ನ. 15ರಂದು ಹರಸೂರಿನಲ್ಲಿ ವಿಶ್ವಗುರು ಬಸವೇಶ್ವರರ ಅಶ್ವಾರೂಢ ಮೂರ್ತಿ ಅನಾವರಣ

ನ. 15ರಂದು ಹರಸೂರಿನಲ್ಲಿ ವಿಶ್ವಗುರು ಬಸವೇಶ್ವರರ ಅಶ್ವಾರೂಢ ಮೂರ್ತಿ ಅನಾವರಣ

ನ. 15ರಂದು ಹರಸೂರಿನಲ್ಲಿ ವಿಶ್ವಗುರು ಬಸವೇಶ್ವರರ ಅಶ್ವಾರೂಢ ಮೂರ್ತಿ ಅನಾವರಣ

ನ. 14 ಮತ್ತು 15ರಂದು ಮೂರ್ತಿ ಅನಾವರಣ ಹಾಗೂ ಲಕ್ಷದೀಪೋತ್ಸವ ಕಾರ್ಯಕ್ರಮ

ಕಲಬುರಗಿ: ಜಿಲ್ಲೆಯ ಹರಸೂರು ಗ್ರಾಮದಲ್ಲಿ ನವೆಂಬರ್ 14 ಮತ್ತು 15ರಂದು ವಿಶ್ವಗುರು ಬಸವೇಶ್ವರರ ಅಶ್ವಾರೂಢ ಮೂರ್ತಿ ಅನಾವರಣ ಹಾಗೂ ಲಕ್ಷದೀಪೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಶರಣ ಚಿಂತಕ ಆರ್.ಜಿ. ಶೆಟಗಾರ್ ತಿಳಿಸಿದರು.

ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಮಾರು ₹40 ಲಕ್ಷ ವೆಚ್ಚದಲ್ಲಿ 14 ಅಡಿ ಎತ್ತರದ ಅಶ್ವಾರೂಢ ವಿಶ್ವಗುರು ಬಸವಣ್ಣನವರ ಮೂರ್ತಿಯನ್ನು ನಿರ್ಮಿಸಲಾಗಿದೆ. ನವೆಂಬರ್ 15ರಂದು ಮೂರ್ತಿಯನ್ನು ವಿಧ್ಯುಕ್ತವಾಗಿ ಅನಾವರಣಗೊಳಿಸಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಮುಕ್ತಂಪುರ ಬಬಲಾದ ಮಠದ ಗುರುಪಾದಲಿಂಗ ಶಿವಯೋಗಿಗಳು, ಸಿದ್ದರಾಮ ಶಿವಾಚಾರ್ಯರು, ಹರಸೂರ ಕಲ್ಮಠದ ಶರಣಬಸವ ಶಿವಾಚಾರ್ಯರು, ತಾವರಗೇರಾದ ಶಿವಯೋಗಿ ಸಿದ್ದಾರೂಢ ಸ್ವಾಮೀಜಿ ಹಾಗೂ ವಿಶ್ವನಾಥ ಶಾಸ್ತ್ರಿ ಅರಸೂರು ಸಾನಿಧ್ಯ ವಹಿಸಲಿದ್ದಾರೆ.

ಸಚಿವ ಈಶ್ವರ ಖಂಡ್ರೆ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದು, ಶಾಸಕ ಬಿ.ವೈ. ವಿಜಯೇಂದ್ರ ಅವರು ದೀಪ ಬೆಳಗಿಸಲಿದ್ದಾರೆ. ಶಾಸಕ ಬಸವರಾಜ ಮತ್ತಿಮಡು ಅಧ್ಯಕ್ಷತೆ ವಹಿಸಲಿದ್ದಾರೆ. ಶಾಸಕರಾದ ಶರಣು ಸಲಗರ, ಅವಿನಾಶ್ ಜಾಧವ್, ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌದರಿ, ಮಾಜಿ ಶಾಸಕ ದತ್ತಾತ್ರೇಯ ಪಾಟೀಲ್, ಶರಣಕುಮಾರ ಮೋದಿ, ಚಂದು ಪಾಟೀಲ್, ಅಮರನಾಥ್ ಪಾಟೀಲ್, ಅಶೋಕ ಬಗಲಿ ಸೇರಿದಂತೆ ನಾಡಿನ ಅನೇಕ ಹರಗುರು ಚರಮೂರ್ತಿಗಳು ಹಾಗೂ ಗಣ್ಯರು ಭಾಗವಹಿಸಲಿದ್ದಾರೆ.

ಪ್ರಸ್ತುತ ಮಳೆ ಕೊರತೆಯಿಂದ ಬರಗಾಲದ ಪರಿಸ್ಥಿತಿ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಆಡಂಬರದ ಕಾರ್ಯಕ್ರಮಗಳನ್ನು ಆಯೋಜಿಸದೆ, ಸರಳವಾಗಿ ಹಾಗೂ ಸಂಕ್ಷಿಪ್ತವಾಗಿ ಮೂರ್ತಿ ಅನಾವರಣಗೊಳಿಸಲು ನಿರ್ಧರಿಸಲಾಗಿದೆ ಎಂದು ಆರ್.ಜಿ. ಶೆಟಗಾರ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕೆ.ಸಿ. ಪಾಟೀಲ್, ಸುರೇಶ ಹಿರೇಮಠ, ರಾಜಶೇಖರ, ವೀರಣ್ಣ ಸೇರಿದಂತೆ ಇತರರು ಉಪಸ್ಥಿತರಿದ್ದರು.