ಮೋದಿ ಮನ್ ಕಿ ಬಾತ್ ನಲ್ಲಿ ಕಲಬುರಗಿ ತೊಗರಿಗೆ ಶ್ಲಾಘನೆ ರೈತ ರಿಗೆ ವರದಾನ : ಡಾ ಉಮೇಶ್ ಜಾಧವ್
ಮೋದಿ ಮನ್ ಕಿ ಬಾತ್ ನಲ್ಲಿ ಕಲಬುರಗಿ ತೊಗರಿಗೆ ಶ್ಲಾಘನೆ ರೈತ ರಿಗೆ ವರದಾನ : ಡಾ ಉಮೇಶ್ ಜಾಧವ್
ಕಲಬುರಗಿ : ಏಷ್ಯಾದ ತೊಗರಿಯ ಕಣಜ ಎಂದೇ ಖ್ಯಾತಿ ಪಡೆದ ಕಲಬುರ್ಗಿಯ ತೊಗರಿಯ ಕುರಿತು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಆಕಾಶವಾಣಿಯ ಮನ್ ಕಿ ಬಾತ್ ನಲ್ಲಿ ಪ್ರಸ್ತಾಪಿಸಿ ರೈತರ ತೊಗರಿಗೆ ವಿಶ್ವಖ್ಯಾತಿಯನ್ನು ತಂದಿಕೊಟ್ಟಿದ್ದಾರೆ ಇದು ರೈತರ ಪಾಲಿಗೆ ವರದಾನವಾಗಲಿದೆ ಎಂದು ಮಾಜಿ ಲೋಕಸಭಾ ಸದಸ್ಯರಾದ ಡಾ. ಉಮೇಶ್ ಜಾಧವ್ ತಿಳಿಸಿದ್ದಾರೆ
ಪ್ರಧಾನ ಮಂತ್ರಿ ಮೋದಿಯವರುಅ. 25ರಂದು ಭಾನುವಾರ ಆಕಾಶವಾಣಿಯ ಮಾಸಿಕ ಕಾರ್ಯಕ್ರಮ ಮನ್ ಕಿ ಬಾತ್ ನಲ್ಲಿ ಕಲ್ಯಾಣ ಕರ್ನಾಟಕದ ಹೆಮ್ಮೆಯ ತೊಗರಿಯ ಬೆಳೆಯ ಬಗ್ಗೆ ಅಂತರಾಷ್ಟ್ರೀಯ ಮನ್ನಣೆ ದೊರೆತಿರುವುದನ್ನು ಪ್ರಸ್ತಾಪಿಸಿ ಪ್ರಸ್ತುತ ಕಲಬುರಗಿಯ ತೊಗರಿಯ ಬಗ್ಗೆ ಜಗದಗಲ ಕುತೂಹಲ ಮೂಡಿಸಿದ್ದಾರೆ ಮತ್ತು ಕಲ್ಯಾಣ ಕರ್ನಾಟಕದ ತೊಗರಿ ರೈತರ ತೊಗರಿಗೆ ವಿಶ್ವ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗಲಿದೆ. ವೋಕಲ್ ಫಾರ್ ಲೋಕಲ್ ಎಂಬ ಮೋದಿಯವರ ಪರಿಕಲ್ಪನೆಯತೆ ಸ್ಥಳೀಯ ಉತ್ಪನ್ನ ತೊಗರಿ ಜಾಗತಿಕ ಮಾರುಕಟ್ಟೆಗೆ ತಲುಪಿದ ವಿಷಯ ಪ್ರಸ್ತಾಪಿಸಿ ಇದೀಗ ತೊಗರಿಯ ರೈತರಿಗೆ ಇನ್ನಷ್ಟು ಹೊಸ ಮಾರುಕಟ್ಟೆಗೆ ಅವಕಾಶ ತೆರೆದುಕೊಳ್ಳಲಿದೆ. ಕಲಬುರಗಿಯ ತೊಗರಿ ಮಾಲ್ದಿವ್ಸ್ ಗೆ ರಫ್ತಾಗುತ್ತಿದ್ದು

