ಯುವಜನತೆಯ ಸಹಭಾಗಿತ್ವದಲ್ಲೇ ಭವಿಷ್ಯದ ಶಿಕ್ಷಣ ನಿರ್ಮಾಣ: ಡಾ ಸ್ವಾವಿತ್ರಿ ಜಿ.ಬೀಲಗಿ

ಯುವಜನತೆಯ ಸಹಭಾಗಿತ್ವದಲ್ಲೇ ಭವಿಷ್ಯದ ಶಿಕ್ಷಣ ನಿರ್ಮಾಣ: ಡಾ ಸ್ವಾವಿತ್ರಿ ಜಿ.ಬೀಲಗಿ

ಯುವಜನತೆಯ ಸಹಭಾಗಿತ್ವದಿಂದಲೇ ಭವಿಷ್ಯದ ಶಿಕ್ಷಣ ನಿರ್ಮಾಣ: ಡಾ. ಸಾವಿತ್ರಿ ಜಿ. ಬೀಲಗಿ

ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯದ ಶಿಕ್ಷಣ ವಿಭಾಗದ ವತಿಯಿಂದ ನವೆಂಬರ್ 11, 2026 ರಂದು ಮಹಾವಿದ್ಯಾಲಯದ ಸಭಾಂಗಣದಲ್ಲಿ ರಾಷ್ಟ್ರೀಯ ಶಿಕ್ಷಣ ದಿನಾಚರಣೆ-2026 ಯನ್ನು ಆಚರಿಸಲಾಯಿತು. ಕಾರ್ಯಕ್ರಮದ ಘೋಷವಾಕ್ಯ “ಶಿಕ್ಷಣದ ಸಹ-ಸೃಷ್ಟಿಯಲ್ಲಿ ಯುವಜನತೆಯ ಶಕ್ತಿ” (The Power of Youth in Co-Creating Education) ಎಂಬುದಾಗಿತ್ತು.

ಕಾರ್ಯಕ್ರಮವನ್ನು ವೇದಿಕೆಯ ಮೇಲಿರುವ ಗಣ್ಯರು ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾದ ಡಾ. ಸಾವಿತ್ರಿ ಜಿ. ಬೀಲಗಿ ಅವರು ಮಾತನಾಡಿ, ಭಾರತದ ಮೊದಲ ಶಿಕ್ಷಣ ಸಚಿವರಾದ ಮೌಲಾನಾ ಅಬುಲ್ ಕಲಾಂ ಆಜಾದ್ ಅವರ ಶಿಕ್ಷಣ ಕ್ಷೇತ್ರದ ಕೊಡುಗೆ ಹಾಗೂ ಶಿಕ್ಷಣದ ಮಹತ್ವವನ್ನು ವಿವರಿಸಿದರು. ನಂತರ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ, ಶಿಕ್ಷಣದ ಸಹ-ಸೃಷ್ಟಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಿ, ಪ್ರಾಯೋಗಿಕ ಉದಾಹರಣೆಗಳ ಮೂಲಕ ವಿಷಯವನ್ನು ಮನವರಿಕೆ ಮಾಡಿಕೊಟ್ಟರು.

“ವಿದ್ಯಾರ್ಥಿಗಳು ಸಾರಿಗೆ ಬಸ್ಸುಗಳಲ್ಲ, ಅವರು ನಿರಂತರವಾಗಿ ಕಲಿಯುವ ಕಲಿಕಾರ್ಥಿಗಳು” ಎಂದು ಹೇಳಿದ ಅವರು, ಶಿಕ್ಷಣವೆಂಬುದು ಸಂಕುಚಿತವಾದುದಲ್ಲ, ಅದು ವಿಶಾಲವಾದದ್ದು ಎಂದು ತಿಳಿಸಿದರು. ಇಂದಿನ ಯುವಜನತೆ ಡಿಜಿಟಲ್ ಯುಗದಲ್ಲಿ ಬದುಕುತ್ತಿದ್ದು, ತಂತ್ರಜ್ಞಾನದ ಬಳಕೆ ಮತ್ತು ಅದರ ಅನ್ವಯದ ಬಗ್ಗೆ ಉತ್ತಮ ಅರಿವು ಹೊಂದಿದ್ದಾರೆ. ಶಿಕ್ಷಕರಿಗೂ ತಂತ್ರಜ್ಞಾನದ ಕುರಿತು ಅಪಾರ ಜ್ಞಾನವಿದ್ದು, ತಮ್ಮ ಜ್ಞಾನ ಮತ್ತು ಕೌಶಲಗಳನ್ನು ವಿದ್ಯಾರ್ಥಿಗಳಿಗೆ ನೀಡುತ್ತಿದ್ದಾರೆ. ಶಿಕ್ಷಕರು ಡಿಜಿಟಲ್ ವಿಷಯವಸ್ತುಗಳನ್ನು ಸೃಷ್ಟಿಸಿದರೆ, ವಿದ್ಯಾರ್ಥಿಗಳು ಅವುಗಳನ್ನು ಸಾಮಾಜಿಕ ಜಾಲತಾಣಗಳಾದ ಇನ್ಸ್ಟಾಗ್ರಾಂ ಮುಂತಾದ ವೇದಿಕೆಗಳ ಮೂಲಕ ಪ್ರಚಾರಗೊಳಿಸಿ ಆರ್ಥಿಕ ಅವಕಾಶಗಳನ್ನೂ ಸೃಷ್ಟಿಸಬಹುದು. ಈ ರೀತಿಯಾಗಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಒಟ್ಟಾರೆಯಾಗಿ ಜ್ಞಾನವನ್ನು ಸೃಷ್ಟಿಸಿ, ಹಂಚಿಕೊಳ್ಳುವುದೇ ಶಿಕ್ಷಣದ ಸಹ-ಸೃಷ್ಟಿಯಾಗಿದೆ ಎಂದು ವಿವರಿಸಿದರು.

ಇಂದಿನ ವಿದ್ಯಾರ್ಥಿಗಳು ಅನೇಕ ಕೌಶಲಾಧಾರಿತ ಕಾರ್ಯಕ್ರಮಗಳನ್ನು ನಿರೀಕ್ಷಿಸುತ್ತಿದ್ದು, ಶಿಕ್ಷಕರು ಕೂಡ ಹೊಸ ಸವಾಲುಗಳನ್ನು ಸ್ವೀಕರಿಸಿ ಕೌಶಲಾಧಾರಿತ ಶಿಕ್ಷಣವನ್ನು ಒದಗಿಸಬೇಕು. ವಿಶೇಷವಾಗಿ ಕೃತಕ ಬುದ್ಧಿಮತ್ತೆ (AI) ಮತ್ತು ಆಧುನಿಕ ತಂತ್ರಜ್ಞಾನದ ಯುಗದಲ್ಲಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ನಿರಂತರವಾಗಿ ಕಲಿಯುತ್ತಿರಬೇಕು. ವಿದ್ಯಾರ್ಥಿಗಳು ತರಗತಿಯಲ್ಲಿಯೇ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಆರಂಭಿಸಬೇಕು. ಶಿಕ್ಷಣದ ಮೂಲಕ ತಮ್ಮ ಜ್ಞಾನವನ್ನು ಸೂಕ್ತವಾಗಿ ಬಳಸಿಕೊಂಡು ಜೀವನವನ್ನು ರೂಪಿಸಿಕೊಳ್ಳಬೇಕೆಂದು ಎಂದು ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಪ್ರೊ. ರಾಜೇಂದ್ರ ಕೊಂಡ ಅವರು ಮಾತನಾಡಿ, “ಕಲಿಯುವ ಆಸಕ್ತಿ ಇದ್ದರೆ ಯಾವುದೇ ವಿಷಯವನ್ನಾದರೂ ಕಲಿಯಬಹುದು. ವಿದ್ಯಾರ್ಥಿಗಳು ಉನ್ನತ ಹಂತಕ್ಕೆ ತಲುಪಿದಾಗ ಮೊದಲು ಸಂತೋಷಪಡುವವರು ಅವರ ಶಿಕ್ಷಕರೇ ಆಗಿರುತ್ತಾರೆ” ಎಂದು ಹೇಳಿದರು. ಶಿಕ್ಷಣವು ವ್ಯಕ್ತಿಗೆ ಹಕ್ಕು, ಬೆಳಕು, ಅಭಿವೃದ್ಧಿ ಹಾಗೂ ಶಕ್ತಿಯನ್ನು ನೀಡುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಶಿಕ್ಷಣದ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು. ಮಹಿಳಾ ಶಿಕ್ಷಣಕ್ಕೆ ವಿಶೇಷ ಮಹತ್ವ ನೀಡಿದ ಶ್ರೀ.ಮಹಾದೇವಪ್ಪ ರಾಂಪೂರೆ ಅವರ ಮಹಿಳಾ ಶಿಕ್ಷಣದ ಕನಸು ಈ ಸಂಸ್ಥೆಯ ಮೂಲಕ ನನಸಾಗುತ್ತಿದೆ ಎಂದು ಅಭಿಪ್ರಾಯಪಟ್ಟರು. ದೇಶದಲ್ಲಿ ಸಾಕ್ಷರತೆಯ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಕೃತಕ ಬುದ್ಧಿಮತ್ತೆ ಮತ್ತು ತಂತ್ರಜ್ಞಾನದಿಂದ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಗಳು ಸಂಭವಿಸುತ್ತಿವೆ. ಈ ಬದಲಾವಣೆಗಳಿಗೆ ಅನುಗುಣವಾಗಿ ವಿದ್ಯಾರ್ಥಿಗಳು ಉತ್ತಮ ಶಿಕ್ಷಣವನ್ನು ಪಡೆದು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ಹೇಳಿದರು.

ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಗಳನ್ನು ಶಿಕ್ಷಣ ವಿಭಾಗದ ಕಾರ್ಯಕ್ರಮ ಸಂಯೋಜಕರಾದ ಡಾ. ನಾಗರತ್ನ ಎಸ್. ಅವರು ನೆರವೇರಿಸಿದರು. ಸ್ವಾಗತ ಭಾಷಣವನ್ನು ಕುಮಾರಿ ರೇಣುಕಾ ಬಿ.ಎ. I ಸೆಮಿಸ್ಟರ್ ವಿದ್ಯಾರ್ಥಿನಿ ಮಾಡಿದರು. ವಂದನಾರ್ಪಣೆಯನ್ನು ಬಿ.ಎ. ಸೆಮಿಸ್ಟರ್ ವಿದ್ಯಾರ್ಥಿನಿ ಕುಮಾರಿ ಹುಜೈಫಾ ಸಲ್ಲಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಅಂತಿಮ ವರ್ಷದ ಬಿ.ಎ. ವಿದ್ಯಾರ್ಥಿನಿ ಕುಮಾರಿ ಐಶ್ವರ್ಯ ನಿರ್ವಹಿಸಿದರು. 

ಈ ಸಂದರ್ಭದಲ್ಲಿ ಉಪನ್ಯಾಸಕರಾದ ಶ್ರೀಮತಿ ಶಿವಲೀಲಾ ಡಿ., ಶ್ರೀಮತಿ ಗೀತಾ ಪಾಟೀಲ, ಶ್ರೀಮತಿ ಶ್ವೇತಾ ಕೋಟೆ, ಡಾ. ಶ್ರೀದೇವಿ ಎಸ್, ಶ್ರೀಮತಿ. ಬಸಮ್ಮ, ಡಾ. ಮೌಸಿನಾ, ಡಾ. ಪ್ರೇಮಿಲಾ ತೋರಣ ಹಾಗೂ ಶ್ರೀಮತಿ ರೇಖಾ ಡಿ.ಟಿ. ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಒಟ್ಟು 39 ವಿದ್ಯಾರ್ಥಿನಿಯರು ಭಾಗವಹಿಸಿ ರಾಷ್ಟ್ರೀಯ ಶಿಕ್ಷಣ ದಿನಾಚರಣೆಯ ಆಶಯ ಹಾಗೂ ಶಿಕ್ಷಣದ ಸಹ-ಸೃಷ್ಟಿಯಲ್ಲಿ ಯುವಜನತೆಯ ಪಾತ್ರದ ಕುರಿತು ಅರಿವು ಪಡೆದುಕೊಂಡರು ಎಂದು ಮಹಾವಿದ್ಯಾಲಯದ ನ್ಯಾಕ್ ಸಂಯೋಜಕರಾದ ಡಾ. ಮೋಹನರಾಜ ಪತ್ತಾರ ಅವರು ಪತ್ರಿಕಾ ಪ್ರಕಟಣೆಗಾಗಿ ತಿಳಿಸಿದ್ದಾರೆ.