ಅಖಿಲ ಭಾರತ ಮಟ್ಟದ ಸಿಎ ಫೌಂಡೇಶನ್ ಪರೀಕ್ಷೆ : ಪ್ರತೀಕ್ ನಾಯನೂರ ಸಾಧನೆಗೆ ಕಾಲೇಜು ಮೆಚ್ಚುಗೆ

ಅಖಿಲ ಭಾರತ ಮಟ್ಟದ ಸಿಎ ಫೌಂಡೇಶನ್ ಪರೀಕ್ಷೆ :  ಪ್ರತೀಕ್ ನಾಯನೂರ ಸಾಧನೆಗೆ ಕಾಲೇಜು ಮೆಚ್ಚುಗೆ

ಅಖಿಲ ಭಾರತ ಮಟ್ಟದ ಸಿಎ ಫೌಂಡೇಶನ್ ಪರೀಕ್ಷೆ : ಪ್ರತೀಕ್ ನಾಯನೂರ ಸಾಧನೆಗೆ ಕಾಲೇಜು ಮೆಚ್ಚುಗೆ

ಚಿಂಚೋಳಿ : 

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಬಿ.ಕಾಂ ಪ್ರಥಮ ಸೆಮಿಸ್ಟರ್ ವಿದ್ಯಾರ್ಥಿ ಪ್ರತೀಕ್ ನಾಯನೂರ ಅವರು ಅಖಿಲ ಭಾರತ ಮಟ್ಟದಲ್ಲಿ ನಡೆದ ಸಿಎ ಫೌಂಡೇಶನ್ (CA Foundation) ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಕಾಲೇಜಿಗೆ ಕೀರ್ತಿ ತಂದಿರುವ ಹಿನ್ನಲೆಯಲ್ಲಿ ಕಾಲೇಜಿನ ಪ್ರಾಂಶುಪಾಲ ಪ್ರೊ. ಬಸವರಾಜ ಕೋನೇರಿ ಅವರು ಸನ್ಮಾನಿಸಿ ಗೌರವಿಸಿದರು. 

ವಿದ್ಯಾರ್ಥಿ ಪ್ರತೀಕ್ ಸಾಧನೆಗೆ ವಾಣಿಜ್ಯ ವಿಭಾಗದ ಮುಖ್ಯಸ್ಥ ವಹೀದ ಪಟೇಲ್ ಹಾಗೂ ಕಾಲೇಜಿನ ಎಲ್ಲಾ ಉಪನ್ಯಾಸಕ ಬೋಧಕೇತರ ವೃಂದದವರು ಸಿಹಿ ತಿನಿಸಿ ಅಭಿನಂದಿಸಿದರು. 

ವಿದ್ಯಾರ್ಥಿಯ ಈ ಯಶಸ್ಸಿನ ಸಾಧನೆ ಇತರ ವಿದ್ಯಾರ್ಥಿಗಳಿಗೆ ಸ್ಫೂರ್ತಿಯ ಸೆಲೆಯಾಗಲಿ ಎಂದು ಶುಭ ಹಾರೈಸಿದರು.