ವಿದ್ಯುತ್ ಸಂಸ್ಥೆಯನ್ನು ಖಾಸಗೀಕರಣ ಮಾಡುವ ತೀರ್ಮಾನವನ್ನು ತಕ್ಷಣಕ್ಕೆ ಕೈ ಬಿಡಬೇಕು : ವೀರಣ್ಣ ಗಂಗಾಣಿ ಅಗ್ರಹ
ವಿದ್ಯುತ್ ಪ್ರಸರಣ ಖಾಸಗೀಕರಣಗೊಳಿಸಬೇಡಿ : ತಹಸೀಲ್ದಾರ್ ಮೂಲಕ ಆಯೋಗಕ್ಕೆ ಮನವಿ ಸಲ್ಲಿಕೆ
ಅಂಬೇಡ್ಕರ್ ಅವರು ಜನ ಕಲ್ಯಾಣದ ಉಪಯೋಗಕ್ಕಾಗಿ ಸ್ಥಾಪಿಸಿದ ಸರಕಾರಿ ವಿದ್ಯುತ್ ಸಂಸ್ಥೆಯನ್ನು ಖಾಸಗೀಕರಣ ಮಾಡುವ ತೀರ್ಮಾನವನ್ನು ತಕ್ಷಣಕ್ಕೆ ಕೈ ಬಿಡಬೇಕು : ವೀರಣ್ಣ ಗಂಗಾಣಿ ಅಗ್ರಹ
ಚಿಂಚೋಳಿ : 1942 ರಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಅವರು ಸರಕಾರದ ಮೂಲಕವೇ ಜನರಿಗೆ ವಿದ್ಯುತ್ ಪೂರೈಕೆ ಮಾಡಬೇಕೆನ್ನುವ ದೃಷ್ಠಿಯಿಂದ ವಿದ್ಯುತ್ ಕೇಂದ್ರ ಮತ್ತು ಇಲಾಖೆ ಸ್ಥಾಪನೆ ಮಾಡಲಾಗಿದೆ. ಅಂತಹ ಸದುದ್ದೇಶದೊಂದಿಗೆ ಅಂಬೇಡ್ಕರ್ ಅವರು ಜಾರಿಗೆ ತಂದ ವಿದ್ಯುತ್ ಶಕ್ತಿಯನ್ನು ಲಾಭದ ಗಳಿಕೆಯ ಆಸೆಗೆ ಬಿದ್ದು ಸರಕಾರ ಖಾಸಗಿ ಕಾರಣ ಮಾಡಲು ಹೊರಟಿದನ್ನು ಕೂಡಲೇ ಕೈ ಬಿಡಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ, ರೈತ ಸೇನೆ ಅಧ್ಯಕ್ಷ ವೀರಣ್ಣ ಗಂಗಾಣಿ ಅವರು ಬೆಂಗಳೂರು ಕರ್ನಾಟಕ ವಿದ್ಯುತ್ ಶಕ್ತಿ ನಿಯಂತ್ರಣ ಆಯೋಗದ ಕಾರ್ಯದರ್ಶಿಗಳಿಗೆ ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ ಅವರ ಮೂಲಕ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.
ಈಗಾಗಲೇ ಸರಕಾರ ವಿದ್ಯುತ್ ಪ್ರಸಾರಗೊಳಿಸಲು ಖಾಸಗಿ ಸಂಸ್ಥೆಗಳಿಗೆ ಅರ್ಜಿ ಹಾಕಲು ಪ್ರಮುಖ ದಿನ ಪತ್ರಿಕೆಗಳಲ್ಲಿ ಪ್ರಕಟಿಸಿದ್ದು, ಅದರಂತೆ ಮುಂಬೈ ಮೂಲದ ಟಾಟಾ ಪವರ್ ಕಂಪನಿ ಅರ್ಜಿ ಹಾಕಿಲಾಗಿದೆ. ಅದಕ್ಕೆ ಆಕ್ಷೇಪಣೆ ಸಲ್ಲಿಸಲು ಪ್ರಕಟಣೆ ನೀಡಲಾಗಿದೆ. ಈ ಹಿನ್ನಲೆಯಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ಅವರು ಸಂವಿಧಾನದಡಿ ಶಕ್ತಿಯನ್ನು ನೀಡಿ ಜನ ಕಲ್ಯಾಣದ ಉಪಯೋಗಕ್ಕಾಗಿ ಸ್ಥಾಪನೆಗೋಡಂತಹ ಸರಕಾರಿ ವಿದ್ಯುತ್ ಸಂಸ್ಥೆಯನ್ನು ಖಾಸಗೀಕರಣ ಮಾಡುವ ತೀರ್ಮಾನವನ್ನು ತಕ್ಷಣಕ್ಕೆ ಕೈ ಬಿಡಬೇಕು. ಸಂಸ್ಥೆ ಪಡೆಯಲು ಅರ್ಜಿ ಹಾಕಿರುವ ಮುಂಬೈ ಟಾಟಾ ಪವರ್ ಕಂಪನಿ ಅರ್ಜಿ ತಿರಸ್ಕರಿಸಿ ರದ್ದುಪಡಿಸಬೇಕು. ಅರ್ಜಿ ತಿರಸ್ಕರಿಸದೆ ಸರಕಾರ ತಮ್ಮ ಧೋರಣೆ ಮುಂದುವರೆಸಿದೆಯಾದಲಿ ಅದು ಜನ ವಿರೋಧಿ ಮತ್ತು ಅಂಬೇಡ್ಕರ್ ಅವರು ಕಂಡಂತಹ ಆಸೆಯದ ವಿರುದ್ಧ ತೀರ್ಮಾನದ ನಡೆ ಆಗಲಿದೆ. ಹೀಗಾಗಿ ಸರಕಾರ ವಿದ್ಯುತ್ ಪೂರೈಸುವ ಕೇಂದ್ರವನ್ನು ಸರಕಾರದ ಹಂತದಲ್ಲಿಯೇ ಮುಂದುವರೆಸಿಕೊಂಡು ಹೋಗಬೇಕೆಂದು ಮನವಿ ಸಲ್ಲಿಸಿ ಗಂಗಾಣಿ ಒತ್ತಾಯಿಸಿದ್ದಾರೆ.
