ಸೌಹಾರ್ದ ಸಾಮರಸ್ಯದ ಕನ್ನಡ ಸಾಹಿತ್ಯ: ರಾಜೇಂದ್ರ ಕೊರಬ

ಸೌಹಾರ್ದ ಸಾಮರಸ್ಯದ ಕನ್ನಡ ಸಾಹಿತ್ಯ: ರಾಜೇಂದ್ರ ಕೊರಬ

ಸೌಹಾರ್ದ ಸಾಮರಸ್ಯದ ಕನ್ನಡ ಸಾಹಿತ್ಯ: ರಾಜೇಂದ್ರ ಕೊರಬ

ಕಲಬುರಗಿ: ಕನ್ನಡ ಸಾಹಿತ್ಯವು ಬಹು ವಿಶಾಲವಾಗಿದೆ. ಜನಪದ ಕಾವ್ಯದಿಂದ ಹಿಡಿದು ಮೊದಲ ಸಾಹಿತ್ಯಕ್ಜೆ ನಾಂದಿ ಹಾಡಿದ ಶ್ರೀವಿಜಯನ ಕವಿರಾಜ ಮಾರ್ಗ, ವಡ್ಡಾರಾಧನೆ, ಪಂಪ,ಪೊನ್ನ,ನಾಗಚಂದ್ರ, ಲಕ್ಷ್ಮೀಶ,ಅಂಬಲಗಿ ಚನ್ನಮಲ್ಲ,

ವಚನಕಾರರು, ದಾಸರು,ತತ್ವಪದಕಾರರು, ಸೂಫಿಗಳು ಹೊಂದಿದ ಸಾಮರಸ್ಯ- ಸೌಹಾರ್ದ ಸಾಹಿತ್ಯ ಕನ್ನಡ ಸಾಹಿತ್ಯವೆಂದು ಹಿರಿಯ ಸಾಹಿತಿ ರಾಜೇಂದ್ರ ಎಂ.ಕೊರಬ ನುಡಿದರು

ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು

ಚಕೋರ ಸಾಹಿತ್ಯ ವಿಚಾರ ವೇದಿಕೆ,ಕಲಬುರಗಿ

ಸಹಯೋಗದೊಂದಿಗೆ ಸರಕಾರಿ ಉರ್ದು ಪ್ರೌಢ ಶಾಲೆ ರೋಜಾ ಟೈನ್ ಪಾಚಾಪೂರ,ಕಲಬುರಗಿಯಲ್ಲಿ ಕನ್ನಡ ಸಾಹಿತ್ಯ ಪರಿಚಯ ವಿಶೇಷ ಉಪನ್ಯಾಸ ನೀಡಿ ಮಾತನಾಡಿದ ಅವರು ಸ್ವಾರಸ್ಯ ಜಿವನೋತ್ಸಾಹ ತುಂಬಿ,ಕನ್ನಡ ಭಾಷೆ ಕಲಿತು ಪ್ರೀತಿ,ಮಮತೆ,ವಾತ್ಸಲ್ಯ ಹೊಂದಿ ಇತರ ಭಾಷೆ- ಸಾಹಿತ್ಯ ಅಧ್ಯಯನ ಅವಶ್ಯ.ಹಾಗೇ ಕನ್ನಡ ಭಾಷೆ,ಸಾಹಿತ್ಯದ ಮೂಲಕ ಸಾಮಾಜಿಕ ಬದಲಾವಣೆ ಹೊಂದಲು ಸಾಧ್ಯವೆಂದರು.

ಅಧ್ಯಕ್ಷತೆ ವಹಿಸಿದ ಮುಖ್ಯಗುರುಗಳಾದ ಕರಬಸಯ್ಯ ಮಠ ಮಾತನಾಡಿ ನಮ್ಮ ಭಾಷೆ ಸಾಹಿತ್ಯ ಅರಿತರೆ ನಮ್ಮ ನಾಲಿಗೆ ಶುದ್ಧವಾಗುತ್ತದೆ‌.ಸಾಹಿತ್ಯದ ಮೂಲಕ ಕನ್ನಡೇತರ ವಿದ್ಯಾರ್ಥಿಗಳಿಗೆ ಜೀವ ತುಂಬುವ ಕೆಲಸ ಅಕಾಡೆಮಿ ಮತ್ತು ಚಕೋರ ವೇದಿಕೆಯ ಕಾರ್ಯ ಶ್ಲಾಘನೀಯ ಎಂದರು.

