ಕಲಬುರಗಿಯಲ್ಲಿ ಜಿಲ್ಲಾ ರೆಡ್ಡಿ ಸಮಾಜ ಯುವಕರ ಸಂಘದ ನೂತನ ಕಚೇರಿ ಉದ್ಘಾಟನೆ: ಸಮಾಜದ ಸಂಘಟನೆಗೆ ಒತ್ತು – ಕೃಷ್ಣ ರೆಡ್ಡಿ
ಕಲಬುರಗಿಯಲ್ಲಿ ಜಿಲ್ಲಾ ರೆಡ್ಡಿ ಸಮಾಜ ಯುವಕರ ಸಂಘದ ನೂತನ ಕಚೇರಿ ಉದ್ಘಾಟನೆ: ಸಮಾಜದ ಸಂಘಟನೆಗೆ ಒತ್ತು – ಕೃಷ್ಣ ರೆಡ್ಡಿ
ಕಲಬುರಗಿ : ನಗರದ ರಾಮಂದಿರ ವೃತ್ತದ ಸಮೀಪ ನೂತನವಾಗಿ ಸ್ಥಾಪಿಸಲಾದ ಕಲಬುರಗಿ ಜಿಲ್ಲಾ ರೆಡ್ಡಿ ಸಮಾಜ ಯುವಕರ ಸಂಘದ ಕಚೇರಿಯನ್ನು ಜೆಡಿಎಸ್ ಮುಖಂಡ ಕೃಷ್ಣ ರೆಡ್ಡಿ ಅವರು ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಸಂಘದ ಕರಪತ್ರಗಳನ್ನು ಬಿಡುಗಡೆ ಮಾಡಲಾಯಿತು.
ಬಳಿಕ ಮಾತನಾಡಿದ ಕೃಷ್ಣ ರೆಡ್ಡಿ, ಸಮಾಜದ ಅಭಿವೃದ್ಧಿಗೆ ಸಂಘಟಿತ ಪ್ರಯತ್ನ ಅಗತ್ಯವಾಗಿದೆ. ಯುವಕರು ಸಮಾಜಮುಖಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಶಿಕ್ಷಣ, ಉದ್ಯೋಗ, ಸಾಮಾಜಿಕ ಸೇವೆ ಹಾಗೂ ಪರಸ್ಪರ ಸಹಕಾರಕ್ಕೆ ಆದ್ಯತೆ ನೀಡಬೇಕು. ಸಮಾಜದ ಏಕತೆ ಮತ್ತು ಸಂಘಟನೆಯೇ ಅಭಿವೃದ್ಧಿಗೆ ಮೂಲಮಂತ್ರವಾಗಿದ್ದು, ಜಿಲ್ಲಾ ರೆಡ್ಡಿ ಸಮಾಜ ಯುವಕರ ಸಂಘವು ಸಮಾಜದ ಹಿತಕ್ಕಾಗಿ ಮಾದರಿ ಕಾರ್ಯಗಳನ್ನು ಕೈಗೊಳ್ಳಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಡಾ. ಎಸ್.ಎಲ್. ಪಾಟೀಲ್, ವಿಶ್ವಕಾಮ ರೆಡ್ಡಿ, ವಿಶಾಲಾಕ್ಷಿ ಕರಡಿ, ಲಕ್ಷ್ಮಿಕಾಂತ್ ಪಲಾರೆಡ್ಡಿ, ಮಹೇಶ್ ಹೊಸೂರಕರ್, ಹನುಮಂತ್ ರೆಡ್ಡಿ ಶೇರಿಕಾರ್, ಜಿ.ಜಿ. ವಣಿಕ್ಯಾಳ, ಮಲ್ಲಪ್ಪ ಜೊತಗಿ, ಚಂದ್ರಶೇಖರ್ ರೆಡ್ಡಿ ಮಲಬಾದ್, ಸಾಹೇಬಣ್ಣ ರೆಡ್ಡಿ ಆಳಂದ್, ಮಲ್ಲ ರೆಡ್ಡಿ ಸಾಹುಕಾರ್, ನಾಗರೆಡ್ಡಿ, ಶಿವು ಹಾಗಾರ ಗುಂಡಗಿ, ಆನಂದ್ ಬಿರಾದಾರ್, ನಾರಾಯಣ ರೆಡ್ಡಿ, ಆನಂದ್ ರೆಡ್ಡಿ, ಮಲ್ಲಿಕಾರ್ಜುನ ಕೊಲ್ಲೂರ, ಸುನಿಲ್ ರೆಡ್ಡಿ ಸೇರಿದಂತೆ ಸಮಾಜದ ಅನೇಕ ಮುಖಂಡರು, ಯುವಕರು ಹಾಗೂ ಗಣ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮವು ಆತ್ಮೀಯ ವಾತಾವರಣದಲ್ಲಿ ನಡೆಯಿತು. ಸಮಾಜದ ಸಂಘಟನೆ ಹಾಗೂ ಯುವಕರ ಸಬಲೀಕರಣದ ನಿಟ್ಟಿನಲ್ಲಿ ನೂತನ ಕಚೇರಿ ಮಹತ್ವದ ಪಾತ್ರ ವಹಿಸಲಿದೆ ಎಂಬ ವಿಶ್ವಾಸವನ್ನು ಸದಸ್ಯರು ವ್ಯಕ್ತಪಡಿಸಿದರು.
