ಬಿ.ವೈ ವಿಜಯೇಂದ್ರ ಜನ್ಮದಿನ ಡಾ. ಉಮೇಶ್ ಜಾಧವ್, ಗಣ್ಯರಿಂದ ಸನ್ಮಾನ
ಬಿ.ವೈ ವಿಜಯೇಂದ್ರ ಜನ್ಮದಿನ ಡಾ. ಉಮೇಶ್ ಜಾಧವ್, ಗಣ್ಯರಿಂದ ಸನ್ಮಾನ
ಬೆಂಗಳೂರು : ಬಿಜೆಪಿಯ ರಾಜ್ಯಾಧ್ಯಕ್ಷರಾದ ಬಿ ವೈ ವಿಜಯೇಂದ್ರ ಯಡಿಯೂರಪ್ಪ ಅವರ 51ನೇ ಜನುಮ ದಿನ ಸಂದರ್ಭದಲ್ಲಿ ಮಾಜಿ ಲೋಕಸಭಾ ಸದಸ್ಯರಾದ ಡಾ ಉಮೇಶ್ ಜಾಧವ್ ಮತ್ತು ಶಾಸಕ ಡಾ. ಅವಿನಾಶ್ ಉಮೇಶ್ ಜಾಧವ್ ಸನ್ಮಾನಿಸಿ ಶುಭ ಕೋರಿದರು.
ಬೆಂಗಳೂರಿನ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಸನ್ಮಾನಿಸಿದರು. ಪಕ್ಷದ ಹಿರಿಯ ನಾಯಕರಾದ ಯಡಿಯೂರಪ್ಪ ಅವರ ಆದರ್ಶದ ಹಾದಿಯಲ್ಲಿ ನಡೆದು ಸರಳ ಸಜ್ಜನಿಕೆಯೊಂದಿಗೆ ಸಮರ್ಪಣಾ ಮನೋಭಾವದಿಂದ ಜನಸೇವೆ ಮಾಡುತ್ತಿರುವ ವಿಜಯೇಂದ್ರ ಅವರಿಗೆ ಭವಿಷ್ಯ ಉಜ್ವಲವಾಗಲಿ ಎಂದು ಡಾ. ಉಮೇಶ್ ಜಾಧವ್ ಶುಭ ಕೋರಿದರು.
ಈ ಸಂದರ್ಭದಲ್ಲಿ ಶಾಸಕ ಡಾ ಅವಿನಾಶ್ ಜಾಧವ್ ಹಾಗೂ ಚಿಂಚೋಳಿ ತಾಲೂಕಿನ ಮಂಡಲ ಅಧ್ಯಕ್ಷರಾದ ವಿಜಯಕುಮಾರ್ ಚೇಂಗಟಿ,ಪ್ರಧಾನ ಕಾರ್ಯದರ್ಶಿ ರಾಮರೆಡ್ಡಿ ಪಾಟೀಲ್, ತೊಗರಿಮಂಡಳಿಯ ಮಾಜಿ ಅಧ್ಯಕ್ಷ ರಾಜಶೇಖರ್ ಗೌನಳ್ಳಿ, ವಿಜಯಕುಮಾರ್ ಮಾಡಗಿ, ನಾಗರಾಜ್ ಕೇಶ್ವಾರ್ ಚಂದ್ರಶೇಖರ ಮಳಗಿ, ಶಿವಮೂರ್ತಿ ಸ್ವಾಮಿ, ಸದ್ದಾಂ
ವಜೀರ್ ಗಾoವ ಗಣ್ಯರು ಜೊತೆಗಿದ್ದರು.

