ಹೇರೂರ ರಂಗ ಪ್ರಶಸ್ತಿಗೆ ಮಂಡ್ಯರಮೇಶ ಆಯ್ಕೆ
ಹೇರೂರ ರಂಗ ಪ್ರಶಸ್ತಿಗೆ ಮಂಡ್ಯರಮೇಶ ಆಯ್ಕೆ
ಕಲಬುರಗಿ : ಶತಮಾನ ದಾಟಿದ ಶೈಕ್ಷಣಿಕ ಸಂಸ್ಥೆಯಾದ ನೂತನ ವಿದ್ಯಾಲಯ ಸಂಚಾಲಿತ
ದತ್ತಾತ್ರೇಯ ಹೇರೂರ ಟ್ರಸ್ಟ್ ಕೊಡಮಾಡುವ ಕಲಬುರಗಿಯ ಕನ್ನಡದ ಮಾಸ್ತರ ಎಂದೇ ಖ್ಯಾತರಾದ ದತ್ತಾತ್ರೇಯ ಹೇರೂರ ಅವರ ಸ್ಮರಣಾರ್ಥ ಹೇರೂರ ರಂಗ ಪ್ರಶಸ್ತಿಗೆ ಮೈಸೂರಿನ ನಟನಾ ಸಂಸ್ಥೆಯ ರೂವಾರಿ ನಟ ಮಂಡ್ಯ ರಮೇಶ ಆಯ್ಕೆಯಾಗಿದ್ದಾರೆ ಎಂದು ಹೇರೂರ ರಂಗ ಪ್ರಶಸ್ತಿ ಸಂಚಾಲಕ ಪ್ರಭಾಕರ ಜೋಶಿ ಸೇಡಂ ತಿಳಿಸಿದ್ದಾರೆ.
ನೂತನ ವಿದ್ಯಾಲಯ ಸಂಸ್ಥೆ ಅಧ್ಯಕ್ಷರಾದ ಡಾ.ಗೌತಮ ಜಹಾಗೀದಾರ ಅವರ ಅಧ್ಯಕ್ಷೆಯಲ್ಲಿ ಜರುಗಿದ ಪ್ರಶಸ್ತಿ ಆಯ್ಕೆ ಸಮಿತಿ ಸಭೆಯಲ್ಲಿ ಮಂಡ್ಯ ರಮೇಶ ಅವರಿಗೆ ಹೇರೂರು ರಂಗ ಪ್ರಶಸ್ತಿ ನೀಡಲು ನಿರ್ಧರಿಸಲಾಯಿತು.
ಸಭೆಯಲ್ಲಿ ಅಧ್ಯಕ್ಷರಾದ , ಡಾ.ಗೌತಮ ಜಹಾಗೀರದಾರ, ಹಿರಿಯರಾದ ಶ್ರೀಕಾಂತ ಕುಲಕರ್ಣಿ, ದತ್ತಿದಾನಿ ಡಾ.ಸುರೇಶ ಹೇರೂರ, ಪ್ರಶಸ್ತಿ ಆಯ್ಕೆ ಸಮಿತಿ ನಿಕಟಪೂರ್ವ ಸಂಚಾಲಕ ಪ್ರೊ.ಪ್ರಭಾಕರ ಸಾತಖೇಡ, ಉಪಸ್ಥಿತರಿದ್ದರು.
ಡಿಸೆಂಬರ ತಿಂಗಳ ಕೊನೆಯ ವಾರದಲ್ಲಿ ಹೇರೂರ ರಂಗ ಪ್ರಶಸ್ತಿ ಪ್ರದಾನ ಮಾಡಲಾಗುವುದೆಂದು ಪ್ರಭಾಕರ ಜೋಶಿ ತಿಳಿಸಿದ್ದಾರೆ.

