ಧರ್ಮ ಸಮನ್ವಯದ ಹಾರಕೂಡ ಸಂತನಿಗೆ ದೆಹಲಿಯಲ್ಲಿ ನ. 21ಕ್ಕೆ ಜನ್ಮೋತ್ಸವ ಕೇಂದ್ರ ಸಚಿವ ವಿ.ಸೋಮಣ್ಣ ಉದ್ಘಾಟನೆ

ಧರ್ಮ ಸಮನ್ವಯದ ಹಾರಕೂಡ ಸಂತನಿಗೆ ದೆಹಲಿಯಲ್ಲಿ ನ. 21ಕ್ಕೆ ಜನ್ಮೋತ್ಸವ ಕೇಂದ್ರ ಸಚಿವ ವಿ.ಸೋಮಣ್ಣ  ಉದ್ಘಾಟನೆ

ಧರ್ಮ ಸಮನ್ವಯದ ಹಾರಕೂಡ ಸಂತನಿಗೆ ದೆಹಲಿಯಲ್ಲಿ ನ. 21ಕ್ಕೆ ಜನ್ಮೋತ್ಸವ ಕೇಂದ್ರ ಸಚಿವ ವಿ.ಸೋಮಣ್ಣ ಉದ್ಘಾಟನೆ

64ನೇ ಹುಟ್ಟುಹಬ್ಬ ಸಂಭ್ರಮ - 71ನೇ ಕನ್ನಡ ರಾಜ್ಯೋತ್ಸವ ಬೀದರ್ ನಿಂದ ವಿಶೇಷ ರೈಲು

 ಕಲಬುರಗಿ : ಹಾರಕೂಡ ಶ್ರೀ ಚನ್ನಬಸವೇಶ್ವರ ಸಂಸ್ಥಾನ ಹಿರೇಮಠದ ಪೀಠಾಧಿಪತಿಗಳು ಧರ್ಮ ಸಮನ್ವಯದ ಸಂತ ಡಾ. ಚನ್ನವೀರ ಶಿವಾಚಾರ್ಯ ಸ್ವಾಮೀಜಿಯವರ 64ನೇ ಜನ್ಮೋತ್ಸವ ಹಾಗೂ 71ನೇ ರಾಜ್ಯೋತ್ಸವ ಕಾರ್ಯಕ್ರಮವನ್ನು ನವೆಂಬರ್ 21ರಂದು ದೆಹಲಿಯಲ್ಲಿ ಕೇಂದ್ರ ರೈಲ್ವೆ ಹಾಗೂ ಜಲ ಶಕ್ತಿ ಖಾತೆಯ ರಾಜ್ಯ ಸಚಿವರಾದ ವಿ. ಸೋಮಣ್ಣ ಉದ್ಘಾಟಿಸಲಿದ್ದಾರೆ.

   ನವೆಂಬರ್ 21ರಂದು ದಿಲ್ಲಿಯ ಜನಪಥ ರಸ್ತೆಯಲ್ಲಿರುವ ಅಂಬೇಡ್ಕರ್ ಇಂಟರ್ ನ್ಯಾಷನಲ್ ಸೆಂಟರ್ ನಲ್ಲಿ ಬೆಳಿಗ್ಗೆ 11 ಗಂಟೆಗೆ ನವದೆಹಲಿಯ ಸಂತ ಸೇವಾಲಾಲ್ ಮಹಾರಾಜ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಏರ್ಪಡಿಸಲಾದ 64ನೇ ಜನ್ಮೋತ್ಸವ ಹಾಗೂ 71 ನೇ ರಾಜ್ಯೋತ್ಸವ ಕಾರ್ಯಕ್ರಮವನ್ನು ಕೇಂದ್ರ ಸಚಿವರು ಉದ್ಘಾಟಿಸಲಿದ್ದು ಬೀದರ್ ಸಂಸದರಾದ ಸಾಗರ್ ಖಂಡ್ರೆ, ಶಾಸಕರಾದ ಅವಿನಾಶ್ ಜಾಧವ್, ಶರಣು ಸಲಗರ್, ಮಾಜಿ ಸಂಸದರಾದ ಭಗವಂತ ಖೂಬಾ, ಹಿರಿಯ ಪತ್ರಕರ್ತ ಎಂ.ಬಿ ಮರಮ್ ಕಲ್, ಉದ್ಯಮಿ ಧನರಾಜ ತಾಳಂಪಳ್ಳಿ, ಆಲ್ ಇಂಡಿಯಾ ಬಂಜಾರ ಸೇವಾ ಸಂಘದ ಶಂಕರ್ ಪವಾರ್ ಭಾಗವಹಿಸಲಿದ್ದಾರೆ ಎಂದು ಮಾಜಿ ಸಂಸದರಾದ ಹಾಗೂ ಸಮಾರಂಭದ ಅಧ್ಯಕ್ಷರಾದ ಡಾ. ಉಮೇಶ್ ಜಾಧವ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

