ಅಗತ್ಯ ವಸ್ತುಗಳ ಅತಿಯಾದ ಬೆಲೆ ಏರಿಕೆ: ನರೇಗಲದಲ್ಲಿ ಕಾಂಗ್ರೇಸ್ ಸರ್ಕಾರದ ವಿರುದ್ಧ ಬಿಜೆಪಿ ಯುವ ಮುಖಂಡರಾದ ಬಸವರಾಜ ವಂಕಲಕುಂಟಿ ಆಕ್ರೋಶ ವ್ಯಕ್ತಪಡಿಸಿದರು
"ಅಗತ್ಯ ವಸ್ತುಗಳ ಅತಿಯಾದ ಬೆಲೆ ಏರಿಕೆ: ನರೇಗಲದಲ್ಲಿ ಕಾಂಗ್ರೇಸ್ ಸರ್ಕಾರದ ವಿರುದ್ಧ ಬಿಜೆಪಿ ಯುವ ಮುಖಂಡರಾದ ಬಸವರಾಜ ವಂಕಲಕುಂಟಿ ಆಕ್ರೋಶ ವ್ಯಕ್ತಪಡಿಸಿದರು
ನರೇಗಲ (ಗದಗ):
ರಾಜ್ಯದಲ್ಲಿ ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ಹಾಗೂ ವಿವಿಧ ಕರ-ಶುಲ್ಕಗಳನ್ನು ನಿರಂತರವಾಗಿ ಹೆಚ್ಚಿಸುತ್ತಿರುವ ಕಾಂಗ್ರೆಸ್ ಸರ್ಕಾರದ ನೀತಿಯನ್ನು ಖಂಡಿಸಿ, ಗಜೇಂದ್ರಗಡ-ರೋಣ ತಾಲೂಕು ವ್ಯಾಪ್ತಿಯ ನರೇಗಲ ಪಟ್ಟಣದಲ್ಲಿ ಬಿಜೆಪಿ ಯುವ ಮುಖಂಡರಾದ ಬಸವರಾಜ ವಂಕಲಕುಂಟಿ ರವರು ತೀವ್ರ ಆಕ್ರೋಶ ವ್ಯಕ್ತಪಡಿಸಿ ಪತ್ರಿಕಾ ಹೇಳಿಕೆ ನೀಡಿದ್ದಾರೆ.
ನಿರಂತರ ಬೆಲೆ ಏರಿಕೆಯಿಂದ ಸಾಲು ಸಾಲು ಸಂಕಷ್ಟ:
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಸವರಾಜ ವಂಕಲಕುಂಟಿ ರವರು, "ರಾಜ್ಯ ಸರ್ಕಾರವು ದಿನಬಳಕೆಯ ವಸ್ತುಗಳಾದ ಹಾಲು, ಮೋಸರು, ಬಸ್ ಟಿಕೆಟ್ ದರ, ಇಂಧನ (ಪೆಟ್ರೋಲ್-ಡೀಸೆಲ್), ವಿದ್ಯುತ್ ದರ, ನೋಂದಣಿ ಶುಲ್ಕ ಹಾಗೂ ತರಕಾರಿ/ದವಸ ಧಾನ್ಯಗಳ ಬೆಲೆ ಏರಿಕೆಗೆ ಪರೋಕ್ಷವಾಗಿ ಕಾರಣವಾಗಿದೆ. ಇದರಿಂದಾಗಿ ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳ ಜೀವನ ನಿರ್ವಹಣೆ ಅತ್ಯಂತ ದುಸ್ತರವಾಗಿದೆ" ಗ್ಯಾರಂಟಿ ಯೋಜನೆಗಳನ್ನು ನೀಡುವುದಾಗಿ ಹೇಳಿ ಅಧಿಕಾರಕ್ಕೆ ಬಂದ ಸರ್ಕಾರ, ಈಗ ಯೋಜನೆಗಳ ವೆಚ್ಚವನ್ನು ಭರಿಸಲು ಸಾರ್ವಜನಿಕರ ಮೇಲೆ ಬೆಲೆ ಏರಿಕೆಯ ಬಾರ ಹೇರುತ್ತಿದೆ. ಒಂದು ಕೈಯಲ್ಲಿ ಕೊಟ್ಟು ಇನ್ನೊಂದು ಕೈಯಲ್ಲಿ ಕಸಿದುಕೊಳ್ಳುವ ರಾಜಕೀಯ ತಂತ್ರವನ್ನು ಸರ್ಕಾರ ಮಾಡುತ್ತಿದೆ,
