ರೈತರ ಸಾಲ ಮನ್ನಾ ಮಾಡಿ,ಬೆಳೆ ಪರಿಹಾರ ನೀಡಿ, ವಿಶೇಷ ಪ್ಯಾಕೇಜ್ ಘೋಷಿಸಿ - ರಾಜು ಬಾಣತಿಹಾಳ ಒತ್ತಾಯ.

ರೈತರ ಸಾಲ ಮನ್ನಾ ಮಾಡಿ,ಬೆಳೆ ಪರಿಹಾರ ನೀಡಿ, ವಿಶೇಷ ಪ್ಯಾಕೇಜ್ ಘೋಷಿಸಿ - ರಾಜು ಬಾಣತಿಹಾಳ ಒತ್ತಾಯ.

ರೈತರ ಸಾಲ ಮನ್ನಾ ಮಾಡಿ,ಬೆಳೆ ಪರಿಹಾರ ನೀಡಿ, ವಿಶೇಷ ಪ್ಯಾಕೇಜ್ ಘೋಷಿಸಿ - ರಾಜು ಬಾಣತಿಹಾಳ ಒತ್ತಾಯ. 

ಶಹಾಪುರ : ಸಂಕಷ್ಟದಲ್ಲಿರುವ ತಾಲೂಕಿನ ಬಹುತೇಕ ರೈತರಿಗೆ,ಬೆಳೆ ಹಾನಿಗೆ ಸೂಕ್ತ ಪರಿಹಾರ ನೀಡಿ,ಕೃಷಿ ಸಾಲ ಮನ್ನಾ ಮಾಡಿ, ಮಳೆಯಾಶ್ರಿತ ಪ್ರದೇಶಗಳಿಗೆ ವಿಶೇಷ ಪ್ಯಾಕೇಜುಗಳನ್ನು ಘೋಷಿಸುವ ಮೂಲಕ ಬೆಂಬಲ ನೀಡುವ ಅಗತ್ಯವಿದೆ ಎಂದು ಯುವ ಮುಖಂಡ ರಾಜು ಬಾಣತಿಹಾಳ ಸರಕಾರಕ್ಕೆ ಒತ್ತಾಯಿಸಿದ್ದಾರೆ.

ಈ ವರ್ಷ ಮುಂಗಾರು ಬೆಳೆ ಆರಂಭದಲ್ಲೆ ಕೈಕೊಟ್ಟಿದ್ದರಿಂದ ರೈತ ಸಮುದಾಯದಲ್ಲಿ ಆತಂಕವನ್ನುಂಟು ಮಾಡಿದೆ.ಬಿತ್ತಿದ ಬೀಜ ಹಾಗೂ ಗೊಬ್ಬರ ಮಣ್ಣು ಪಾಲಾಗಿ ರೈತನ ಬದುಕು ಕಷ್ಟಕರವಾಗಿದೆ,ಮಳೆರಾಯ ಮುನಿಸಿಕೊಂಡಿರುವುದರಿಂದ ಕೃಷಿ ಚಟುವಟಿಕೆಗಳಿಗೆ ತೀವ್ರ ಹಿನ್ನಡೆ ಉಂಟಾಗಿದೆ.

ಇದೆಲ್ಲವನ್ನು ಅರ್ಥ ಮಾಡಿಕೊಂಡು ಸರ್ಕಾರ ಆಗಲಿ ಜಿಲ್ಲಾಧಿಕಾರಿಗಳಾಗಲಿ ಕೂಡಲೇ ಇನ್ನುಳಿದ ಬೆಳೆ ಪರಿಹಾರ ನೀಡಿ ಈಗಾಗಲೇ ಪಡೆದಿರುವ ರೈತರ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕೆಂದು ಈ ಸಂದರ್ಭದಲ್ಲಿ ನುಡಿದರು.

ಕಳೆದ ಸಾಲಿನಲ್ಲಿ ಪ್ರಕೃತಿ ವಿಕೋಪದಿಂದ ಬೆಳೆ ನಷ್ಟ ಅನುಭವಿಸಿದ ರೈತರಿಗೆ ರಾಜ್ಯ ಸರ್ಕಾರ ತಕ್ಷಣವೇ ಸೂಕ್ತ ಬೆಳೆ ಪರಿಹಾರ ಘೋಷಿಸಿದರು,ತಾಂತ್ರಿಕ ನೆಪವೊಡ್ಡಿ ಜಿಲ್ಲಾ ಆಡಳಿತ ರೈತರಿಗೆ ಸತಾಯಿಸುತ್ತಿದ್ದಾರೆ ಎಂದು ಜಿಲ್ಲಾಡಳಿತದ ವಿರುದ್ಧ ಕಿಡಿ ಕಾರಿದರು.