಕ ಹನುಮಂತ ರಾವ್ ಬಿ ದೊಡ್ಡಮನಿ ಅಧ್ಯಕ್ಷತೆ ವಹಿಸಿದ್ದರು . ಸಿರಿಗನ್ನಡ ವೇದಿಕೆ ಮತ್ತು ಸಾಕ್ಷಿ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಗವಿಸಿದ್ದಪ್ಪ ಪಾಟೀಲ್ ಪ್ರಾಸ್ತಾವಿಕ ವಾಗಿ ಮಾತನಾಡಿ ಬುದ್ಧನ 29 ಸೂಕ್ತಿಗಳನ್ನು ಬೌದ್ದ ಚಿಂತನೆಗಳನ್ನು ಹಾಡುಗಬ್ಬದ ರೂಪದಲ್ಲಿ ಮೌಖಿಕ ಕಾವ್ಯವಾಗಿ 3700 ಚೌಪದಿಗಳಲ್ಲಿ ಪ್ರೊ ಟಿ ಎಂ ಭಾಸ್ಕರ್ ರಚನೆ ಮಾಡಿ ಮಹಾಕಾವ್ಯವನ್ನು ಕೊಟ್ಟಿದ್ದಾರೆ ಎಂದು ಶ್ಲಾಘಿಸಿದರು. ಕರ್ನಾಟಕ ಬುದ್ಧ ಸಾಹಿತ್ಯ ಮತ್ತು ಸಾಂಸ್ಕೃತಿಕ ಪರಿಷತ್ತಿನ ಅಧ್ಯಕ್ಷರಾದ ಸುರೇಶ್ ಕಾನೇಕರ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಆರ್ ಕೆ ಹುಡುಗಿ ಬಸವರಾಜ್ ಪೊಲೀಸ್ ಪಾಟೀಲ್ ಡಾ. ಸದಾನಂದ ಪೆರ್ಲ ಡಾ. ಕೆ ಎಸ್ ಬಂದು ಎ.ಬಿ ಹೊಸಮನಿ ಶಿವರಂಜನ ಸತ್ಯಂಪೇಟೆ ಡಾ. ಶೀಲಾ ಬಿರಾದಾರ ಡಾ ನಾರಾಯಣ ರೋಲೆಕರ್, ಡಾ. ಸಂಧ್ಯಾ ಕಾನೇಕರ್, ಪ್ರೊ ವೆಂಕಟರೆಡ್ಡಿ, ವೀರಭದ್ರ ಸಿಂಪಿ, ವೆಂಕಟೇಶ ಜನಾದ್ರಿ, ನಾರಾಯಣರಾವ್ ಕುಲಕರ್ಣಿ ಮತ್ತಿತರರು ಉಪಸ್ಥಿತರಿದ್ದರು. ಡಾ. ಶೋಭಾದೇವಿ ಚಕ್ಕಿ ಪ್ರಾರ್ಥನಾ ಗೀತೆ ಹಾಡಿದರು ಡಾ ರಾಜಕುಮಾರ್ ಮಾಳಗೆ ನಿರೂಪಿಸಿದರು. ಮಹಾಕಾವ್ಯ ಬುದ್ಧ ಭಾರತ ಕೃತಿ ಬರೆದ ಪ್ರೊ ಟಿ ಎಂ ಭಾಸ್ಕರ್ ಹಾಗೂ ಶ್ರೀಮತಿ ಲಲಿತಾ ಭಾಸ್ಕರ್ ಅವರನ್ನು ಶಾಲು ಪೇಟ ತೊಡಿಸಿ ಅಭಿನಂದನಾ ಪತ್ರ ನೀಡಿ ಗೌರವಿಸಲಾಯಿತು.

 ಅಧ್ಯಯನ ಶೀಲ ಮನೋವೃತ್ತಿಯ ಪ್ರೊ ಟಿ ಎಂ ಭಾಸ್ಕರ್ ಅವರು ಮಹಾಕಾವ್ಯದ ಮೂಲಕ ನಾಡಿನ ಶ್ರೇಷ್ಠ ಮಹಾ ಕಾವ್ಯ ರಚನೆಕಾರ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ 

- ವರ ಜ್ಯೋತಿ ಬಂತೇಜಿ ಅಣದೂರು 

- ಮಹಾಕಾವ್ಯವನ್ನು ರಚಿಸಲು ಅಪಾರ ಶ್ರಮ ಅಧ್ಯಯನ ನಂತರ 30 ವರ್ಷಗಳ ಪರಿಶ್ರಮಕ್ಕೆ ಉತ್ತರ ರೂಪದಲ್ಲಿ ಬುದ್ಧಭಾರತ ಮಹಾ ಕಾವ್ಯದ ಮೊದಲ ಸಂಪುಟ ಬಂದಿದೆ. ಎರಡನೇ ಸಂಪುಟವು ಮುಂದಿನ ಏಪ್ರಿಲ್ ಒಳಗೆ ಪ್ರಕಾಶನಗೊಳ್ಳಲಿದೆ. 

- ಪ್ರೊಫೆಸರ್ ಟಿ ಎಂ ಭಾಸ್ಕರ್ ವಿಶ್ರಾಂತ ಕುಲಪತಿಗಳು 

- ಪ್ರೊಫೆಸರ್ ಟಿ ಎಂ ಭಾಸ್ಕರ್ ಬಡತನದಲ್ಲಿ ಹುಟ್ಟಿ ಸಾಧನೆಯ ಮೂಲಕ ಹಂತ ಹಂತವಾಗಿ ವಿವಿಧ ಸ್ಥಾನಗಳನ್ನು ಅಲಂಕರಿಸಿ ಶಿಕ್ಷಣ, ಸಾಹಿತ್ಯ ಆಡಳಿತ ಕ್ಷೇತ್ರದಲ್ಲಿ ಕಪ್ಪು ಚುಕ್ಕೆ ಇಲ್ಲದೆ ನಿಸ್ಪೃಹ ಸೇವೆ ಸಲ್ಲಿಸಿದ ಕಲ್ಯಾಣ ಕರ್ನಾಟಕದ ಭಾಗದ ಹೆಮ್ಮೆಯ ಸಾಹಿತಿ.

- - ಡಾಕ್ಟರ್ ಹನುಮಂತ ರಾವ್ ಬಿ ದೊಡ್ಡಮನಿ ಸಾಹಿತಿ.