ಸಿದ್ದಸಿರಿ ಎಥಿನಾಲ್ ಉತ್ಪಾದನೆಗೆ ತಡೆ : ಕೇಂದ್ರ ಬಿಜೆಪಿ ಸರಕಾರ ವಿರುದ್ಧ ಸಿಡಿದ ಕಬ್ಬು ಬೆಳೆಗಾರ ರೈತ ಸೇನೆ ಸುಲೇಪೇಟ ಬಂದ್ ಮಾಡಿ 10 ಗಂಟೆ ಪ್ರಮುಖ ರಸ್ತೆ ಸಂಪರ್ಕ ಕಟ್ ಗೆ : ಜನರ ಪಡದಾಟ

ಸಿದ್ದಸಿರಿ ಎಥಿನಾಲ್ ಉತ್ಪಾದನೆಗೆ ತಡೆ : ಕೇಂದ್ರ ಬಿಜೆಪಿ ಸರಕಾರ ವಿರುದ್ಧ ಸಿಡಿದ ಕಬ್ಬು ಬೆಳೆಗಾರ ರೈತ ಸೇನೆ  ಸುಲೇಪೇಟ ಬಂದ್ ಮಾಡಿ 10 ಗಂಟೆ ಪ್ರಮುಖ ರಸ್ತೆ ಸಂಪರ್ಕ ಕಟ್ ಗೆ : ಜನರ ಪಡದಾಟ

ಸಿದ್ದಸಿರಿ ಎಥಿನಾಲ್ ಉತ್ಪಾದನೆಗೆ ತಡೆ : ಕೇಂದ್ರ ಬಿಜೆಪಿ ಸರಕಾರ ವಿರುದ್ಧ ಸಿಡಿದ ಕಬ್ಬು ಬೆಳೆಗಾರ ರೈತ ಸೇನೆ 

ಸುಲೇಪೇಟ ಬಂದ್ ಮಾಡಿ 10 ಗಂಟೆ ಪ್ರಮುಖ ರಸ್ತೆ ಸಂಪರ್ಕ ಕಟ್ ಗೆ : ಜನರ ಪಡದಾಟ 

ಚಿಂಚೋಳಿ : ಕೇಂದ್ರ ಬಿಜೆಪಿ ಸರಕಾರ ಸಿದ್ದಸಿರಿ ಎಥಿನಾಲ್ ಕಾರ್ಖಾನೆಗೆ ಎಥಿನಾಲ್ ಉತ್ಪಾದನೆಗೆ ತಡೆ ನೀಡಿ ಆದ್ದೇಶಿಸಿದರ ಹಿನ್ನಲೆಯನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆ ಸುಲೇಪೇಟ ಬಂದ್ ಗೆ ಕರೆ ನೀಡಿ ಬೃಹತ್ ಪ್ರತಿಭಟನೆ ನಡೆಸಿತ್ತು.

ತಾಲೂಕಿನ ಸುಲೇಪೇಟ ಗ್ರಾಮದ ಬಸವೇಶ್ವರ ವೃತ್ತದಲ್ಲಿ ಬೃಹತ್ ಟೆಂಟ್ ಜಡಿದ್ದು 10 ಗಂಟೆಗಳಕಾಲ ರೈತ ಸೇನೆ ಅಧ್ಯಕ್ಷ ವೀರಣ್ಣ ಗಂಗಾಣಿ ರಟಕಲ್, ಸಂಘಟಕ ಮಾರುತಿ ಗಂಜಗಿರಿ ಹಾಗೂ ಮಲ್ಲಿಕಾರ್ಜುನ ದೇಸಾಯಿ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆ ಪ್ರಮುಖ ರಸ್ತೆಗಳ ಸಂಪರ್ಕ ಸಂಪೂರ್ಣ ಬಂದ್ ಮಾಡಿ ಕೇಂದ್ರ ಬಿಜೆಪಿ ಸರಕಾರ ಕೈಗೊಂಡ ಅಸಮರ್ಪಕ ನಿರ್ಣಯ ವಿರುದ್ಧ ಕಬ್ಬು ಬೆಳೆಗಾರ ರೈತರು ಆಕ್ರೋಶ ವ್ಯಕ್ತಪಡಿಸಿದರು.