ರೈತರು ಮತ್ತು ಯುವಕರ ಸಂಕಷ್ಟ: ರೈತರಿಗೆ ಸೂಕ್ತ ಬೆಂಬಲ ಬೆಲೆ ಸಿಗುತ್ತಿಲ್ಲ, ಗೊಬ್ಬರ ಹಾಗೂ ಕೃಷಿ ಪರಿಕರಗಳ ಬೆಲೆಯೂ ಗಗನಕ್ಕೇರಿದೆ. ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸುವಲ್ಲಿಯೂ ಸರ್ಕಾರ ವಿಫಲವಾಗಿದೆ. ಪಟ್ಟಣ ಹಾಗೂ ಗ್ರಾಮ ಮಟ್ಟದಲ್ಲಿ ವ್ಯಾಪಾರಸ್ಥರು ಮತ್ತು ಕೂಲಿ ಕಾರ್ಮಿಕರು ಬೆಲೆ ಏರಿಕೆಯಿಂದ ತತ್ತರಿಸಿಹೋಗಿದ್ದಾರೆ "ಹಾಲಿನ ದರ ಹೆಚ್ಚಳದಿಂದ ಬರುವ ಹಣ ನೇರವಾಗಿ ರೈತರಿಗೆ ಸಿಗುತ್ತದೆ ಎಂದು ಸರ್ಕಾರ ಹೇಳುತ್ತಿರುವುದು ಸಂಪೂರ್ಣ ಸುಳ್ಳು" ಎಂದರು
ಗ್ರಾಹಕರಿಗೆ ಹೊರೆ: ರೈತರ ಹಿತರಕ್ಷಣೆಯ ನೆಪ ಹೇಳಿ ಸಾಮಾನ್ಯ ಹಾಗೂ ಬಡ ಗ್ರಾಹಕರ ಮೇಲೆ ಹೆಚ್ಚಿನ ಬೆಲೆ ಏರಿಕೆಯ ಹೊರೆ ಹೊರಿಸಲಾಗುತ್ತಿದೆ. ಸರ್ಕಾರಕ್ಕೆ ಆಗ್ರಹ: ರೈತರಿಗೆ ನಿಜವಾದ ಅನುಕೂಲ ಕಲ್ಪಿಸಬೇಕಿದ್ದರೆ ನೀಡಬೇಕಾದ ಬಾಕಿ ಪ್ರೋತ್ಸಾಹ ಧನವನ್ನು ತಕ್ಷಣ ಬಿಡುಗಡೆ ಮಾಡಬೇಕು. ಗ್ರಾಹಕರ ಜೇಬಿಗೆ ಕನ್ನ ಹಾಕುವ ದರ ಏರಿಕೆಯ ನಿರ್ಧಾರವನ್ನು ಸರ್ಕಾರ ಕೂಡಲೇ ಹಿಂಪಡೆಯಬೇಕು
ಸರ್ಕಾರದ ವಿರುದ್ಧ ಎಚ್ಚರಿಕೆ: ರಾಜ್ಯ ಸರ್ಕಾರವು ತಕ್ಷಣವೇ ಹೆಚ್ಚಿಸಿರುವ ದರಗಳನ್ನು ವಾಪಸ್ ಪಡೆಯಬೇಕು. ಸಾರ್ವಜನಿಕರ ಮೇಲಿನ ಆರ್ಥಿಕ ಹೊರೆಯನ್ನು ಕಡಿಮೆ ಮಾಡದಿದ್ದರೆ, ಮುಂಬರುವ ದಿನಗಳಲ್ಲಿ ನರೇಗಲ ಹಾಗೂ ರೋಣ ಕ್ಷೇತ್ರಾದ್ಯಂತ ಸಾರ್ವಜನಿಕರ ಸಹಯೋಗದೊಂದಿಗೆ ಬೃಹತ್ ಹೋರಾಟ ಮತ್ತು ಬೀದಿಗಿಳಿದು ಪ್ರತಿಭಟನೆ ನಡೆಸಲಾಗುವುದು ಎಂದು ಬಸವರಾಜ ವಂಕಲಕುಂಟಿ ಅವರು ಎಚ್ಚರಿಕೆ ನೀಡಿದರು.
ಜಿಲ್ಲಾ ವರದಿಗಾರರು ಶ್ರೀ ಹುಚ್ಚೀರಪ್ಪ ವೀರಪ್ಪ ಈಟಿ ಕಲ್ಯಾಣ ಕಹಳೆ ಗದಗ

