ಬಿ.ಕಾಂ. ರಿಟೇಲ್ ಆಪರೇಷನ್ ವಿದ್ಯಾರ್ಥಿಗಳಿಗೆ ಅಪ್ರೆಂಟಿಸ್‌ಶಿಪ್ ಸಂದರ್ಶನ ಕಾರ್ಯಕ್ರಮ ಉದ್ಘಾಟನೆ

ಬಿ.ಕಾಂ. ರಿಟೇಲ್ ಆಪರೇಷನ್ ವಿದ್ಯಾರ್ಥಿಗಳಿಗೆ ಅಪ್ರೆಂಟಿಸ್‌ಶಿಪ್ ಸಂದರ್ಶನ ಕಾರ್ಯಕ್ರಮ ಉದ್ಘಾಟನೆ

ಬಿ.ಕಾಂ. ರಿಟೇಲ್ ಆಪರೇಷನ್ ವಿದ್ಯಾರ್ಥಿಗಳಿಗೆ ಅಪ್ರೆಂಟಿಸ್‌ಶಿಪ್ ಸಂದರ್ಶನ ಕಾರ್ಯಕ್ರಮ ಉದ್ಘಾಟನೆ

ಕಲಬುರಗಿ: ಸರ್ಕಾರಿ ಮಹಾವಿದ್ಯಾಲಯ (ಸ್ವಾಯತ್ತ) ಕಲಬುರಗಿಯಲ್ಲಿ ಬಿ.ಕಾಂ. ರಿಟೇಲ್ ಆಪರೇಷನ್ ಅಂತಿಮ ವರ್ಷದ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದ್ದ ಅಪ್ರೆಂಟಿಸ್‌ಶಿಪ್ ಸಂದರ್ಶನ ಕಾರ್ಯಕ್ರಮವನ್ನು ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರಾದ ಡಾ. ಅಬ್ದುಲ್ ರೆಹಮಾನ್ ಎಂ. ಅವರು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ರಿಟೇಲ್ ಆಪರೇಷನ್ ಅತ್ಯುತ್ತಮ ಉದ್ಯೋಗಾಧಾರಿತ ಕೋರ್ಸ್ ಆಗಿದ್ದು, ಜಾಗತಿಕ ಮಟ್ಟದಲ್ಲಿ ಈ ಕ್ಷೇತ್ರಕ್ಕೆ ಹೆಚ್ಚಿನ ಬೇಡಿಕೆಯಿದೆ. ವಿದ್ಯಾರ್ಥಿಗಳು ಇಂತಹ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ತಮ್ಮ ವೃತ್ತಿಜೀವನವನ್ನು ಉಜ್ವಲಗೊಳಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ರಿಲಯನ್ಸ್ ಇಂಡಸ್ಟ್ರೀಸ್‌ನ ಮಾನವ ಸಂಪನ್ಮೂಲ ಅಧಿಕಾರಿ ಶ್ರೀಮತಿ ಫಾಲೇಶ್ವರಿ ಪಿ. ಬೆಳ್ಳಾರಿ, ಟಾಟಾ ಕ್ರೋಮಾದ ಮಾನವ ಸಂಪನ್ಮೂಲ ಅಧಿಕಾರಿ ಶ್ರೀ ಶರಣಪ್ಪ ಕಂದಗೂಳ ಹಾಗೂ ರಿಲಯನ್ಸ್ ಇಂಡಸ್ಟ್ರೀಸ್‌ನ ಸ್ಟೋರ್ ಮ್ಯಾನೇಜರ್ ಶ್ರೀ ಶಿವಕುಮಾರ್ ಉಪಸ್ಥಿತರಿದ್ದು ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶಗಳು ಹಾಗೂ ಉದ್ಯಮದ ಅಗತ್ಯತೆಗಳ ಕುರಿತು ಮಾಹಿತಿ ನೀಡಿದರು.

ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಸವಿತಾ ತಿವಾರಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದ ಪ್ರಾಸ್ತಾವಿಕವಾಗಿ ಶ್ರೀ ಶಶಿಕಾಂತ ಕೊಳ್ಳಿ ಮಾತನಾಡಿದರು. ಡಾ. ಸುಜಾತ ದೊಡ್ಡಮನಿ ವಂದನಾರ್ಪಣೆ ಸಲ್ಲಿಸಿದರೆ, ಡಾ. ಸಫಿಯಾ ಬೇಗಂ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು.

ವೇದಿಕೆಯಲ್ಲಿ ವಾಣಿಜ್ಯಶಾಸ್ತ್ರ ವಿಭಾಗದ ಡೀನ್ ಡಾ. ರಾಜಕುಮಾರ ಸಲಗರ, ವಿದ್ಯಾರ್ಥಿ ಕಲ್ಯಾಣಾಧಿಕಾರಿ ಡಾ. ಶ್ರೀಮಂತ ಹೊಳ್ಕರ್, ಐಕ್ಯೂಎಸಿ ಸಂಯೋಜಕ ಶ್ರೀ ಮಹೇಶ, ಸಿಬ್ಬಂದಿ ಕಾರ್ಯದರ್ಶಿ ಡಾ. ರವೀಂದ್ರಕುಮಾರ ಭಂಡಾರಿ ಹಾಗೂ ಸಾಂಸ್ಕೃತಿಕ ಸಂಚಾಲಕ ಡಾ. ಬಲಭೀಮ ಸಾಂಗ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ವಾಣಿಜ್ಯ ವಿಭಾಗದ ಮುಖ್ಯಸ್ಥೆ ಡಾ. ಸುಜಾತ ದೊಡ್ಡಮನಿ, ಸಂಯೋಜಕ ಶ್ರೀ ಶಶಿಕಾಂತ ಕೊಳ್ಳಿ, ಪ್ರಾಧ್ಯಾಪಕರಾದ ಡಾ. ಮೀನಾಕ್ಷಿ ಎಂ. ಹುಗ್ಗಿ, ಡಾ. ಅರುಣಕುಮಾರ ಸಲಗರ, ಡಾ. ಸವಿತಾ ಪಾಟೀಲ, ಡಾ. ಸಫಿಯಾ ಬೇಗಂ ಹಾಗೂ ಡಾ. ರವಿ ಬೌದ್ಧೆ ಸೇರಿದಂತೆ ಮಹಾವಿದ್ಯಾಲಯದ ಸಮಸ್ತ ಪ್ರಾಧ್ಯಾಪಕರು ಮತ್ತು ವಾಣಿಜ್ಯಶಾಸ್ತ್ರ ವಿಭಾಗದ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಈ ಕುರಿತು ಮಹಾವಿದ್ಯಾಲಯದ ಪತ್ರಿಕಾ ಸಂಯೋಜಕರಾದ ಡಾ. ನಾಗಪ್ಪ ಗೋಗಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.