ಚಿಂಚೋಳಿ - ಕಾಳಗಿ ಮತ್ತು ಸೇಡಂ ತಾಲೂಕಿನ ರೈತರು ಸಿದ್ದಸಿರಿ ಎಥಿನಾಲ್ ಕಾರ್ಖಾನೆಗೆ ನಂಬಿಕೊಂಡು 40 ಸಾವಿರ ಹೆಕ್ಟರ್ ಕ್ಕೂ ಹೆಚ್ಚಿನ ಕಬ್ಬು ರೈತರು ಬೆಳೆದಿದ್ದಾರೆ. ಬೆಳೆದ ಕಬ್ಬು ಕಟ್ಟಾವಿಗೆ ಬಂದಿದೆ. ಸೂಕ್ತ ಸಮಯದಲ್ಲಿ ಕಬ್ಬು ಖರೀದಿಸದಿದ್ದರೆ ರೈತರು ಸಾಲದಲ್ಲಿ ಮುಳುಗಿ ಜೀವ ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗುವ ಸಂದರ್ಭ ಒಡ್ಡಿದೆ. ಕೇಂದ್ರ ಬಿಜೆಪಿ ಸರಕಾರ ಏಕಾಏಕಿ ಎಥಿನಾಲ್ ಉತ್ಪಾದನೆ ಬಂದ್ ಮಾಡಿ ಎಂದು ಆದೇಶ ಕೊಟ್ಟಿದೆ ಎಂಬ ನೆಪ್ಪದ ಕಾರಣದ ಒಡ್ಡಿ ಸಿದ್ದಸಿರಿ ಎಥಿನಾಲ್ ಕಾರ್ಖಾನೆ ಆಡಳಿತ ಮಂಡಳಿ ರೈತ ಬೆಳೆದ ಕಬ್ಬು ಖರೀದಿಸಲು ನಿರಾಕರಿಸುತ್ತಿದ್ದಾರೆ. ಸಿದ್ದಸಿರಿ ಕಾರ್ಖಾನೆಗೆ ನಂಬಿ ಬೆಳೆದ ಕಬ್ಬಿಗೆ ಕಾರ್ಖಾನೆ ಆಡಳಿತ ಮಂಡಳಿ ಕಬ್ಬು ಖರೀದಿ ಒಪ್ಪಂದ ಕೂಡ ಮಾಡಿಕೊಳ್ಳದೇ ಸಿದ್ದಸಿರಿ ಕಾರ್ಖಾನೆ ರೈತರಿಗೆ ಮೋಸ ಮಾಡಿದೆ ಎಂದು ಪ್ರತಿಭಟನೆಯಲ್ಲಿ ಕಬ್ಬು ಬೆಳೆಗಾರರು ಆರೋಪಿಸಿದರು. ಕೇಂದ್ರ ಬಿಜೆಪಿ ಸರಕಾರದ ಬಂದ್ ಆದೇಶ ಮತ್ತು ಸಿದ್ಧಸಿರಿ ಕಾರ್ಖಾನೆ ಆಡಳಿತ ಮಂಡಳಿ ಮಾಡಿಕೊಳ್ಳದ ಒಪ್ಪಂದದಿಂದಾಗಿ ನಂಬಿ ಬೆಳೆದ ಕಬ್ಬು ರೈತರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿಸಿದೆ. ಕಬ್ಬು ಬೆಳೆಗಾರರ ರೈತರಿಗೆ ಆದ ಅನ್ಯಾಯಕ್ಕೆ ನ್ಯಾಯ ಒದಗಿಸಲು ಜಿಲ್ಲಾಡಳಿತ ಕಬ್ಬು ಖರೀದಿಗೆ ಪರಿಯಾಯ ವ್ಯವಸ್ಥೆ ಮಾಡಿಕೊಡಬೇಕೆಂದು ಆಗ್ರಹಿಸಿ ನಡೆಸುತ್ತಿದ್ದ ಪ್ರತಿಭಟನೆಯ ಸಮಸ್ಯೆಗಳ ಮನವಿ ಪತ್ರ ತೆಗೆದುಕೊಳ್ಳಲು ಜಿಲ್ಲಾಧಿಕಾರಿಗಳೇ ಸ್ಥಳಕ್ಕೆ ಬರಬೇಕು ಎಂದು ಪಟ್ಟು ಹಿಡಿದು 10 ಗಂಟೆಗಳ ಕಾಲ ಎಲ್ಲಾ ಪ್ರಮುಖ ರಸ್ತೆ ಸಂಪರ್ಕಗಳಿಗೆ ಟ್ರ್ಯಾಕ್ಟರ್ ಗಳು ಅಡ್ಡ ನಿಲ್ಲಿಸಿ ರಸ್ತೆ ಸಂಚಾರ ಬಂದ್ ಮಾಡಿ ಪ್ರತಿಭಟನೆ ನಡೆಸಿದರು. ಆದರೆ ಕಬ್ಬು ಬೆಳೆಗಾರರ ಬೇಡಿಕೆಗಳ ಮನವಿ ಸ್ವೀಕರಿಸಲು 3 ಗಂಟೆಗೆ ಚಿಂಚೋಳಿ ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ ಅವರಿಗೆ ಕಳುಹಿಸಲಾಗಿತ್ತು. ಅವರ ಮನವೋಲಿಕೆಗೆ ಜಗ್ಗದ ಕಬ್ಬು ಬೆಳೆಗಾರರು ಜಿಲ್ಲಾಧಿಕಾರಿಗಳೇ ಬರಬೇಕೆಂದು ಪಟ್ಟು ಸಡಿಲಿಸದೇ ಬೇಡಿಕೆಗಳ ಕೂಗು ಮುಂದುವರೆಸಿದರು. ಸಂಜೆ 7 ಗಂಟೆಗೆ ಜಿಲ್ಲಾಧಿಕಾರಿಗಳ ಬದಲು ಸೇಡಂ ಸಹಾಯಕ ಆಯುಕ್ತ ಪ್ರಭು ರೆಡ್ಡಿ ಅವರು ಬಂದು ಮನವಿ ಸ್ವೀಕರಿಸಿ ಮಾತನಾಡಿದ ಅವರು, ಸಿದ್ದಸಿರಿ ಕಾರ್ಖಾನೆಗೆ ಎಥಿನಾಲ್ ಉತ್ಪಾದನೆಗೆ ತಡೆ ಆದೇಶ ನೀಡಿರುವ ನಿರ್ಧಾರ ಕೇಂದ್ರ ಸರಕಾರದ ಹೊರತು ರಾಜ್ಯ ಸರಕಾರದಲ್ಲ. ರಾಜ್ಯ ಸರಕಾರ ಮತ್ತು ಜಿಲ್ಲಾಡಳಿತ ರೈತರ ಜೊತೆಗೆ ಇದ್ದೇವೆ. ನಿಮ್ಮ ಸಮಸ್ಯೆಗಳ ಪರಿಹಾರ ಮತ್ತು ಸೂಕ್ತ ಬೆಂಬಲದೊಂದಿಗೆ ಕಬ್ಬು ಖರೀದಿಸಲು ಕೇಂದ್ರ ಸರಕಾರಕ್ಕೆ ಇಲ್ಲಿನ ಪರಿಸ್ಥಿತಿ ಬಗ್ಗೆ ಮನವಿರಿಕೆ ಮಾಡುವ ವರದಿ ರಾಜ್ಯ ಸರಕಾರ ಮತ್ತು ಜಿಲ್ಲಾಡಳಿತ ಸಲ್ಲಿಸಲಾಗುತ್ತದೆ. ಅಲ್ಲಿಯವರೆಗೆ ಚಿಂಚೋಳಿ - ಕಾಳಗಿ ಮತ್ತು ಸೇಡಂ ತಾಲೂಕಿನ ರೈತರೆಲ್ಲರೂ ತಾಳ್ಮೆ ಕಾಯ್ದುಕೊಳ್ಳಬೇಕು ಎಂದು ಆಯುಕ್ತ ಪ್ರಭು ರೆಡ್ಡಿ ಅವರು ಕಬ್ಬು ಬೆಳೆಗಾರರಲ್ಲಿ ಮನವಿ ಮಾಡಿದರು. ಆಯುಕ್ತರ ಮನವಿಗೆ ಸ್ಪಂದಿಸಿದ ರೈತರು ನಡೆಸುತ್ತಿದ್ದ ಪ್ರತಿಭಟನೆ ಅಹೋರಾತ್ರಿ ಧರಣಿ ಸತ್ಯಾಗ್ರಹಕ ಮಾರ್ಪಡಿಸಿ ಮುಂದುವರೆಸಲು ನಿರ್ಧರಿಸಿದ ಪಟ್ಟು ಕೈಬಿಟ್ಟು ಮೂರು ದಿನದ ಗಡುವು ನೀಡಿ ಪ್ರತಿಭಟನೆ ಹಿಂಪಡೆಯಲಾಯಿತು. ನಂತರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.

