ಬಸ್ ನಿರ್ವಾಹಕನ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹ
ಬಸ್ ನಿರ್ವಾಹಕನ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹ
ಶಹಪುರ : ಶಾಲಾ ಕಾಲೇಜಿನ ವಿದ್ಯಾರ್ಥಿಗಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಉದ್ಧಟತನ ತೋರಿದ ಶಹಪುರ ಬಸ್ ಘಟಕದ ನಿರ್ವಾಹಕನ ವಿರುದ್ಧ ಕೂಡಲೇ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ತಾಲೂಕು ಸಂಚಾಲಕ ಚಂದ್ರಕಾಂತ ಬಜೇರಿ ಆಗ್ರಹಿಸಿದ್ದಾರೆ.
ಶಹಪುರ,ಸಗರ,ಮಹಲ್ ರೋಜಾ ನಡುವೆ ದಿನನಿತ್ಯ ಸಂಚರಿಸುವ ಸಿಟಿ ಬಸ್ಸಿನ ನಿರ್ವಾಹಕನಾದ ಮುಸ್ತಫಾ ಎಂಬುವರ ಮೇಲೆ ಆರೋಪ ಕೇಳಿ ಬಂದಿದೆ,ಶುಕ್ರವಾರ ಮಧ್ಯಾಹ್ನ ಶಹಾಪುರ ಹೊಸ ಬಸ್ ನಿಲ್ದಾಣದಲ್ಲಿ ಈ ಘಟನೆ ಜರುಗಿದ್ದು,ವಿದ್ಯಾರ್ಥಿಗಳಿಗೆ
ಅವಾಚ್ಯ ಶಬ್ದಗಳಿಂದನಿಂದಿಸಿದ
ವಿಡಿಯೋ ತುಂಬಾ ವೈರಲ್ ಆಗಿದೆ,ಸಹ ಪ್ರಯಾಣಿಕರ ಎದುರೆ ಸಾರ್ವಜನಿಕ ಸ್ಥಳದಲ್ಲಿ ಅತ್ಯಂತ ಅಸಭ್ಯ ಹಾಗೂ ಅಸಹ್ಯಕರ ಶಬ್ದಗಳಿಂದ ನಿಂದಿಸಿ ಮಾನಸಿಕವಾಗಿ ಅಪಮಾನ ಮಾಡಿರುವುದು ವಿಡಿಯೋ ಒಂದರಲ್ಲಿ ಸೆರೆಯಾಗಿದೆ.
ಈ ವಿಷಯದ ಕುರಿತು ಮೇಲಾಧಿಕಾರಿಗಳಿಗೆ ವಿಚಾರಿಸಿದಾಗ ಸೂಕ್ತ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂಬ ಭರವಸೆ ನೀಡಿದ್ದಾರೆ, ಸಾರ್ವಜನಿಕ ಕ್ಷೇತ್ರದಲ್ಲಿ ಇದ್ದುಕೊಂಡು ಜವಾಬ್ದಾರಿ ಹುದ್ದೆಯಲ್ಲಿರುವ ನಿರ್ವಾಹಕ ಶಾಲಾ ಕಾಲೇಜಿನ ವಿದ್ಯಾರ್ಥಿಗಳೊಂದಿಗೆ ಈ ರೀತಿಯಾಗಿ ಅನುಚಿತವಾಗಿ ವರ್ತಿಸಿರುವುದು ಸರಿಯಲ್ಲ ಸಾರಿಗೆ ಇಲಾಖೆಯ ಮೇಲಾಧಿಕಾರಿಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಸದರಿ ನಿರ್ವಾಹಕನ ವಿರುದ್ಧ ಸೂಕ್ತ ಕಠಿಣ ಕಾನೂನು ಕ್ರಮ ಜರುಗಿಸಿ ಮುಂದೆ ಇಂಥ ಘಟನೆಗಳು ಮರುಕಳಿಸಿದಂತೆ ಎಚ್ಚರಿಕೆ ನೀಡಬೇಕೆಂದು ದಲಿತ ಮುಖಂಡ ಯ್ಯಾಳಪ್ಪ ದೇವಿಕೇರಿ ಹೇಳಿದರು.

