ಉತ್ತಮ ಜೀವನಕ್ಕೆ ಪುಸ್ತಕಗಳು ಪ್ರೇರಣೆ :ವಡ್ಡನಕೇರಿ

ಉತ್ತಮ ಜೀವನಕ್ಕೆ ಪುಸ್ತಕಗಳು ಪ್ರೇರಣೆ :ವಡ್ಡನಕೇರಿ

*ಉತ್ತಮ ಜೀವನಕ್ಕೆ ಪುಸ್ತಕಗಳು ಪ್ರೇರಣೆ :ವಡ್ಡನಕೇರಿ* 

ಕಲಬುರಗಿ :ಪುಸ್ತಕ ಓದುವುದರಿಂದ ಮನುಷ್ಯನ ಜೀವನ ಪರಿವರ್ತನೆಯಾಗುತ್ತದೆ. ಸರಳ ಜೀವನ, ಉನ್ನತ ಯೋಚನೆಗಳಿಗೆ ಪ್ರೇರಣೆಯಾಗುತ್ತವೆ' ಎಂದು ಪ್ರಾಧ್ಯಾಪಕ ಡಾ. ಶರಣಬಸಪ್ಪ ವಡ್ಡನಕೇರಿ ಹೇಳಿದರು.

ನಗರದ ಕೋಟನೂರ್ ಹತ್ತಿರವಿರುವ ಪ್ರಾಧ್ಯಾಪಕ ಡಾ. ನಾಗಪ್ಪ ಗೋಗಿ ಅವರ ಮನೆಯಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ಮನೆಗೋoದು ಗ್ರಂಥಾಲಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

'ಬೇರೆಯವರಿಗೆ ಯಾವುದೇ ಉಡುಗೊರೆಗಳನ್ನು ನೀಡದೆ, ಅವರಿಗೆ ಪುಸ್ತಕಗಳನ್ನು ನೀಡಿ, ಪುಸ್ತಕಗಳಿಂದ ಅವರಲ್ಲಿಯೂ ಜ್ಞಾನ ಬೆಳೆಯುತ್ತದೆ ಹಾಗೂ ನಿಮಗೆ ಒಂದು ಒಳ್ಳೆಯ ಕೆಲಸ ಮಾಡಿದ ಅನುಭವವಾಗುತ್ತದೆ'

ಪುಸ್ತಕಗಳಿಗೆ ಬಡವ, ಶ್ರೀಮಂತ ಎಂಬ ಭೇದಭಾವವಿಲ್ಲ. ಪುಸ್ತಕವನ್ನು ಪ್ರೀತಿಸಿ ಅದರಲ್ಲಿರುವ ವಿಷಯವನ್ನು ಸಮರ್ಪಕವಾಗಿ ಅರ್ಥಯಿಸಿಕೊಂಡಾಗ ಜಗತ್ತನ್ನು ಕಂಡ ನಾಯಕರಾಗುವುದರಲ್ಲಿಸಂಶಯವಿಲ್ಲ. ನಮ್ಮ ಜೀವನವನ್ನು ಅಭಿವೃದ್ಧಿ ಪಡಿಸುವುದರಲ್ಲಿ ಪುಸ್ತಕಗಳು ಮುಖ್ಯವಾಗುತ್ತವೆ. ಅದನ್ನು ಅರಿತುಕೊಂಡು ನಾವು ಪುಸ್ತಕದಲ್ಲಿನ ವಿಷಯ ಮನದಟ್ಟು ಮಾಡಿಕೊಂಡು ಓದುವಿನತ್ತ ಗಮನಹರಿಸಿದಾಗ ಯಶಸ್ಸು ಕಾಣಲು ಸಾಧ್ಯ ಎಂದರು.

