ಅತಿ ಹೆಚ್ಚು ಅಂಕ ಪಡೆದ ವಿದ್ಯರ್ಥಿಗಳಿಗೆ ಎಸ್. ಎನ್. ಪುಣ್ಯಶೆಟ್ಟಿ ಟ್ರಸ್ಟ್ ವತಿಯಿಂದ ನಗದು ಪುರಸ್ಕಾರ, ಸನ್ಮಾನ : ದೀಪಕನಾಗ ಪುಣ್ಯಶೆಟ್ಟಿ
ಅತಿ ಹೆಚ್ಚು ಅಂಕ ಪಡೆದ ವಿದ್ಯರ್ಥಿಗಳಿಗೆ ಎಸ್. ಎನ್. ಪುಣ್ಯಶೆಟ್ಟಿ ಟ್ರಸ್ಟ್ ವತಿಯಿಂದ ನಗದು ಪುರಸ್ಕಾರ, ಸನ್ಮಾನ : ದೀಪಕನಾಗ ಪುಣ್ಯಶೆಟ್ಟಿ
ಚಿಂಚೋಳಿ : ತಾಲ್ಲೂಕಿನ ವ್ಯಾಪ್ತಿಯ ಸರ್ಕಾರಿ ಹಾಗೂ ಅನುದಾನಿತ ಪ್ರಾಢಶಾಲೆಗಳ 2025-26ನೇ ಸಾಲಿನ ವಿದ್ಯಾರ್ಥಿಗಳು ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಪ್ರತಿಭಾವಂತ ಐದು ವಿದ್ಯಾರ್ಥಿಗಳಿಗೆ ಚಿಂಚೋಳಿ ಶ್ರೀ ಶಶಿಧರ ನಾಗಶೆಟ್ಟಿ ಪುಣ್ಯಶೆಟ್ಟಿ ಚಾರಿಟಿ ಟ್ರಸ್ಟ್ ವತಿಯಿಂದ ನಗದು ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲು ಟ್ರಸ್ಟ್ ನಿರ್ಧರಿಸಿದೆ ಎಂದು ಮಾಜಿ ಜಿ. ಪಂ. ಅಧ್ಯಕ್ಷ ದೀಪಕನಾಗ ಪುಣ್ಯಶೆಟ್ಟಿ ತಿಳಿಸಿದರು.
ಪಟ್ಟಣದ ಪೋಲಕಪಳ್ಳಿ ಪ್ರವಾಸಿ ಮಂದಿರದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಅತಿ ಹೆಚ್ಚು ಅಂಕ ಪಡೆದಿರುವ ವಿದ್ಯಾರ್ಥಿಗಳ ಪಟ್ಟಿ ಸಲ್ಲಿಸುವಂತೆ ಮನವಿ ಸಲ್ಲಿಸಲಾಗಿದೆ. ಸಚಿವ ಪ್ರಿಯಾಂಕ್ ಖರ್ಗೆ ಅವರ ಜನ್ಮದಿನವಾದ ನವೆಂಬರ್ 22 ರಂದು ಐನೋಳ್ಳಿ ಶ್ರೀ ಶಶಿಧರ ನಾಗಶೆಟ್ಟಿ ಪುಣ್ಯಶೆಟ್ಟಿ ಸರಕಾರಿ ಪ್ರೌಢಶಾಲೆಯ ಆವರಣದಲ್ಲಿ ಟ್ರಸ್ಟ್ ಹಮ್ಮಿಕೊಂಡ ವೇದಿಕೆ ಕಾರ್ಯಕ್ರಮ ದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಸರಕಾರಿ ಮತ್ತು ಅನುದಾನಿತ ಶಾಲೆಗಳ ಐದು ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ನೀಡಲಾಗುತ್ತದೆ. ಡಿಸೇಂಬರ್ 25 ರಂದು ಮಾಜಿ ಮುಖ್ಯಮಂತ್ರಿ ದಿವಗಂತ ಎನ್. ಧರ್ಮಸಿಂಗ್ ಅವರ ಜನ್ಮದಿನದ ಸವಿ ನೆನಪಿಗಾಗಿ ಹಾಗೂ ರಾಷ್ಟ್ರೀಯ ರೈತರ ದಿನಾಚರಣೆಯ ಅಂಗವಾಗಿ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಸಾಧಿಸಲು ಶ್ರಮಿಸಿ, ಶೇ. 100 ರಷ್ಟು ಫಲಿತಾಂಶ ಪಡೆದ ಐದು ಶಾಲೆಗಳಿಗೆ ಲ್ಯಾಪ್ ಟಾಪ್ ವಿತರಣೆ ಮಾಡಲಾಗುತ್ತದೆ ಎಂದರು.
ಪ್ರತಿಭಾ ಪುರಸ್ಕಾರದ ವಿವರ : ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಐದು ವಿದ್ಯಾರ್ಥಿಗಳಿಗೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗೆ 25,00೦ ದ್ವಿತೀಯ ಸ್ಥಾನಕ್ಕೆ 11000, ತೃತೀಯ, ಚತುರ್ಥ ಹಾಗೂ ಪಂಚಮ ಸ್ಥಾನಕ್ಕೆ 5,0೦0 ಸಾವಿರ ನಗದು ಬಹುಮಾನ ಪುರಸ್ಕಾರ ಹಾಗೂ ಸನ್ಮಾನ ಜರುಗಲಿದೆ. ಇದೆ ವೇಳೆ ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಹಾಗೂ ರಾಜಕೀಯವಾಗಿ ಸೇವೆ ಸಲ್ಲಿಸಿದ ವಿವಿಧ ರಂಗಗಳಲ್ಲಿ ಗುರುತಿಸಿಕೊಂಡು ಗಣನೀಯ ಸೇವೆ ಸಲ್ಲಿಸಿದ್ದ ಸಾಧಕರಿಗೆ ಟ್ರಸ್ಟ್ ಸನ್ಮಾನಿಸಿ ಗೌರವಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ಯಾರೆಂಟಿ ಸಮಿತಿ ಜಿಲ್ಲಾ ಉಪಾಧ್ಯಕ್ಷ ನರಸಿಂಹಲು ಕುಂಬಾರ, ವಿಜಯಕುಮಾರ ರೊಟ್ಟಿ, ಅಲ್ಲಾವುದ್ದಿನ್ ಅನ್ಸಾರಿ, ಇಬ್ರಾಹಿಂಸಾಬ್ ದೇಗಲ್ಮಡಿ, ಶರಣು ಪಪ್ಪಾ, ದಿನೇಶ, ರಾಜಕುಮಾರ ಅವರು ಉಪಸ್ಥಿತರಿದ್ದರು.