ಜನರ ಪಡದಾಟ : 

ಸಿದ್ದಸಿರಿ ಎಥಿನಾಲ್ ಕಾರ್ಖಾನೆ ಉತ್ಪಾದನೆ ಬಂದ್ ಹಿನ್ನಲೆಯಲ್ಲಿ ಕೇಂದ್ರ ಬಿಜೆಪಿ ಸರಕಾರದ ವಿರುದ್ಧ ಸಿಡಿದ್ದು ಪ್ರತಿಭಟನೆ ಕೈಗೊಂಡ ಹಿನ್ನಲೆಯಲ್ಲಿ ಚಿಂಚೋಳಿ - ಕಲಬುರಗಿ ಮತ್ತು ಚಿಂಚೋಳಿ - ಸೇಡಂ ಹಾಗೂ ಸುಲೇಪೇಟ - ಹುಮ್ನಾಬಾದ್ ಹಾಗೂ ಸೇಡಂ ಪ್ರಮುಖ ರಸ್ತೆಗಳು ಬೆಳಿಗ್ಗೆ 9 ಗಂಟೆಯಿಂದ ರಾತ್ರಿ 8 ಗಂಟೆಯ ವರೆಗೆ ಬಂದ್ ಮಾಡಿದ್ದ ಕಾರಣ ಸಂಚಾರಿ ಪ್ರಯಾಣಿಕರಿಗೆ ಮತ್ತು ಶಾಲಾ - ಕಾಲೇಜು ವಿದ್ಯಾರ್ಥಿಗಳಿಗೆ ಅಸ್ತವ್ಯಸ್ಥ ಉಂಟಾಯಿತು.

ಪ್ರತಿಭಟನೆಗೆ ಬೆಂಬಲಿಸಿ ವಕೀಲರ ಸಂಘದ ಅಧ್ಯಕ್ಷ ಶಶಿಕಾಂತ ಆಡಕಿ, ನಿಡಗುಂದಾ ಕಾಂಚಾಳ ಕುಂಟಿ ಮಠದ ಕರುಣೇಶ್ವರ ಸ್ವಾಮಿ, ಚಿಮ್ಮಾಇದ್ಲಾಯಿ ಮಹಾತೇಶ್ವರ ಶಿವಾಚಾರ್ಯರು ಮಾತನಾಡಿದರು. ಈ ಸಂದರ್ಭದಲ್ಲಿ ಪ್ರಮುಖರಾದ ಶರಣಪ್ಪ ದೇಸಾಯಿ, ರುದ್ರಶೆಟ್ಟಿ ಪಡಶೆಟ್ಟಿ, ಚೇತನ ಅಣವಾರ, ಮಾರುತಿ ದೇಸಾಯಿ, ವಕೀಲ ನಂದಿಕುಮಾರ ಪಾಟೀಲ್, ಗೋಪಾಲ ಎಂ. ಪಿ, ಲಾಲಪ್ಪ ದಸ್ತಾಪೂರ್, ವಿನೋದ ಓಂಕಾರ್ ಅವರು ಇದ್ದರು.