ರಾಮ್ ಗ್ರೂಪ್ ಹಣಕಾಸು ಸಂಸ್ಥೆ ಶುಭಾರಂಭ

ರಾಮ್ ಗ್ರೂಪ್ ಹಣಕಾಸು ಸಂಸ್ಥೆ ಶುಭಾರಂಭ

ರಾಮ್ ಗ್ರೂಪ್ ಹಣಕಾಸು ಸಂಸ್ಥೆ ಶುಭಾರಂಭ

ಕಲಬುರಗಿ : ರಾಮ್ ಗ್ರೂಪ್ ಹಣಕಾಸು ಸಂಸ್ಥೆಯನ್ನು ಈಡಿಗ ಸಮಾಜದ ಗುರುಗಳಾದ ಪೂಜ್ಯಶ್ರೀ ಡಾಕ್ಟರ್ ಪ್ರಣವಾನಂದ ಸ್ವಾಮೀಜಿ ದೀಪ ಬೆಳಗಿಸಿ ಶುಭಾರಂಭಗೊಳಿಸಿದರು.

   ಕಲಬುರಗಿಯ ಅಳಂದ ಚೆಕ್ ಪೋಸ್ಟ್ ಬಳಿಯಲ್ಲಿ ನೂತನವಾಗಿ ಪ್ರಾರಂಭಿಸಲಾದ ಹಣಕಾಸು ಸಂಸ್ಥೆಯನ್ನು ಜೂನ್ 25ರಂದು ಪೂಜ್ಯರ ಹಾಗೂ ಅತಿಥಿಗಳ ಸಮ್ಮುಖದಲ್ಲಿ ಶುಭಾರಂಭಗೊಳಿಸಲಾಯಿತು. ಕಾರ್ಯಕ್ರಮದಲ್ಲಿ ಸುಲೇಪೇಟ್ ಏಕದಂಡಗಿ ಮಠದ ಶ್ರೀ ದೊಡ್ಡೇಂದ್ರ ಸ್ವಾಮೀಜಿ, ಯಾದಗಿರಿ ಬಸವ ಯೋಗಾಶ್ರಮದ ಶ್ರೀ ಬಸವ ಒಕ್ಕಲಿಗ ಮುದ್ದಣ ಶರಣರು ಹಾಗೂ ಬಾಗಲಕೋಟೆಯ ಶಿವಸಿಂಪಿ ಸಮಾಜದ ಮಹಾಂತ ಮಠದ ಶ್ರೀ ಮಹಾಂತ ಸ್ವಾಮೀಜಿ, ಹಾಗೂ ಉದ್ಯಮಿಗಳಾದ ಕುಪೇಂದ್ರ ಗುತ್ತೇದಾರ್ ನಾಗೂರ್ , ವೆಂಕಟೇಶ ಎಂ ಕಡೇಚೂರ್, ಡಾ ಸದಾನಂದ ಪೆರ್ಲ ಮತ್ತಿತರ ಅನೇಕ ಗಣ್ಯರು ಉಪಸ್ಥಿತರಿದ್ದರು. ನಿರ್ದೇಶಕರಾದ ರಮೇಶ್ ಸರ್ವರನ್ನು ಸ್ವಾಗತಿಸಿ ಶಾಲು ಹಣ್ಣು ಹಂಪಲು ನೀಡಿ ಸನ್ಮಾನಿಸಿದರು ಈ ಸಂದರ್ಭದಲ್ಲಿ ಪಾಲುದಾರರಾದ ನಾಗೇಶ್, ಆಕಾಶ್ ಮತ್ತಿತರು ಉಪಸ್ಥಿತರಿದ್ದರು