ಕಾರ್ಯಕ್ರಮದಲ್ಲಿ ಡಾ. ಶೈಲಜಾ ಬಾಗೇವಾಡಿ ಮಾತನಾಡಿ, ಇಂದಿನ ಆಧುನಿಕ ಜಗತ್ತಿನಲ್ಲಿ ಸಾಮಾಜಿಕ ಜಾಲತಾಣ ಹಾಗೂ ವೈಜ್ಞಾನಿಕ ತಂತ್ರಜ್ಞಾನದ ಬಳಕೆಯಿಂದ ಪುಸ್ತಕಗಳ ಓದುಗರ ಸಂಖ್ಯೆ ದಿನದಿಂದ ದಿನಕ್ಕೆ ಕುಂಟಿತವಾಗುತ್ತದೆ. ಅದನ್ನು ಅರಿತುಕೊಂಡು ಪ್ರತಿಯೊಬ್ಬರು ತಮ್ಮ ವ್ಯಕ್ತಿತ್ವ ಮತ್ತು ಬುದ್ಧಿಮಟ್ಟ ಹೆಚ್ಚಿಸಿಕೊಂಡು ಸಮಾಜ ಗುರುತಿಸುವಂತ ವ್ಯಕ್ತಿಗಳಾಗಿ ಹೊರಹೊಮ್ಮಲು ಪುಸ್ತಕ ಮಹತ್ತರವಾದ ಪಾತ್ರವನ್ನು ವಹಿಸುತ್ತದೆ. ಆದ್ದರಿಂದ, ಪ್ರತಿಯೊಬ್ಬರು ಪುಸ್ತಕವನ್ನು ಓದುವ ಹವ್ಯಾಸವನ್ನು ಬಳಸಿಕೊಳ್ಳಬೇಕು ಎಂದರು. 

ಪುಸ್ತಕ ಪ್ರಾಧಿಕಾರದ ಸದಸ್ಯರಾದ ಬಿ. ಎಚ್.ನಿರಗುಡಿ ಮಾತನಾಡಿ, ''ಪುಸ್ತಕಗಳ ಮೂಲಕ ಮನುಕುಲದ ಸೇವೆ ಎಂಬ ಧ್ಯೇಯ ವಾಕ್ಯದೊಂದಿಗೆ ಕಳೆದ ವರ್ಷದಿಂದ ಪುಸ್ತಕ ಪ್ರಧಿಕಾರ ನಡೆಸುತ್ತಿರುವ ಮನೆಗೊಂದು ಗ್ರಂಥಾಲಯ ತುಂಬಾ ಯಶಸ್ಸು ಕಂಡಿದ್ದು ಡಾ. ನಾಗಪ್ಪ ಗೋಗಿ ಅವರು ತುಂಬಾ ಅಚ್ಚುಕಟ್ಟಾಗಿ ಗ್ರಂಥಾಲಯ ರೂಪಿಸಿದ್ದು ಅವರಿಗೆ ಪುಸ್ತಕ ಪ್ರಾಧಿಕಾರದಿಂದ ಅಭಿನಂದನಾ ಪತ್ರ ನೀಡಿ ಅಭಿನoದಿಸುತಿದ್ದದ್ದು ಹರ್ಷದಾಯಕ ಸಂಗತಿ ಎಂದರು.

ಕಾರ್ಯಕ್ರಮದಲ್ಲಿ ಜಾಗೃತಿ ಸಮಿತಿಯ ಸದಸ್ಯರಾದ ರೇವಣಸಿದ್ದಪ್ಪ ದುಕಾನ, ಶೋಭಾದೇವಿ ಚೆಕ್ಕಿ,ಡಾ. ನಾಗಪ್ಪ ಗೋಗಿ, ಮಹೇಶ ಗoವಾರ ಹಾಗೂ ಪೋದ್ದಾರ, ಕಾಶೀನಾಥ ಪಾಟೀಲ, ರೇಣುಕಾ ಗೋಗಿ, ಡಾ.ಶಾಮಲಾ ಸ್ವಾಮಿ , ಶ್ರೀಮತಿ ಶ್ರೀದೇವಿ ರಾಠೋಡ, ಡಾ. ಶ್ರೀನಿವಾಸ ಇದ್ದರು.ಡಾ.ನಾಗಪ್ಪ ಗೋಗಿ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರೆ, ವಿಜಯಕುಮಾರ ರೋಣದ ಪ್ರಾರ್ಥಿಸಿದರೆ, ಶೋಭಾದೇವಿ ಚೆಕ್ಕಿ ನಿರೂಪಿಸಿದರು ರೇವಣಸಿದ್ದಪ್ಪ ದುಕಾನ್ ವಂದಿಸಿದರು.