ನಿವೃತ್ತ ಶಿಕ್ಷಕ ಅಜೀಜ್ ಅ ವರು ಮಾತನಾಡಿ ನಮ್ಮ ಮನೆಯೊಳಗೆ ಮಾತೃಭಾಷೆ ಆಡಿ ಅದರೊಂದಿಗೆ ವ್ಯವಹಾರ ಮಾಡಲು,ಅಧ್ಯಯನ ಮಾಡಲು ಮೂರು ಭಾಷೆ ಅಗತ್ಯ.ಕನ್ನಡ ಭಾಷೆಗೆ ಒತ್ತು‌ನೀಡಲು ಕರೆ ನೀಡಿದರು. ಕನ್ನಡ ಉಪನ್ಯಾಸಕರಾದ ಡಾ.ರಾಜಕುಮಾರ ಮಾಳಗೆ,ಡಾ.ಶೀಲಾದೇವಿ ಬಿರಾದಾರ ಮಾತನಾಡಿ ಸಾಹಿತ್ಯ ಓದು,ಅಧ್ಯಯನ ಅವಶ್ಯವೆಂದರು.

ಚಕೋರ ವೇದಿಕೆ ಸಂಚಾಲಕ ಡಾ.ಗವಿಸಿದ್ಧಪ್ಪ ಪಾಟೀಲ ಸ್ವಾಗತಿಸಿ ಅಕಾಡೆಮಿಯ ಕಾರ್ಯ ಯೋಜನೆ,ಚಕೋರದ ಮಹತ್ವ ಹೇಳಿ ಸಾವಿರಾರು ವರ್ಷಗಳ ಪರಂಪರೆ ಹೊಂದಿ ರುವ ಕನ್ನಡ ಭಾಷೆ- ಸಾಹಿತ್ಯ ಇಂದಿಗೂ ಅನ್ಯ ಭಾಷೆಗಳ ಸ್ವೀಕರಿಸಿ ತನ್ನದೇ ಆದ ಹೊಸ ಭಾಷೆ ಗಟ್ಟಿಗೊಳಿಸಿ ಕೊಂಡಿದೆ.ನಮ್ಮ ಚಕೋರ ವೇದಿಕೆ ಕನ್ನಡೇತರ ವಿದ್ಯಾರ್ಥಿ ಗಳಲ್ಲಿ ಕನ್ನಡ ಸಾಹಿತ್ಯದ ಓದು,ಅಧ್ಯಯನ, ಆಸಕ್ತಿ ಹುಟ್ಟಿ ಸುವ ಕಾರ್ಯಕ್ರಮ ಹಾಕಿಕೊಳ್ಳಲಾಗಿದೆ.ಕನ್ನಡ ಸಾಹಿತ್ಯ ಶ್ರೀಮಂತವಾಗಿದೆ.ಎಂಟು ಜ್ಞಾನಪೀಠ ಪ್ರಶಸ್ತಿ ಲಭಿಸಿವೆ. ಕನ್ನಡ ಉದ್ಯೋಗದ ಭಾಷೆಯಾಗಲು ಸಾಹಿತ್ಯ ಅಗತ್ಯತೆ ಇದೆ ಪ್ರಾಸ್ತಾವಿಕ ನುಡಿಯಲ್ಲಿ ವಿವರಿಸಿದರು.

ಸಂಜೀವ ಸರ್ ದೈಹಿಕ ಶಿಕ್ಷಕರು,ವಿಜಯಕುಮಾರ ಕಂಚಾಗಾರ,ತಲಾತ್ ಸುಲ್ತಾನ್ ,ನಾಜಿಯಾ ಸಹೇರ,

ಸೈಯದಾ ಶಕೀಬಾ ಫಾತಿಮಾ,ರುಕ್ಸಾನಾ ಬೇಗಂ

ನಸೀಮಾ ಬಾನು,ಆಕಾಶ ತೆಗನೂರು ವಿದ್ಯಾರ್ಥಿಗಳು ಭಾಗವಹಿಸಿ ಯಶಸ್ವಿಯಾಗಿ ನಡೆಸಿಕೊಟ್ಟರು.ತಾಹೇರಿ ಪ್ರಾರ್ಥನೆ ಗೀತೆ ಹಾಡಿದರು.ಡಾ.ಸಿದ್ಧಪ್ಪ ಹೊಸಮನಿ ನಿರೂಪಿಸಿದರು, ಡಾ.ಪೀರಪ್ಪ ಸಜ್ಜನ ವಂದಿಸಿದರು.