ಹಲ್ಲೆಗೆ ಯತ್ನ: ಆರೋಪಿಗಳ ವಿರುದ್ಧ ಕಾನೂನು ಕ್ರಮಕ್ಕೆ ಫಾತೀಮಾ ಬಿ. ಆಗ್ರಹ

ಹಲ್ಲೆಗೆ ಯತ್ನ: ಆರೋಪಿಗಳ ವಿರುದ್ಧ ಕಾನೂನು ಕ್ರಮಕ್ಕೆ ಫಾತೀಮಾ ಬಿ. ಆಗ್ರಹ

ಹಲ್ಲೆಗೆ ಯತ್ನ: ಆರೋಪಿಗಳ ವಿರುದ್ಧ ಕಾನೂನು ಕ್ರಮಕ್ಕೆ ಫಾತೀಮಾ ಬಿ. ಆಗ್ರಹ

ಕಲಬುರಗಿ: ನಗರದ ಬಡೇಪೂರ ಕೊಳಚೆ ನಿರ್ಮೂಲನಾ ಮಂಡಳಿ ಬಡಾವಣೆಯಲ್ಲಿ ವಾಸವಾಗಿರುವ ಫಾತೀಮಾ ಬಿ. (38) ಅವರ ಮೇಲೆ ತಾಜೋದ್ದೀನ್, ಸೇರಿದಂತೆ 10ರಿಂದ 12 ಜನರು ಹಲ್ಲೆ ನಡೆಸಿದ್ದಾರೆ ಎಂದು ಫಾತೀಮಾ ಬಿ. ಆರೋಪಿಸಿದ್ದಾರೆ.

 ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಾವು ಹಾಗೂ ತಮ್ಮ ಮಗಳು ಶೇಖ್ ಹಸೀನಾ ಕಳೆದ ಸುಮಾರು 23 ವರ್ಷಗಳಿಂದ ಸರ್ಕಾರದಿಂದ ಮಂಜೂರಾದ ಮನೆಯಲ್ಲಿ ವಾಸವಾಗಿದ್ದು, ಇದೇ ಆಸ್ತಿಯನ್ನು ನಕಲು ಮಾಡಿ ತಮಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿದರು.

ಘಟನೆಯಿಂದ ಗಾಯಗೊಂಡ ತಾವು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾಗಿ ತಿಳಿಸಿದರು. ತಮ್ಮ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿರುವ ಆರೋಪಿಗಳ ವಿರುದ್ಧ ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳಿಗೆ ಈಗಾಗಲೇ ದೂರು ಸಲ್ಲಿಸಿದ್ದು, ಈ ಕುರಿತು ಸೂಕ್ತ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಫಾತೀಮಾ ಬಿ. ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮೋಹಿನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.