ಬುದ್ಧ-ಬಸವ-ಅಂಬೇಡ್ಕರ್ ವಿಚಾರಧಾರೆಗಳು ಸಾಮಾಜಿಕ ಸಮಾನತೆಗೆ ದಾರಿದೀಪ: ರಾಜ್ಯ ಮಟ್ಟದ ವಿಚಾರ ಸಂಕಿರಣದಲ್ಲಿ ಕರೆ
ಬುದ್ಧ-ಬಸವ-ಅಂಬೇಡ್ಕರ್ ವಿಚಾರಧಾರೆಗಳು ಸಾಮಾಜಿಕ ಸಮಾನತೆಗೆ ದಾರಿದೀಪ: ರಾಜ್ಯ ಮಟ್ಟದ ವಿಚಾರ ಸಂಕಿರಣದಲ್ಲಿ ಕರೆ
ಕಲಬುರಗಿ : ರ‍್ನಾಟಕ ದಲಿತ ಸರ‍್ಷ ಸಮಿತಿ (ರಿ.) ರಾಜ್ಯ ಸಮಿತಿ, ಬೆಂಗಳೂರು ವತಿಯಿಂದ ಬುದ್ಧ, ಬಸವ, ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಬಾಬು ಜಗಜೀವನರಾಮ್ ಅವರ ಜಯಂತಿಯ ಅಂಗವಾಗಿ ರಾಜ್ಯ ಮಟ್ಟದ ವಿಚಾರ ಸಂಕಿರಣವನ್ನು ನಗರದ ಕನ್ನಡ ಭವನದಲ್ಲಿ ಶುಕ್ರವಾರ ಆಯೋಜಿಸಲಾಯಿತು.
ಕಾರ್ಯಕ್ರಮವನ್ನು ಶಿವಮೊಗ್ಗ ರ‍್ನಾಟಕ ದಲಿತ ಮಹಿಳಾ ಒಕ್ಕೂಟದ ರಾಜ್ಯ ಸಂಚಾಲಕಿ ಪಿ. ವಿಜಯಲಕ್ಷ್ಮಿ ಗೋಪಾಲ್ ಉದ್ಘಾಟಿಸಿ ಮಾತನಾಡಿ, ಬುದ್ಧ, ಬಸವ, ಡಾ. ಅಂಬೇಡ್ಕರ್ ಹಾಗೂ ಬಾಬು ಜಗಜೀವನರಾಮ್ ಅವರ ವಿಚಾರಧಾರೆಗಳು ಸಮಾನತೆ, ಸಾಮಾಜಿಕ ನ್ಯಾಯ ಮತ್ತು ಮಾನವೀಯ ಮೌಲ್ಯಗಳ ಪ್ರತೀಕಗಳಾಗಿವೆ. ಇಂದಿನ ಸಮಾಜದಲ್ಲಿ ಅವರ ರ‍್ಶಗಳನ್ನು ಅಳವಡಿಸಿಕೊಳ್ಳುವ ಮೂಲಕ ಶೋಷಿತ ರ‍್ಗಗಳ ಸಬಲೀಕರಣ ಸಾಧ್ಯವಾಗಲಿದೆ ಎಂದು ಹೇಳಿದರು.
ರಾಜ್ಯ ಸಂಚಾಲಕ ತರಿಕೇರಿ ಎನ್. ವೆಂಕಟೇಶ್ ಮಾತನಾಡಿ, ಸಂವಿಧಾನ ನೀಡಿರುವ ಹಕ್ಕುಗಳನ್ನು ರಕ್ಷಿಸಿಕೊಳ್ಳಲು ದಲಿತರು ಸಂಘಟಿತರಾಗಬೇಕು. ಸಮಾಜದಲ್ಲಿ ಸಮಾನತೆ ಮತ್ತು ಸಾಮಾಜಿಕ ನ್ಯಾಯ ಸ್ಥಾಪನೆಗಾಗಿ ಬುದ್ಧ, ಬಸವ, ಅಂಬೇಡ್ಕರ್ ಹಾಗೂ ಬಾಬು ಜಗಜೀವನರಾಮ್ ಅವರ ತತ್ವಗಳನ್ನು ಯುವಜನತೆ ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ವಿಚಾರ ಸಂಕಿರಣದಲ್ಲಿ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಸಂಘಟನೆಯ ಮುಖಂಡರು ಹಾಗೂ ರ‍್ಯರ‍್ತರು ಭಾಗವಹಿಸಿ, ಸಾಮಾಜಿಕ ನ್ಯಾಯ, ಸಮಾನತೆ, ಶಿಕ್ಷಣ ಮತ್ತು ಸಂಘಟಿತ ಹೋರಾಟದ ಅಗತ್ಯತೆಯ ಕುರಿತು ಅಭಿಪ್ರಾಯಗಳನ್ನು ಹಂಚಿಕೊAಡರು.
ಈ ಸಂದರ್ಭದಲ್ಲಿ ಕಲಬುರಗಿ ಜಿಲ್ಲಾ ಸಂಚಾಲಕ ಸಾಯಬಣ್ಣ ಎಂ. ಬಡಿಗೇರ್, ವಿಭಾಗೀಯ ಸಂಚಾಲಕ ಸತೀಶ್ ಭಟ್ಟರಕಿ, ಕಲಬುರಗಿ ಜಿಲ್ಲಾ ಸಂಯೋಜಕ ಡಾ. ಬಸವರಾಜ್ ಎಸ್. ಕಟ್ಟಿ, ಕೋಲಾರ ರಾಜ್ಯ ಸಂಯೋಜಕ ವೆಂಕಟರಾಮಪ್ಪ ವಿ., ಬೆಂಗಳೂರು ರಾಜ್ಯ ಸಂಯೋಜಕರಾದ ಎಂ.ಕೆ. ರಾಜಶೇಖರ್ ಜಾಪನೂರ್, ಮ್ಯಾಧ್ಯೂ ಮುನಿಯಪ್ಪ, ಮಹದೇವ ಪ್ರಸಾದ, ನವೀನ್, ವಿಶಾಲಾಕ್ಷಿ, ಕೆ. ಚಂದ್ರಮ್ಮ, ಭಾರತಿ, ಚಿಕ್ಕಮಂಗಳೂರು ಜಿಲ್ಲಾ ಸಂಚಾಲಕ ಭೀಮಯ್ಯ, ತುಮಕೂರು ಜಿಲ್ಲಾ ಸಂಚಾಲಕ ಓಂಕಾರ ಮೂರ್ತಿ, ಬೆಂಗಳೂರು ಜಿಲ್ಲಾ ಸಂಚಾಲಕ ಪ್ರವೀಣಕುಮಾರ್, ಜರ‍್ಗಿ ತಾಲೂಕು ಸಂಚಾಲಕ ರಾಜಶೇಖರ ಮುಧವಾಳ, ಜಗದೇವಿ ಹೆಗಡೆ, ಮಹಾಲಕ್ಷ್ಮಿ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
