ರೈತ ವಿರೋಧಿ ಆದೇಶ ಹಿಂಪಡೆದು ಸಿದ್ದಸಿರಿ ಕಾರ್ಖಾನೆ ಪುನರರಾಂಭಿಸಲು, ಕೇಂದ್ರ ಸರಕಾರಕ್ಕೆ ಮೂಲನಿವಾಸಿ ಆಗ್ರಹ
ಕಬ್ಬು ಬೆಳೆಗಾರ ರೈತರ ಹಿತಕಾಪಾಡುವಂತೆ ಮೂಲನಿವಾಸಿ ಸಂಘಟನೆ ಪ್ರತಿಭಟನೆಯ ಮೂಲಕ ರಾಷ್ಟ್ರಪತಿಗೆ ಮನವಿ
ರೈತ ವಿರೋಧಿ ಆದೇಶ ಹಿಂಪಡೆದು ಸಿದ್ದಸಿರಿ ಕಾರ್ಖಾನೆ ಪುನರರಾಂಭಿಸಲು, ಕೇಂದ್ರ ಸರಕಾರಕ್ಕೆ ಮೂಲನಿವಾಸಿ ಆಗ್ರಹ
ಚಿಂಚೋಳಿ : ಕೇಂದ್ರ ಸರಕಾರ ಸಿದ್ಧಸಿರಿ ಸಕ್ಕರೆ ಮತ್ತು ಎಥಿನಾಲ್ ಪವರ ಕಾರ್ಖಾನೆಗೆ ಕಬ್ಬು ನುರಿಸಲು ಪ್ರಾರಂಭಿಸದಂತೆ ಹೊರಡಿಸಿರುವ ಆದೇಶವನ್ನು ಖಂಡಿಸಿ ಚಿಂಚೋಳಿ ಮೂಲನಿವಾಸಿ ಕಬ್ಬು ಬೆಳಗಾರರ ಸಂಘಟನೆ ಕಲಬುರಗಿ - ಚಿಂಚೋಳಿ ರಾಜ್ಯ ಹೆದ್ದಾರಿ ಮುಖ್ಯ ರಸ್ತೆ ತಡೆದು ಕಾರ್ಖಾನೆ ಎದುರುಗಡೆ ಪ್ರತಿಭಟನೆ ನಡೆಸಿತ್ತು.
ಬಳಿಕ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಪ್ರತಿಭಟನೆಕಾರರು, ಸರಕಾರ ಸಕ್ಕರೆ ಮತ್ತು ಎಥಿನಾಲ್ ಕಾರ್ಖಾನೆ ಪ್ರಾರಂಭಿಸಲು ಸರಕಾರ ಅನುಮತಿ ನೀಡಿ, ಕಬ್ಬು ನುರಿಸಿರುವುದಕ್ಕೆ ಕ್ರಮವಹಿಸಿರುವುದಕ್ಕೆ ಈ ಭಾಗದ ರೈತರಲ್ಲಿ ಸಂಭ್ರಮ ಮನೆ ಮಾಡಿತ್ತು. ಆದರೆ ಅನುಮತಿಸಿದ ಅದೇ ಕೇಂದ್ರ ಸರಕಾರ ಕಬ್ಬು ನುರಿಸಲು ಸ್ಥಗಿತ ಮಾಡುವಂತೆ ನೀಡಲಾಗಿರುವ ಆದೇಶದ ಸುದ್ದಿ ಕೇಳಿ ಕಬ್ಬು ಬೆಳೆಗಾರ ರೈತರು ಆಂತಕಕ್ಕೆ ಒಳಗಾಗುವಂತೆ ಮಾಡಿದೆ. ಸರಕಾರ ರೈತರ ಬದುಕಿನ ಜೊತೆಗೆ ಚೆಲ್ಲಾಟ ಆಡುತ್ತಿದ್ದಾರೆಂಬುವುದು ಹೊರಡಿಸಿದ ಆದೇಶದಿಂದ ಸ್ಪಷ್ಟವಾಗಿ ತಿಳಿಯುತ್ತಿದೆ. ಸಿದ್ದಸಿರಿ ಕಾರ್ಖಾನೆಗೆ ನಂಬಿಕೊಂಡು ಸಾವಿರಾರು ಎಕರೆ ಬೆಳೆದಿರುವ ರೈತರ ಕಬ್ಬು ಕಟ್ಟಾವು ಹಂತಕ್ಕೆ ಬಂದು ನಿಂತಿದೆ. ಬೆಳೆದಿರುವ ಕಬ್ಬು ಎಲ್ಲಿಗೆ ಸಾಗಿಸಬೇಕೆಂದು ದಿಕ್ಕು ತೋಚದೆ ಮಾನಸಿಕ ಖಿನ್ನತೆಗೆ ಒಳಗಾಗುವಂತೆ ಮತ್ತು ಸಂಕಷ್ಟದಲ್ಲಿ ಸಿಲುಕುವಂತಹ ಆದೇಶ ಕೇಂದ್ರ ಬಿಜೆಪಿ ಸರಕಾರ ಹೊರಹಾಕಿದೆ.
