ಮಹಿಳೆಯರು ಸ್ವಾವಲಂಬಿಗಳಾಗಿ - ಭಾರತಿ ದರ್ಶನಾಪುರ.

ಮಹಿಳೆಯರು ಸ್ವಾವಲಂಬಿಗಳಾಗಿ - ಭಾರತಿ ದರ್ಶನಾಪುರ.

ಮಹಿಳೆಯರು ಸ್ವಾವಲಂಬಿಗಳಾಗಿ - ಭಾರತಿ ದರ್ಶನಾಪುರ.

ಶಹಪುರ : ಮಹಿಳೆಯರು ಸ್ವಸಾಯ ಸಂಘಗಳ ಜತೆಗೆ ಒಗ್ಗೂಡಿ,ಸಣ್ಣ ಕೈಗಾರಿಕೆಗಳು, ಕರಕುಶಲ ವಸ್ತುಗಳು ಅಥವಾ ಗೃಹ ಬಳಿಕೆ ಉದ್ಯಮಗಳನ್ನು ಪ್ರಾರಂಭಿಸುವುದರ ಮೂಲಕ ಸ್ವಾವಲಂಬಿಗಳಾಗಿ ಜೀವನ ನಡೆಸಬೇಕು ಎಂದು ಭಾರತಿ ದರ್ಶನಾಪುರ ಹೇಳಿದರು.

ನಗರದ ಫಕೀರೇಶ್ವರ ಕಲ್ಯಾಣ ಮಂಟಪದಲ್ಲಿ ಈ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ,ಬಿ.ಸಿ.ಟ್ರಸ್ಟ್ ಶಹಾಪುರ ಘಟಕದ ವತಿಯಿಂದ ಆಯೋಜಿಸಿದ ಮಹಿಳಾ ವಿಚಾರಗೋಷ್ಠಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಮಹಿಳೆಯರು ಶಿಕ್ಷಣ ಪಡೆದು ಸರಕಾರಿ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕೆಂದು ಸಲಹೆ ನೀಡಿದರು.

ಈ ಕಾರ್ಯಕ್ರಮದಲ್ಲಿ ಸೇಡಂ ಮಹಿಳಾ ಕೌಶಲ್ಯ ಅಭಿವೃದ್ಧಿ ವಿಕಾಸ ಅಕಾಡೆಮಿ ಸಂಪನ್ಮೂಲ ವ್ಯಕ್ತಿಗಳಾದ ಲಕ್ಷ್ಮಿ ಸಿಂಪಿ ಮಾತನಾಡಿ ಮಹಿಳೆಯರು ಮನೆಯಲ್ಲೇ ಪೌಷ್ಟಿಕ ಆಹಾರದ ಜೊತೆಗೆ ಸಾಂಪ್ರದಾಯಿಕ ಆಹಾರ ತಯ್ಯಾರಿಸುವುದರ ಮೂಲಕ ಮಾರುಕಟ್ಟೆಯ ಪ್ರಮುಖ ಅಂಶಗಳನ್ನು ಅರಿತು ಕೊಂಡಾಗ ಮಾತ್ರ ನಮ್ಮ ಸಮಾಜ ಮತ್ತು ಕುಟುಂಬ ಆರ್ಥಿಕವಾಗಿ ಸದೃಢರಾಗಲು ಸಾಧ್ಯ ಎಂದು ನುಡಿದರು.

ಮಹಿಳಾ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷರಾದ ಚಂದ್ರಕಲಾ ಗೂಗಲ್ ಮಾತನಾಡಿ ರಾಜ್ಯದ ಹಾಗೂ ದೇಶದ ಅಭಿವೃದ್ಧಿಯಲ್ಲಿ ಮಹಿಳೆಯ ಪಾತ್ರ ಬಹುಮುಖ್ಯವಾಗಿದ್ದು ಮಹಿಳೆಯರು ತಯಾರಿಸುವ ದೇಸಿ ವಸ್ತುಗಳನ್ನು ಖರೀದಿಸುವ ಮೂಲಕ ಅವರ ಆದಾಯ ಮತ್ತು ಉದ್ಯಮಶೀಲತೆಗೆ ಬೆಂಬಲ ನೀಡಬೇಕೆಂದು ತಿಳಿಸಿದರು.

ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ ಫಕೀರೇಶ್ವರ ಮಠದ ಪರಮಪೂಜ್ಯರಾದ ಗುರುಪಾದ ಮಹಾಸ್ವಾಮಿಗಳು ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಆರ್ಥಿಕವಾಗಿ, ಸಾಮಾಜಿಕವಾಗಿ,ಶೈಕ್ಷಣಿಕವಾಗಿ, ಕಾರ್ಯನಿರ್ವಹಿಸುತ್ತಾ ಬಂದಿದೆ, ನಿಜಕ್ಕೂ ಈ ಸಂಸ್ಥೆಯ ಕಾರ್ಯ ಶ್ಲಾಘನೀಯವಾದದ್ದು ಎಂದು ಬಣ್ಣಿಸಿದರು.

ಈ ಸಮಾರಂಭದ ವೇದಿಕೆಯ ಮೇಲೆ ನ್ಯಾಯವಾದಿಗಳು ಹಾಗೂ ಜನಜಾಗೃತಿ ಸಮಿತಿಯ ಸದಸ್ಯರಾದ ಶೈಲಜಾ ಹೊನ್ನಾರೆಡ್ಡಿ,ಕೆಜಿಬಿ ಬ್ಯಾಂಕಿನ ಮುಖ್ಯಸ್ಥರಾದ ದತ್ತಾತ್ರೇಯ, ಪತ್ರಕರ್ತರಾದ ಮಲ್ಲಿಕಾರ್ಜುನ್ ಮುದ್ನೂರ,ಬಸವರಾಜ ಸಿನ್ನೂರ, ನಿರ್ಮಲ ಉಪ್ಪಿನ ಹಾಗೂ ಜ್ಞಾನವಿಕಾಸ ಸಮನ್ವಯ ಅಧಿಕಾರಿಗಳು,ಮೇಲ್ವಿಚಾರಕರು, ಸೇವಾ ಪ್ರತಿನಿಧಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು  

ಈ ಕಾರ್ಯಕ್ರಮದಲ್ಲಿ ಕು. ವಿನುತಾ ಹಾಗೂ ಸಂಗಡಗರಿಂದ ಭರತ ನಾಟ್ಯ ಮತ್ತು ಬಂಜಾರ ನೃತ್ಯಗಳ ಜೊತೆಗೆ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು,ಈ ಕಾರ್ಯಕ್ರಮವನ್ನು ಹೊನ್ನಪ್ಪ ಗೌಡ ನಿರೂಪಿಸಿದರು, ಪ್ರಾದೇಶಿಕ ಜ್ಞಾನ ವಿಕಾಸ ಯೋಜನಾಧಿಕಾರಿಗಳಾದ ಜ್ಯೋತಿ ಜೋಳದ ಪ್ರಾಸ್ತಾವಿಕ ಮಾತುಗಳನ್ನಾಡಿದರು,ಶಹಾಪುರ ಕ್ಷೇತ್ರದ ಯೋಜನಾಧಿಕಾರಿಗಳಾದ ಕುಮಾರ ಬಣಕಾರ ಅತಿಥಿಗಳನ್ನ ಸ್ವಾಗತಿಸಿದರು,ತಾಲೂಕ ಜ್ಞಾನ ವಿಕಾಸದ ಮೇಲ್ವಿಚಾರಕಿ ಶೋಭಾ ಹೋಳಿ ವಂದಿಸಿದರು ,