ಶಿಕ್ಷಕ ವೃತ್ತಿ ಪವಿತ್ರವಾದದ್ದು :ಮತ್ತಿಮಡು

ಶಿಕ್ಷಕ ವೃತ್ತಿ ಪವಿತ್ರವಾದದ್ದು :ಮತ್ತಿಮಡು

ಶಿಕ್ಷಕ ವೃತ್ತಿ ಪವಿತ್ರವಾದದ್ದು :ಮತ್ತಿಮಡು 

ಡೊoಗರಗಾoವ: ಶಿಕ್ಷಕ ವೃತ್ತಿಯು ಜಗತ್ತಿನ ಅತ್ಯಂತ ಗೌರವಾನ್ವಿತ ಮತ್ತು ಪವಿತ್ರವಾದ ವೃತ್ತಿಗಳಲ್ಲಿ ಒಂದಾಗಿದೆ. ಶಿಕ್ಷಕರು ಮಕ್ಕಳಿಗೆ ಕೇವಲ ಅಕ್ಷರ ಜ್ಞಾನವನ್ನು ನೀಡುವುದಷ್ಟೇ ಅಲ್ಲದೆ, ಅವರ ಜೀವನಕ್ಕೆ ಸರಿಯಾದ ದಿಕ್ಕನ್ನು ತೋರಿಸುವ ಮಾರ್ಗದರ್ಶಕರಾಗಿರುತ್ತಾರೆ. ಒಬ್ಬ ಉತ್ತಮ ಶಿಕ್ಷಕನು ವಿದ್ಯಾರ್ಥಿಯ ಭವಿಷ್ಯವನ್ನು ರೂಪಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತಾನೆ ಎಂದು ಶಾಸಕ ಬಸವರಾಜ ಮತ್ತಿಮಡು ಹೇಳಿದರು.

ಡೊಂಗರಗಾoವ ಸರ್ಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡ ಅಭಿನಂದನ ಸಮಾರಂಭ ಉದ್ಘಾಟಿಸಿ ಮಾತನಾಡಿ ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಜ್ಞಾನ, ಶಿಸ್ತು, ಪ್ರಾಮಾಣಿಕತೆ, ಸಮಯಪ್ರಜ್ಞೆ, ಸಹಾನುಭೂತಿ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸುತ್ತಾರೆ. ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯನ್ನು ಗುರುತಿಸಿ, ಅದನ್ನು ಅಭಿವೃದ್ಧಿಪಡಿಸಲು ಪ್ರೋತ್ಸಾಹಿಸುತ್ತಾರೆ. ಜೀವನದಲ್ಲಿ ಎದುರಾಗುವ ಕಷ್ಟಗಳನ್ನು ಧೈರ್ಯದಿಂದ ಎದುರಿಸುವ ಆತ್ಮವಿಶ್ವಾಸವನ್ನು ವಿದ್ಯಾರ್ಥಿಗಳಲ್ಲಿ ಮೂಡಿಸುತ್ತಾರೆ ಎಂದರು 

ಮುಖ್ಯ ಅತಿಥಿಗಳಾದ ಅಪ್ಪಾರಾವ ಅಕ್ಕೋಣೆ ಮಾತನಾಡಿ ಒಬ್ಬ ವೈದ್ಯನು ರೋಗಿಯ ದೇಹವನ್ನು ಗುಣಪಡಿಸುತ್ತಾನೆ, ಒಬ್ಬ ಇಂಜಿನಿಯರ್ ಕಟ್ಟಡಗಳನ್ನು ನಿರ್ಮಿಸುತ್ತಾನೆ. ಆದರೆ ಶಿಕ್ಷಕನು ವಿದ್ಯಾರ್ಥಿಗಳ ವ್ಯಕ್ತಿತ್ವ ಮತ್ತು ಭವಿಷ್ಯವನ್ನು ನಿರ್ಮಿಸುತ್ತಾನೆ. ಆದ್ದರಿಂದ ಶಿಕ್ಷಕರ ಸೇವೆ ಸಮಾಜದ ಅಭಿವೃದ್ಧಿಗೆ ಅತ್ಯಂತ ಅಗತ್ಯವಾಗಿದೆ.

ಶಿಕ್ಷಕರು ತಮ್ಮ ಜ್ಞಾನವನ್ನು ಮುಂದಿನ ಪೀಳಿಗೆಗೆ ಹಂಚಿಕೊಳ್ಳುತ್ತಾರೆ. ಅವರ ಬೋಧನೆಯಿಂದ ವಿದ್ಯಾರ್ಥಿಗಳು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿ ದೇಶದ ಅಭಿವೃದ್ಧಿಗೆ ಕೊಡುಗೆ ನೀಡುತ್ತಾರೆ. ವಿಜ್ಞಾನಿಗಳು, ವೈದ್ಯರು, ಇಂಜಿನಿಯರ್‌ಗಳು, ನ್ಯಾಯಾಧೀಶರು, ಅಧಿಕಾರಿಗಳು, ಉದ್ಯಮಿಗಳು ಮತ್ತು ಅನೇಕ ಮಹಾನ್ ವ್ಯಕ್ತಿಗಳ ಯಶಸ್ಸಿನ ಹಿಂದೆ ಶಿಕ್ಷಕರ ಮಾರ್ಗದರ್ಶನವಿರುತ್ತದೆ ಎಂದರು.