ಏಕಾಏಕಿ ಕೇಂದ್ರ ಬಿಜೆಪಿ ಸರಕಾರ ನೀಡಿರುವ ಆದೇಶದ ಹಿನ್ನಲೆಯಲ್ಲಿ ರೈತರ ಬದುಕು ಮತ್ತು ಆರ್ಥಿಕ ಪರಿಸ್ಥಿತಿಗಳು ಸಂಕಷ್ಟದ ಪರಿಸ್ಥಿತಿಯಾಗಿ ನಿರ್ಮಾಣವಾಗಿದೆ. ಈಗಾಗಲೇ ಮುಂಗಾರು ಬೆಳೆಗಳು ಕಳೆದುಕೊಂಡು ಬರಗಾಲದ ಛಾಯೆ ಎದುರುಸುತ್ತಿದ್ದಾರೆ ರೈತರು. ಇಂತಹ ಪರಿಸ್ಥಿತಿಯಲ್ಲೂ ಕೇಂದ್ರ ಬಿಜೆಪಿ ಸರಕಾರ ರೈತರ ಹೊಟ್ಟೆಯ ಮೇಲೆ ಬರೆ ಬೀಳುವಂತಹ ಆದೇಶ ಹೊರಹಾಕಿದ್ದು ಖಂಡನಿಯ ಎಂದು ಪ್ರತಿಭಟನೆಕಾರರು ಸರಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.
ಕೇಂದ್ರ ಸರಕಾರ ಸಿದ್ದಸಿರಿ ಎಥಿನಾಲ್ ಕಾರ್ಖಾನೆಗೆ ಪುನಹ ಪ್ರಾರಂಭಕ್ಕೆ ಅನುಮತಿಸಲು ಕ್ರಮಕೈಗೊಳಬೇಕು. ರೈತರ ಕಬ್ಬು ನುರಿಸುವಂತೆ ಮತ್ತು ಕಬ್ಬು ಖರೀದಿಗೆ ಕಾರ್ಖಾನೆಗೆ ಪುನಹಃ ಆದೇಶಿಸಲು ಕ್ರಮವಹಿಸಬೇಕು. ರೈತರು ಮಧ್ಯವರ್ತಿ ದಲ್ಲಾಳಿಗಳ ಮೊರೆ ಹೋಗುವ ಪರಿಸ್ಥಿತಿ ಉಂಟಾಗದಂತೆ ಆಡಳಿತ ಕ್ರಮವಹಿಸಬೇಕು. ಬೆಳೆದಿರುವ ರೈತರ ಪ್ರತಿ ಟನ್ ಕಬ್ಬಿಗೆ 6500 ಬೆಲೆ ನಿಗಪಡಿಸಿ ಮಾರಾಟ ಮಾಡಲು ಅನುಕೂಲವಾಗುವಂತೆ ಅಗತ್ಯ ಕ್ರಮಗಳು ಕೇಂದ್ರ ಮತ್ತು ರಾಜ್ಯ ಸರಕಾರಗಳು ಕೈಗೊಳಬೇಕು. ಕಟ್ಟಾವು ಮಾಡಿದ ಕಬ್ಬು ಸಾಗಿಸಲು ಮತ್ತು ಕಬ್ಬು ಖರೀದಿಯ ಹಣ ಅವಧಿಯೊಳಗೆ ರೈತರ ಖಾತೆಗಳಿಗೆ ಜಮೆ ಆಗುವಂತೆ ಜಿಲ್ಲಾಡಳಿತ ಸೂಕ್ತ ಕ್ರಮವಹಿಸಬೇಕೆನ್ನುವ ಬೇಡಿಕೆಗಳ ಮನವಿ ಪತ್ರವನ್ನು ತಹಸೀಲ್ದಾರರ ಮೂಲಕ ರಾಷ್ಟ್ರಪತಿಗಳಿಗೆ ಸಲ್ಲಿಸಿದರು.
ಪ್ರತಿಭಟನೆಯ ನೇತೃತ್ವವನ್ನು ಸಂಘಟನೆಯ ಹೋರಾಟಗಾರ ಮಾರುತಿ ಗಂಜಗಿರಿ ವಹಿಸಿದರು.
ಈ ಸಂದರ್ಭದಲ್ಲಿ ಸುಧಾಕರ್ ಪಾಟೀಲ್ ಕಲ್ಲೂರ್, ಯುವ ಹೋರಾಟಗಾರ ಭಾಗ್ಯವಂತ ಶಾರದಾ, ಮೋಹನ್ ಐನಾಪೂರ್, ಲಾಲಪ್ಪ ಜ್ಯೋತಿ, ರಂಗಣ್ಣ ಪೂಜಾರಿ, ಅಮರನಾಥ ಹೂವಿನಭಾವಿ, ಮಹೇಶ ಕುಸರಂಪಳ್ಳಿ, ರವಿಕುಮಾರ ರುಸ್ತಂಪೂರ್ ಸೇರಿದಂತೆ ರೈತರು, ಕಬ್ಬು ಬೆಳೆಗಾರರು ಇದ್ದರು.