   ಹಾರಕೂಡ ಶ್ರೀಗಳ ಭಕ್ತರು ಮತ್ತು ಅಭಿಮಾನಿಗಳಿಗೆ ದಿಲ್ಲಿಗೆ ತೆರಳಲು ಅನುಕೂಲವಾಗುವಂತೆ ನವಂಬರ್ 19 ರಂದು ರಾತ್ರಿ 10 ಗಂಟೆಗೆ ಬೀದರ್ ರೈಲ್ವೆ ನಿಲ್ದಾಣದಿಂದ ಹಜರತ್ ನಿಜಾಮುದ್ದೀನ್ ಜಂಕ್ಷನ್ (ದಿಲ್ಲಿ ) ತನಕ ವಿಶೇಷ ರೈಲು ಸೌಲಭ್ಯ ನೀಡಲು ಕೇಂದ್ರ ರೈಲ್ವೆ ಇಲಾಖೆ ಒಪ್ಪಿಗೆ ನೀಡಿ ಟಿಕೆಟ್ ಕಾಯ್ದಿರಿಸುವಿಕೆ ಆರಂಭಗೊಂಡಿದೆ. ನವಂಬರ್ 22ರಂದು ವಿಶೇಷ ರೈಲು ಬೆಳಿಗ್ಗೆ 6 ಗಂಟೆಗೆ ದಿಲ್ಲಿಯಿಂದ ಹೊರಟು ವಾಪಸ್ ಬೀದರ್ ಗೆ ಆಗಮಿಸಲಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ದಿಲ್ಲಿಯಲ್ಲಿ ಕಾಶಿನಾಥ್ ಬಿರಾದಾರ್ (ಮೊಬೈಲ್ 8 5 8 8 8 2 3 4 5 6 ) ಅವರನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಬಹುದು ಎಂದು ಡಾ. ಜಾಧವ್ ತಿಳಿಸಿದ್ದಾರೆ.

*ಬೀದರ್ - ಹಜರತ್ ನಿಜಾಮುದ್ದೀನ್ (ದಿಲ್ಲಿ) ನಡುವೆ ವಿಶೇಷ ರೈಲು ವೇಳಾಪಟ್ಟಿ*

  ಬೀದರ್ ನಿಂದ ದಿಲ್ಲಿಯ ಹಜರತ್ ನಿಜಾಮುದ್ದೀನ್ (ರೈಲಿನಲ್ಲಿ ಸಂಖ್ಯೆ 07083 ) ರೈಲು ವಿಶೇಷ ರೈಲು ಗಾಡಿ ನವೆಂಬರ್ 19 ನಂದು ರಾತ್ರಿ 10 ಗಂಟೆಗೆ ಬೀದರ್ ನಿಂದ ಹೊರಟು ಜಹಿರಾಬಾದ್ ವಿಕಾರಾಬಾದ್, ಸಿಕಂದರಬಾದ್ ರಾಮಗುಂಡಮ್, ನಾಗ್ಪುರ ಜಂಕ್ಷನ್, ಇಟಾರ್ಸಿ, ಭೋಪಾಲ್, ಆಗ್ರಾ,ಮಥುರಾ ಮೂಲಕ ನವೆಂಬರ್ 20ರಂದು ರಾತ್ರಿ 8:40ಕ್ಕೆ ದಿಲ್ಲಿಗೆ ತಲುಪಲಿದೆ.

ನ. 22ರಂದು ದಿಲ್ಲಿಯ ಹಜರತ್ ನಿಜಾಮುದ್ದೀನ್ ರೈಲು ನಿಲ್ದಾಣದಿಂದ ( ರೈಲು ಸಂಖ್ಯೆ07084) ಮುಂಜಾನೆ 8.40 ಕ್ಕೆ ಹೊರಟು ನ.24ರಂದು ಮುಂಜಾನೆ 4 ಗಂಟೆಗೆ ಬೀದರ್ ರೈಲು ನಿಲ್ದಾಣ ತಲುಪಲಿದೆ. ಈಗಲೇ ಟಿಕೆಟ್ ಕಾಯ್ದಿರಿಸುವಿಕೆ ಆರಂಭಗೊಂಡಿದ್ದು ಟಿಕೆಟ್ ಕಾಯ್ದಿರಿಸುವಿಕೆಯ ಬಗ್ಗೆ ಹೆಚ್ಚಿನ ಮಾಹಿತಿಗೆ ಕುಪೇಂದ್ರ ಬಿರಾದಾರ್ (ಮೊಬೈಲ್ 9148886249) ಅವರನ್ನು ಸಂಪರ್ಕಿಸಬಹುದು. ಶ್ರೀಗಳ ಜನ್ಮ ಜಯಂತಿ ಮತ್ತು ರಾಜ್ಯೋತ್ಸವ ಕಾರ್ಯಕ್ರಮಕ್ಕಾಗಿ ಬೀದರ್ ಮತ್ತು ದಿಲ್ಲಿ ನಡುವೆ ವಿಶೇಷ ರೈಲು ಸೌಲಭ್ಯ ಒದಗಿಸಿ ಭಕ್ತರಿಗೆ ಅನುಕೂಲ ಮಾಡಿಕೊಟ್ಟ ಪ್ರಧಾನಮಂತ್ರಿ ನರೇಂದ್ರ ಮೋದಿ, ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಮತ್ತು ವಿ. ಸೋಮಣ್ಣ ಅವರಿಗೆ ಜಾಧವ್ ಅಭಿನಂದನೆ ಸಲ್ಲಿಸಿದ್ದಾರೆ.