ಪ್ರಾಧ್ಯಾಪಕ ಡಾ. ಶರಣಬಸಪ್ಪ ವಡ್ಡನಕೇರಿ ಮಾತನಾಡಿ ಶಿಕ್ಷಕರು ವಿದ್ಯಾರ್ಥಿಗಳಿಗೆ ಜ್ಞಾನದ ಬೆಳಕನ್ನು ನೀಡುವ ದೀಪದಂತಿದ್ದಾನರೆ. ತಾನು ಬೆಳಗುತ್ತಾ ಇತರರ ಜೀವನವನ್ನು ಬೆಳಗಿಸುವುದು ಶಿಕ್ಷಕರ ವಿಶೇಷತೆ. ಆದ್ದರಿಂದ ಶಿಕ್ಷಕರನ್ನು ಸಮಾಜದಲ್ಲಿ ಗೌರವದಿಂದ ಕಾಣಲಾಗುತ್ತದೆ.

ಇಂದಿನ ಆಧುನಿಕ ಯುಗದಲ್ಲಿ ಶಿಕ್ಷಕರ ಜವಾಬ್ದಾರಿ ಇನ್ನಷ್ಟು ಹೆಚ್ಚಾಗಿದೆ. ತಂತ್ರಜ್ಞಾನ ಮತ್ತು ಇಂಟರ್ನೆಟ್‌ನಿಂದ ವಿದ್ಯಾರ್ಥಿಗಳಿಗೆ ಅಪಾರ ಮಾಹಿತಿಯು ದೊರೆಯುತ್ತಿದ್ದರೂ, ಸರಿಯಾದ ಮತ್ತು ತಪ್ಪಾದ ಮಾಹಿತಿಯ ನಡುವಿನ ವ್ಯತ್ಯಾಸವನ್ನು ತಿಳಿಸಿ, ಉತ್ತಮ ಮಾರ್ಗವನ್ನು ತೋರಿಸುವುದು ಶಿಕ್ಷಕರ ಕರ್ತವ್ಯವಾಗಿದೆ ಎಂದರು.

ಶಾಲೆಯ ಮುಖ್ಯಗುರುಗಳಾದ ಸುನೀತಾ ಬಿರಾದಾರ ಅಧ್ಯಕ್ಷತೆ ವಹಿಸಿದ್ದರು ಸಂಗಪ್ಪ ಚಿಗ್ಗೋನ, ರಾಜಪ್ಪ ಕರಮಗಿ, ವಿಜಯಕುಮಾರ ವಡ್ಡನಕೇರಿ, ಸಿದ್ದಮಲ್ಲಪ್ಪ ಮುಗಳಿ,ಮಹೇಶ್ ಪಾಟೀಲ, ಅಮರನಾಥ ಪಾಟೀಲ್, ಚಂದ್ರಶೇಖರ ಗೋಳೆದ,ಸಂಜುಕುಮಾರ ಸಿಂಗೆ,ಕಾಶಿಬಾಯಿ ಹರಕಂಚಿ, ದಶರಥ ಸೇರಿದಂತೆ ಹಲವು ಗಣ್ಯರು ಉಷ್ಠಿತರಿದ್ದರು.

ಇದೆ ಸಂದರ್ಭದಲ್ಲಿ ಎಸ್ ಎಸ್ ಎಲ್ ಸಿ ಅಲ್ಲಿ ಅತೀ ಹೆಚ್ಚು ಅಂಕ ಪಡೆದ ಸಂಗಮೇಶ ತಂ. ವಿಜಯಕುಮಾರ, ರಿತೇಶ ತಂ. ಹಣಮಂತ, ದೇವಿಕಾ ತಂ. ವೀರಶೆಟ್ಟಿ, ಗೀತಾ ತಂ. ಶಂಕರ, ರಾಧಿಕಾ ತಂ. ಶಿವಕುಮಾರ, ಶಿವಾನಿ ತಂ. ಅಶೋಕ, ಶ್ವೇತಾ ತಂ. ವೀರಣ್ಣಾ, ನಾಗರಾಜ ತಂ. ಚಂದ್ರಕಾಂತ, ವೈಭವ ತಂ. ಅಶೋಕಕುಮಾರ ಸೇರಿದಂತೆ ಹಲವು ವಿದ್ಯರ್ಥಿಗಳಿಗೆ ನಗದು ಬಹುಮಾನ ನೀಡಿ ಅಭಿನoದಿಸಲಾಯಿತು.

ಶಿಕ್ಷಕರಾದ ರವಿ ಅವರು ನಿರೂಪಿಸಿದರೆ ಸುನೀತಾ ಬಿರಾದಾರ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು.