ಆಳಂದದಲ್ಲಿ ಹಜರತ್ ಟಿಪ್ಪು ಸುಲ್ತಾನ್ ಜಯಂತಿ ಸಂಭ್ರಮ

ಆಳಂದದಲ್ಲಿ ಹಜರತ್ ಟಿಪ್ಪು ಸುಲ್ತಾನ್  ಜಯಂತಿ ಸಂಭ್ರಮ

ಆಳಂದದಲ್ಲಿ ಹಜರತ್ ಟಿಪ್ಪು ಸುಲ್ತಾನ್ ಜಯಂತಿ ಸಂಭ್ರಮ

ಆಳಂದ: ಭಾರತೀಯ ಇತಿಹಾಸದ ಶ್ರೇಷ್ಠ ಅರಸ, ಧೈರ್ಯಶಾಲಿ ಸ್ವಾತಂತ್ರ್ಯ ಹೋರಾಟಗಾರ ಹಾಗೂ ಸೈನಿಕ ರಾಕೆಟ್ ತಂತ್ರಜ್ಞಾನದ ಪ್ರವರ್ತಕರಾದ ಹಜರತ್ ಟಿಪ್ಪು ಸುಲ್ತಾನ್ (ರ.ಅ.) ಅವರ ಯೌಮೆ ವಿಲಾದತ್ (ಜಯಂತಿ) ಕಾರ್ಯಕ್ರಮವನ್ನು ನವೆಂಬರ್ 10, 2026ರಂದು ಕಲಬುರಗಿ ಜಿಲ್ಲೆಯ ಆಳಂದ ಪಟ್ಟಣದ ಮಟ್ಕಿ ರಸ್ತೆಯಲ್ಲಿರುವ ಹಜರತ್ ಟಿಪ್ಪು ಸುಲ್ತಾನ್ ವೃತ್ತದಲ್ಲಿ ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಟಿಪ್ಪು ಸುಲ್ತಾನ್ ಅವರ ಧೈರ್ಯ, ದೇಶಪ್ರೇಮ, ತ್ಯಾಗ ಹಾಗೂ ಭಾರತೀಯ ಇತಿಹಾಸಕ್ಕೆ ನೀಡಿದ ಮಹತ್ವದ ಕೊಡುಗೆಗಳನ್ನು ಸ್ಮರಿಸಿ ಗೌರವ ಸಲ್ಲಿಸಲಾಯಿತು. ಜೊತೆಗೆ ಸಮಾಜದಲ್ಲಿ ಏಕತೆ, ಶಾಂತಿ, ಸೌಹಾರ್ದತೆ ಮತ್ತು ಸಹೋದರತ್ವದ ಸಂದೇಶವನ್ನು ಸಾರಲಾಯಿತು.

ಕಾರ್ಯಕ್ರಮದಲ್ಲಿ ಆಲ್ ಇಂಡಿಯಾ ತಹ್ರೀಕ್-ಎ-ಖುದಾದಾದ್ ಕೆ.ಕೆ. ಪ್ರಾಂತೀಯ ಅಧ್ಯಕ್ಷ ಮೊಹಮ್ಮದ್ ರಫೀಕ್ ಮುಲ್ಲಾ, ಸೈಯದ್ ಜಾಕೀರ್, ಟಿಪ್ಪು ಸುಲ್ತಾನ್ ವೃತ್ತದ ಅಧ್ಯಕ್ಷ, ತಯ್ಯಬ್ ಅಲಿ ಟಿಎಂಸಿ ಸದಸ್ಯ, ಲತೀಫ್ ಮುರುಮ್ಕರ್, ವಕೀಲ ಕೆ.ಯು. ಇನಾಮದಾರ್, ದಸ್ತಗೀರ್ ಶೇಖ್, ಮಶಾಕ್ ಧಾಂಗೆ, ಸೈಯದ್ ಲಾಯಕ್, ಸುಭಾನ್ ಶೇಖ್, ಎಂ.ಡಿ. ರಫೀಕ್ ಕಿಂಗ್ ಹಾಗೂ ಹಾಶಿಮ್ ಜಮಾದಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.